ಕಾಂಗ್ರೇಸ್ ಪಕ್ಷ ಅಂಬೇಡ್ಕರನ್ನು ಅವಮಾನಿಸುತ್ತಿದೆ-ಯಡಿಯೂರಪ್ಪ

Source: sonews | By Staff Correspondent | Published on 14th January 2018, 5:44 PM | State News | Don't Miss |

ಶ್ರೀನಿವಾಸಪುರ: ಭಾರತ ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾದ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರಿಗೆ ಭಾರತ ರತ್ನ ಪ್ರಶಸ್ತಿ ನೀಡದೇ ಅವಮಾನಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಯಾರೂ ತಮ್ಮ ಮತಗಳನ್ನು ಹಾಕಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಶ್ರೀನಿವಾಸಪುರದಲ್ಲಿ ನಡೆದ ಪರಿವರ್ತನಾ ಯಾತ್ರೆಯ ವೇಳೆ ಮಾತನಾಡಿದ ಯಡ್ಡಿ, ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ರನ್ನು ರಾಜಕೀಯವಾಗಿ ಅವಮಾನಿಸಿತ್ತು. ಹೀಗಾಗಿ ಯಾವುದೇ ದಲಿತರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ನೀಡಬಾರದು 

ಕಳೆದ ಬಾರಿ ದಲಿತರು ಮೋಸಹೋಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದು ತಪ್ಪು, ಮುಂದೆಂದೂ ಅಂತಹ ತಪ್ಪುಗಳಾಗದಿರಲಿ ಎಂದಿದ್ದಾರೆ.

ಅಲ್ಪ ಸಂಖ್ಯಾತರ ಅಭಿವೃದ್ದಿಗೆ ಹೆಚ್ಚು ಒತ್ತು ಕೊಟ್ಟ ಕೀರ್ತಿ ಬಿ ಜೆ ಪಿ ಸರ್ಕಾರದ್ದು ಹಜ್ ಭವನ ನಿರ್ಮಾಣಕ್ಕೆ 40 ಕೋಟಿ ಹಣ ನೀಡಲಾಯಿತು ಪ್ರತಿ ತಾಲೂಕು ಕೇಂದ್ರದಲ್ಲಿ ಶಾದಿಮಹಲ್ ನಿರ್ಮಾಣ ಮಾಡಿಸಿದ್ದು ನಮ್ಮ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ  ಕಾರ್ಯಕ್ರಮದಲ್ಲಿ ಮಾತನಾಡಿ 

ಹಿಂದುಳಿದ ವರ್ಗಗಳ ಅಭಿವೃದ್ಧಿ ಎಸ್ಸಿ ಎಸ್ಟಿ ಜನಾಂಗಗಳ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಿದ್ದು ಭಾರತೀಯ ಜನತಾ ಪಕ್ಷ ಎಂದ ಅವರು ಜನ ಹಿತ ಮರೆತು ಅಡಳಿತ ನಡೆಸುತ್ತಿರುವ ಸಿದ್ದರಮಯ್ಯನ ಕಾಂಗ್ರೆಸ್ ಸರ್ಕಾರವನ್ನು ಜನ ಕಿತ್ತು ಹಾಕುವಂತೆ ಕರೆ ಇತ್ತರು ರೈತರಿಗೆ ಎರಡು ಬಾರಿ ಸಾಲಮನ್ನಾ ಮಾಡಿದೆ ಅದರೆ ಕಾಂಗ್ರೆಸ್ ಸರ್ಕಾರ ಸಾಲಾ ಮನ್ನಾ ಮಾಡು ಅಂದರೆ ಕೇಂದ್ರ ಸರ್ಕಾರದ ಕಡೆ ಕೈ ತೊರಿಸುತ್ತಾರೆ ಈ ಭಾಗದ ಮಾವು ಬೆಳೆಗಾರರಿಗೆ ನೆರವಾಗುವಂತೆ ಮಾವು ಅಭಿವೃದ್ಧಿ ಮಂಡಳಿ ನಮ್ಮ ಅವಧಿಯಲ್ಲೆ ಆಗಿದ್ದು ಹಾಲು ಉತ್ಪಾದಕರ ಕೈ ಹಿಡಿಯಲು ಪ್ರೋತ್ಸಾಹ ಧನ ನೀಡಿದ್ದು ನಮ್ಮ ಸರ್ಕಾರ ಇವುಗಳನೆಲ್ಲಾ ನಿರ್ಲಕ್ಷ ಮಾಡಿದ ಕಿರ್ತಿ ಸಿದ್ದರಾಮಯ್ಯನ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.

ನಾನು ಮುಖ್ಯಮಂತ್ರಿ ಅಗಿದ್ದಾಗ ರೈತರಿಗೆ 10 ರಿಂದ 12 ಗಂಟೆಗಳ ಕಾಲ ಉಚಿತ ವಿದ್ಯತ್ ನೀಡಲಾಯಿತು ಈಗಿನ ಸರ್ಕಾರ ಜನರ ಜೀವನದ ಜೋತೆ ಚಲ್ಲಾಟವಾಡುತ್ತಿದೆ ಅತಿ ಹೆಚ್ಚು ಕೆರೆ ಕುಂಟೆಗಳನ್ನು ಹೊಂದಿರುವಂತ ವಿಭಜಿತ ಕೋಲಾರ ಜಿಲ್ಲೆಯ ಕೆರೆಗಳಿಗೆ ನೀರು ತರುವ ಮಹತ್ತರ ಯೋಜನೆ ಎತ್ತಿನ ಹೋಳೆ ಯೋಜನೆಯನ್ನು ಮೊದಲ ಹಂತದಲ್ಲಿ ಜಾರಿಗೆ ತಂದ ಹೆಮ್ಮೆ ನಮ್ಮ ಸರ್ಕಾರದ್ದೆ ಹಾಗೆ ಶ್ರೀನಿವಾಸಪುರ ಪುರಸಭೆಯನ್ನು ಮೆಲ್ದರ್ಜೆಗೆ ಏರಿಸಿದ್ದು ಅನ್ನ ಅವಧಿಯಲ್ಲಿ ಈ ಬಗ್ಗೆ ಯಾವುದೆ ಅನುಮಾನ ಇಲ್ಲ ಎಂದ ಅವರು ಮುಂಬರುವ ಚುನಾವಣೆಯಲ್ಲಿ ಬಿ ಜೆ ಪಿ ಯಿಂದ ಯಾರೆ ಅಬ್ಯರ್ಥಿಯಾದರು ಅವರನ್ನು ಗೆಲ್ಲಿಸುವ ಜವಬ್ದಾರಿ ಶ್ರೀನಿವಾಸಪುರ ಕ್ಷೇತ್ರದ ಜನತೆಯದಾಗಬೇಕು ಎಂದರು.

ಕೇಂದ್ರ ಸಚಿವ ಸದಾನಂದ ಗೌಡ ಮಾತನಾಡಿ ಇಲ್ಲಿನ ಜನ ಫ್ಲೋರೈಡ್ ನೀರು ರಹಿತ ನೀರು ಕುಡಿಯಲಿ ಎಂಬ ಉದ್ದೇಶದಿಂದ ನೇತ್ರಾವತಿ ತಿರವು ಯೋಜನೆಯಾದ ಎತ್ತಿನ ಹೋಳೆ ಯೋಜನೆ ಕಾರ್ಯಕ್ರಮ ರೋಪಿಸಿ ಹಣ ಬಿಡುಗಡೆ ಮಾಡಿದ್ದು ಭಾರತೀಯ ಜನತಾ ಪಕ್ಷದ ಅವಧಿಯಲ್ಲಿ ಆದರೆ ಈಗಿನ ಸರ್ಕಾರ ಹಣ ಲೂಟಿ ಮಾಡಲು ಆ ಯೋಜನೆಯನ್ನು ಬಳಸಿಕೊಳ್ಳುತ್ತಿದೆ ಎಂದ ಅವರು ರಾಜ್ಯದಲ್ಲಿ ಮಹಿಳೆಯರು ಮಕ್ಕಳು ಅಬದ್ರತೆಯಲ್ಲಿ ಜೀವನ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯ ಸರ್ಕಾರದ ಕಾರ್ಯವೈಕರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು  ಬಡವರ ಹಿಂದುಳಿದ ಹಾಗು ದಲಿತ ವರ್ಗದ ಜನರ ಅಭಿವೃದ್ಧಿಗೆ ಯಡಿಯೂರಪ್ಪ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿತ್ತು ಮೂಲಭೂತ ಸೌಕರ್ಯಗಳ ಒದಗಿಸಲು ಹೆಚ್ಚು ಒತ್ತು ಕೊಟ್ಟಿದ್ದು ಭಾರತೀಯ ಜನತಾ ಪಕ್ಷ ಎಂದು ಹೇಳಿದರು.ಆರ್ ಆಶೋಕ್ ಮಾಜಿ ಉಪ ಮುಖ್ಯಮಂತ್ರಿ ಆಶೊಕ್ ಮಾತನಾಡಿ ಕರ್ನಾಟಕದ ಅಭಿವೃದ್ಧಿಗೆ ನರೇಂದ್ರ ಮೋದಿ ನೆತೃತ್ವದ ಕೇಂದ್ರ ಸರ್ಕಾರ 3 ಲಕ್ಷ ಕೋಟಿ ನೆರೆವು ನೀಡಿರುತ್ತದೆ ಈ ಬಗ್ಗೆ ಭಾರತದ ಯಾರೆ ಪ್ರಜೆಯಾದರು ಲೆಕ್ಕ ಕೇಳಬಹುದು ಈ ಬಗ್ಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಲೆಕ್ಕ ನೀಡುವಂತೆ ಕೇಳಿದರೆ ನಿನ್ಯಾರು ಎಂಬಂತೆ ಉದ್ದಟತನದಿಂದ ಮಾತನಾಡುತ್ತಾರೆ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇವಲ 1 ಲಕ್ಷ ಕೋಟಿ ನೆರವು ನೀಡಿತ್ತು ಎಂದು ತಾರತಮ್ಯದ ಬಗ್ಗೆ ಹೇಳಿದ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ಜಾತಿ ಜಾತಿಗಳ ಹಾಗು ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಆ ವ್ಯಕ್ತಿಯನ್ನು ಮನೆಗಳಿಗೆ ಕರೆ ತಂದರೆ ಮನೆಯ ಸದಸ್ಯರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಹೀಗಾಗಿ ಆತನನ್ನು ಬೆಂಕಿ ಹಚ್ಚುವ ರಾಮಯ್ಯ ಅನ್ನಬೇಕು ಎಂದರು, ಎತ್ತಿನ ಹೋಳೆ ಯೋಜನೆ ಹೆಸರಿನಲ್ಲಿ ಹಣ ಲೂಟಿಯಾಗುತ್ತಿದೆ ಯೋಜನೆ ಕಾಮಗಾರಿಗೆ ಮುಂಚಿತವಾಗಿ ಪೈಪುಗಳಲ್ಲಿ ಇಲ್ಲಿನ ಜನಪ್ರತಿನಿಧಿಗಳು ಕಮೀಷನ್ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು, ಕೇಂದ್ರದಲ್ಲಿ ಬಿ ಜೆ ಪಿ ಸರ್ಕಾರ ಇದೆ ರಾಜ್ಯದಲ್ಲೂ ಬಿ ಜೆ ಪಿ ಸರ್ಕಾರ ರಚನೆಯಾದರೆ ರಾಜ್ಯ ಇನ್ನಷ್ಟು ಉತ್ತಮ ರಿತಿಯಲ್ಲಿ ಅಭಿವೃದ್ಧಿಯಾಗಲಿದೆ ಎಂದರು ಕಾರ್ಯಕ್ರಮದಲ್ಲಿ ಸಂಸದ ಪಿ ಸಿ ಮೋಹನ್, ಪರಿಷತ್ ಸದಸ್ಯ ವೀರಯ್ಯ ಹನುಮಂತರಾಯಪ್ಪ, ಹೆಬ್ಬಾಳ ಶಾಸಕ ವೈ ಎ ನಾರಯಣಸ್ವಾಮಿ,ಸತ್ಯನಾರಯಣ್ ಮಹೇಶ್,ಚಿ ನಾ ರಾಮು ಸ್ಥಳಿಯ ಮುಖಂದರಾದ ಡಾ.ವೇಣುಗೋಪಾಲ್ ,ಎಸ್ ಎಲ್ ಎನ್ ಮಂಜುನಾಥ್,ಜಯರಾಮರೆಡ್ಡಿ, ಶಿವಣ್ಣ ಮತ್ತಿತರಿದ್ದರು.

ವರದಿ ಶಬ್ಬೀರ್ ಅಹ್ಮದ್  ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...