ಡೆಂಗಿ ಮತ್ತು ಚಿಕೂನ್ ಗುನ್ಯಾ ಜ್ವರ; ಜನಜಾಗೃತಿ ಕಾರ್ಯಕ್ರಮ

Source: sonews | By sub editor | Published on 20th June 2018, 8:14 PM | State News | Don't Miss |

ಶ್ರೀನಿವಾಸಪುರ: ಡೆಂಗಿ ಮತ್ತು ಚಿಕೂನ್ ಗುನ್ಯಾ ಜ್ವರ ನಿಯಂತ್ರಣಕ್ಕೆ ಮುನ್ನಚ್ಚೆರಿಕೆ ವಹಿಸಬೇಕೆಂದು ತಾಲ್ಲೂಕು ಸರ್ಕಾರಿ ಆಸ್ಪತ್ರೆ, ಹಾಗು ತಾಲ್ಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಲೇಜು ವಿಧ್ಯಾರ್ಥಿನಿಯರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. 
   

ಶ್ರೀನಿವಾಸಪುರ ಪ್ರಮುಖ ರಸ್ತೆಗಳಲ್ಲಿ ಜಾತಾ ನಡೆಸಿದ ವಿಧ್ಯಾರ್ಥಿನಿಯರು  ಜಾಗೃತಿ ಮೂಡಿಸುವ ಕರಪತ್ರಗಳನ್ನು ಹಂಚುವ ಜೊತೆ, ತೆರೆದಿಟ್ಟ ನೀರಿನ ತೊಟ್ಟಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಪುನಃ ಭರ್ತಿ ಮಾಡಿಕೊಂಡು ಮುಚ್ಚಳದಿಂದ ಮುಚ್ಚುವುದು. ಬಯಲಿನಲ್ಲಿ ಟೈರುಗಳನ್ನು ಬಿಸಾಡದೇ ಅವುಗಳಲ್ಲಿ ನೀರು ಸಂಗ್ರಹವಾಗದಂತೆ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿಡುವುದು ಇಲ್ಲವೇ ಆದಷ್ಟು ಶೀಘ್ರವಾಗಿ ವಿಲೇವಾರಿ ಮಾಡುವುದು, ಮನೆಯ ಸುತ್ತ ಮುತ್ತಾ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಹಾಗು ಇವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅಥವಾ ಸೂಕ್ತವಾಗಿ ವಿಲೇವಾರಿ ಮಾಡುವುದು, ಪ್ರತಿಯೊಬ್ಬರು ಸೊಳ್ಳೆ ಪರದೆ ಬಳಸುವುದು, ಹಾಗು ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದರ ಬಗ್ಗೆ ಘೋಷಣೆಗಳನ್ನು ಕೂಗಿ ಜನರಲ್ಲಿ ಅರಿವು ಮೂಡಿಸುವ ಮೂಲಕ ಖಾಯಿಲೆ ಬರುವುದಕ್ಕೆ ಮುಂಚೆ ಮುನ್ನೆಚ್ಚರಿಕೆ ಅಥವಾ ಬಂದ ಕೂಡಲೆ ವೈಧ್ಯರನ್ನು ಸಂಪರ್ಕಿಸುವುದು ಇತ್ಯಾದಿ ಕುರಿತು ಮಾಹಿತಿ ನೀಡಿದರು.
 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...