ಶ್ರೀನಿವಾಸಪುರ ಪುರಸಭೆ ಉಪಚುನಾವಣೆ;ಜೆ.ಡಿ.ಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗೆ ಗೆಲುವು

Source: sonews | By Staff Correspondent | Published on 20th June 2018, 8:05 PM | State News | Don't Miss |

ಶ್ರೀನಿವಾಸಪುರ:  ತಾಲ್ಲೂಕಿನಲ್ಲಿ ಕಾಂಗ್ರೆಸ್ ಆಡಳಿತದ ಅಲೆಯ ನಡುವೆಯು ಪುರಸಭೆಯ 12ನೇ ವಾರ್ಡಿಗೆ ನಡೆದ ಉಪ ಚುನಾವಣೆಯ ಪಲಿತಾಂಶದಲ್ಲಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಆರ್. ಇಮ್ರಾನ್‍ಪಾಷಾ ರವರು  ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಆರ್.ಚಾಂದಪಾಷಾ ರವರ ವಿರುದ್ದ  39 ಮತಗಳ ಅಂತರದಿಂದ ಗೆಲುವಿನ ಮಾಲೆ ಧರಿಸುವ ಮೂಲಕ ಜೆಡಿಎಸ್ ಪಾಳೆಯದಲ್ಲಿ ನಗುವಿನ ಅಲೆ ಮೂಡಿಸಿದ್ದಾರೆ. 

ಶ್ರೀನಿವಾಸಪುರ ಪುರಸಭೆಯ ತೆರವಾಗಿದ್ದ 12ನೇ ವಾರ್ಡಿನ ಸದಸ್ಯ ಸ್ಥಾನಕ್ಕೆ ಜೂನ್ 18 ರಂದು ನಡೆಸಲಾಗಿತ್ತು ಈ ಸಂಬಂದ   ಇದೇ ಜೂನ್ 20 ರಂದು ಬುಧವಾರ ತಾಲ್ಲೂಕು ಕಛೇರಿಯಲ್ಲಿ ಮತ ಎಣಿಕೆ  ನಡೆಸಲಾಗಿ ಆರ್. ಇಮ್ರಾನ್ ಪಾಷಾ ರವರು 336 ಮತಗಳನ್ನು ಗಳಿಸಿ ಆಯ್ಕೆಯಾಗಿರುತ್ತಾರೆ. ಅದೇ ರೀತಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಆರ್. ಚಾಂದ್‍ಪಾಷಾ ರವರು 297 ಮತಗಳನ್ನು ಗಳಿಸಿ ಪರಾಭವ ಹೊಂದಿದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಷೇಕ್ ಷಪೀವುಲ್ಲಾ ರವರು 38 ಮತಗಳನ್ನು ಪಡೆಯುವ ಮೂಲಕ 3ನೇ ಸ್ಥಾನವನ್ನು ಪಡೆಯುವಂತಾಗಿದೆ. ಕಾಂಗ್ರೆಸ್ ಆಡಳಿತ ಹೊಂದಿರುವ ಪುರಸಭೆ ಮತ್ತೊಂದಡೆ ಕಾಂಗ್ರೆಸ್ ಶಾಸಕರು ಇದ್ದರೂ ಸಹ  ಈ ಎಲ್ಲಾ ಅಲೆಯ ಮಧ್ಯೆ ಜೆಡಿಎಸ್ ಬೆಂಬಲದಿಂದ ಅಖಾಡಕ್ಕೆ ಇಳಿದಿದ್ದ ಇಮ್ರಾನ್ ಪಾಷಾ ಗೆಲವು  ಅದೂ ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದು ಇವೆಲ್ಲದರ ಮಧ್ಯೆ ಕಾಂಗ್ರೆಸ್ ಪಕ್ಷಕ್ಕೆ ಒಂದು ರೀತಿ ಮುಜಗರ ತರುವಂತಾಗಿದೆ. 

ಆದರೂ ಪುರಸಭೆಯ ಆಡಳಿತ ಅವಧಿ ಕೇವಲ 9 ತಿಂಗಳು ಬಾಕಿ ಇದೆ ಎನ್ನಲಾಗಿ ಅಭಿವೃದ್ದಿ ಕೆಲಸಗಳು ಏನು ಮಾಡಲು ಸಾದ್ಯ ಎನ್ನುವ ಮಾತು ಸಹ ಕೇಳಿಬರಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಯಾವುದೇ ಚುನಾವಣೆಯಾಗಲಿ ಶ್ರೀನಿವಾಸಪುರದಲ್ಲಿ ಪಕ್ಷಗಳ ಪ್ರತಿಷ್ಟೆ ಅಷ್ಟಕಷ್ಟೇ ಎಂದರೂ ವ್ಯಕ್ತಿಗಳ ಪ್ರಭಾವವೇ ಹೆಚ್ಚು ಎಂಬ ಮಾತಿಗೆ ಕೆ.ಆರ್.ರಮೇಶ್‍ಕುಮಾರ್ ಹಾಗು ಜಿ.ಕೆ.ವೆಂಕಟಶಿವಾರೆಡ್ಡಿ ರವರು ಸಾಕ್ಷಿಯಾಗಿ ನಿಲ್ಲುತ್ತಾರೆ. ಇಂತಹ ವ್ಯಕ್ತಿಗಳ  ಪ್ರಭಾವದಲ್ಲಿ  ಸ್ಥಳಿಯ ಚುನಾವಣೆಗಳಲ್ಲಿ ಹೆಸರು ಪ್ರಸ್ಥಾಪ ಮಾಡಿದರೂ ಸಂಬಂದಗಳು ಸಹ ಸೇರಿ ವ್ಯಕ್ತಿಯನ್ನು ಗೆಲ್ಲಿಸುವಂತಾಗಿದೆ. 

ಪುರಸಭೆಯ ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಆರ್.ಇಮ್ರಾನ್ ರವರಿಗೆ ತಮ್ಮ ಸಂಬಂದಿಕರ ಜೊತೆ ಜೆಡಿಎಸ್ ಮತಗಳು ಸಿಗುವ ಮೂಲಕ ಜಯಮಾಲೆ ತಮ್ಮದಾಗಿಸಿಕೊಂಡಿದ್ದಾರೆ. ಇತ್ತೀಚಿಗೆ ವಿಧಾನಸಭಾ ಚುನಾವಣೆ ಹಾಗು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗಳಲ್ಲಿ ಸೋಲು ಕಂಡಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಇಮ್ರಾನ್ ಪಾಷಾ ರವರ ಗೆಲುವಿನಿಂದ ಎಲ್ಲೋ ಒಂದು ಕಡೆ ಖುಷಿ ಪಡುವಂತಾಗಿದೆ. ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಶತಾಯ ಗೆಲವು ಸಾಧಿಸಲಿದೆ ಎಂಬ ವಿಶ್ವಾಸ ಇರಿಸಿಕೊಂಡಿತ್ತು. ಕಾರಣ ಇದೇ ವಾರ್ಡಿನಿಂದ ಮುಕ್ತಿಯಾರ್ ಅಹಮದ್ (ಬಡಾ ಮುಕ್ತಿಯಾರ್) ರವರು ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದರು ನಂತರ ಅವರು ಪುರಸಭೆಯ ಅಧ್ಯಕ್ಷರಾಗಿಯೂ  ಸೇವೆ ಸಲ್ಲಿಸಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಸೂಚನೆಯಂತೆ ರಾಜನಾಮೆ ಸಲ್ಲಿಸಿ ಸದಸ್ಯರಾಗಿ ಉಳಿದುಕೊಂಡಿದ್ದರು. ಆದರೆ ಅನಾರೋಗ್ಯದ ನಿಮಿತ್ತ ಅವರು ನಿಧನಹೊಂದಿದ್ದರು ಇದರಿಂದ ಮತ್ತೆ ಈ ಸ್ಥಾನ ಕಾಂಗ್ರೆಸ್ ಪಾಲಾಗುತ್ತದೆ ಇತ್ತೀಚಿಗಿನ ಚುನಾವಣಾ ಪಲಿತಾಂಶಗಳ ನಂಬಿಕೆಯಲ್ಲಿ ಇದ್ದ ಕಾಂಗ್ರೆಸ್‍ಗೆ ಗೆಲವು ಸುಳ್ಳಾಗಿಸಿದೆ. 

ಹೀಗಾಗಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಇಮ್ರಾನ್‍ಪಾಷಾ ಗೆಲವು ಪಡೆದುಕೊಂಡಿದ್ದಾರೆ.  ಮತ್ತೊಂದು ರೀತಿಯಲ್ಲಿ ಜೆಡಿಎಸ್ ಖುಷಿ ಪಡುವುದಾದರೆ ಚುನಾವಣಾ ಮುಂಚೆ ಮಹಬೂಬ್‍ಪಾಷಾ ರವರು ಸ್ಪರ್ಧಿಸಲು ಜೆಡಿಎಸ್ ಬಿ.ಪಾರಂ ನೀಡಲಾಗಿತ್ತು. ಅವರು ತಮ್ಮ ಕುಟುಂಬದ ಹಿರಿಯರ ಮಾತಿಗೆ ಬದ್ದರಾಗಿ ಕೆಲವೇ ತಿಂಗಳುಗಳ ಪುರಸಭೆಯ ಆಡಳಿತವಿರುವುದರಿಂದ ಬೇಡ ಎಂಬ ಮಾತಿಗೆ ಅವರು ಸ್ಫರ್ಧಿಸದೇ ಉಳಿದುಕೊಂಡರು. ಈಗಾಗಿ ನಾಮಪತ್ರ ಸಲ್ಲಿಸಲು ಕೊನೆ ದಿನದಲ್ಲಿ ನಾಮ ಪತ್ರ ಸಲ್ಲಿಸುವ ಸಮಯದ ಅವದಿ  ಮುಗಿದ ನಂತರ  ಮಹಬೂಬ್ ಷರೀಪ್ ರವರು ತಾನು ನಾಮಪತ್ರ ಸಲ್ಲಿಸುವುದಿಲ್ಲ  ಆದರೆ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ದಿಟ್ಟ ನಿರ್ಧಾರ ಹೇಳಿದ್ದರಾದರೂ ನಾಮ ಪತ್ರ ಸಲ್ಲಿಸುವ ದಿನಾಂಕ ಅವಧಿ ಮುಗಿದು ಜೆಡಿಎಸ್ ಅಭ್ಯರ್ಥಿ ಇಲ್ಲದಂತಾಗಿತ್ತು. ಇದರಿಂದ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸೇರಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಇಮ್ರಾನ್‍ಪಾಷಾ ರವರಿಗೆ ಬೆಂಬಲ ನೀಡುವುದಾಗಿ ನಾಮಪತ್ರ ವಾಪಸ್ಸು ಪಡೆಯದಂತೆ ಅವರಿಗೆ ಧೈರ್ಯ ತುಂಬಲಾಯಿತು. ಇದರಿಂದ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ರವರು ಸೂಚನೆ ಮಾರ್ಗದರ್ಶನದಲ್ಲಿ ಜೆಡಿಎಸ್‍ನ ಕಾರ್ಯಕರ್ತರು ಇಮ್ರಾನ್ ಪರವಾಗಿ ಶ್ರಮಿಸಿದ್ದರಿಂದ ಗೆಲವು ಜೆಡಿಎಸ್‍ಗೆ ದೊರಕಿದಂತಾಗಿದೆ ಎಂಬ ಸಂತಸ ಜೆಡಿಎಸ್ ಪಾಳೆಯದಲ್ಲಿ ಕಂಡುಬಂದಿದೆ.

ಸದರಿ ಪುರಸಭೆಯ ಉಪಚುನಾವಣೆ ಪಲಿತಾಂಶ ಬುಧವಾರ ಬೆಳಿಗ್ಗೆ ಪ್ರಕಟವಾಗುತ್ತಿದ್ದಂತೆ  ಜೆಡಿಎಸ್ ಕಾರ್ಯಕರ್ತರು  ಇಮ್ರಾನ್ ರವರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು. ನಂತರ ಬಸ್ ನಿಲ್ದಾಣ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಎ.ಎನ್.ಜಗದೀಶ್‍ಬಾಬು, ಶಬ್ಬೀರ್ ಅಹಮದ್(ಬನಾನ) ಪುರಸಭಾ ಸದಸ್ಯರಾದ ಏಜು, ಶಬ್ಬೀರ್, ಮುಖಂಡರಾದ ಮಹಬೂಬ್ ಷರೀಪ್, ಆಟೋ ಇಮ್ರಾನ್, ಪೂಲು ಶಿವಾರೆಡ್ಡಿ, ಸುಬ್ಬರೆಡ್ಡಿ, ಎಸ್.ಆರ್.ಮುನಿಕೃಷ್ಣ, ಶಬ್ಬೀರ್, ಜವಾದ್, ಕಾರ್ಪೆಂಟರ್ ಸಾಧಿಕ್, ಚಾನ್, ರಪೀಕ್, ಅನ್ವರ್, ಖಾಜಾ, ಕಂಬಾಲ ಗೋವಿಂದ್ ಮುಸ್ತಾಪ ಇತರರು ಉಪಸ್ಥಿತರಿದ್ದರು.
 

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...