ಶ್ರೀನಿವಾಸಪುರ ಶ್ರೀನಿವಾಸಪುರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಕೈ ಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು 

Source: sonews | By Staff Correspondent | Published on 10th December 2017, 3:34 PM | State News |

ಶ್ರೀನಿವಾಸಪುರ ಪಟ್ಟಣದ ಬಹುತೇಕ ವಾರ್ಡಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮಕ್ಕಳು ಹಾಗೂ ಸಾರ್ವಜನಿಕರಿಗೆ  ತೊಂದರೆಯಾಗಿದೆ ಪಟ್ಟಣದ ಅಜಾದ್ ರಸ್ತೆ ಹೆಚ್ಚಿನ ಜನ ಪ್ರದೇಶವಾಗಿದ್ದು ಮಾಂಸ ಮಾರುಕಟ್ಟೆ ಹಾಗೂ ಪಟ್ಟಣದ 2 ಮಸೀದಿಗಳು ಅಜಾದ್ ರಸ್ತೆಯಲ್ಲಿ ಇರುವುದರಿಂದ ಪ್ರತಿ ನಿತ್ಯ ಹೆಚ್ಚಿನ ಜನಸಂಖ್ಯೆ ಓಡಾಡುವ ಪ್ರದೇಶವಾಗಿದ್ದು 20 ರಿಂದ 25 ಹೆಚ್ಚು  ಬೀದಿ ನಾಯಿಗಳು ಪ್ರತಿನಿತ್ಯ ಗುಂಪು ಗುಂಪುಗಳಾಗಿ ರಸ್ತೆಯಲ್ಲಿ ಓಡಾಡುತ್ತಾ ಇದ್ದು  ಮಕ್ಕಳು ಟ್ಯೂಷನ್ಸ್ ಶಾಲೆಗಳಿಗೆ ಹೋಗಿ ಬರಲು ಕಷ್ಟಕರವಾಗಿದೆ  ಸಾರ್ವಜನಿಕರು ದ್ವಿಚಕ್ರ ವಾಹನಗಳು ಮತ್ತು ಮಸೀದಿಗೆ ಪ್ರಾರ್ಥನೆ ತರಳುವ ವ್ಯಕ್ತಿಗಳಿಗೆ ಬೀದಿ ನಾಯಿಗಳಿಂದ ಭಯ ಬೀತರಾಗಿದ್ದಾರೆ.
ಪಟ್ಟಣದ ಪ್ರದೇಶಗಳಲ್ಲಿ  ಬೀದಿ ನಾಯಿಗಳು  ಹಾವಳಿ ಹೆಚ್ಚಾಗಿದ್ದು ಶಾಲಾ ಮಕ್ಕಳು ಶಾಲೆಗೆ ಹೋಗಿ ಬರಲು ಭಯದಿಂದ ರಸ್ತೆಯಲ್ಲಿ   ಹೋಡಾಡಲು ಕಷ್ಟವಾಗಿದೆ ವೃದ್ದರು ಹಾಗೂ ಸಾರ್ವಜನಿಕರಿಗೆ ದಿನನಿತ್ಯ ಸಂಚರಿಸಲು ಕಷ್ಟಕರವಾಗಿದ್ದು ಇತ್ತೀಚಿನ ದಿನಗಳಲ್ಲಿ ಪಟ್ಟಣದ ಗಫಾರ್ ಖಾನ್ ಮೊಹಲ್ಲಾ ಹಾಗೂ ಜಾಕೀರ್ ಹುಸೇನ್ ಮೊಹಲ್ಲಾ ಬೀದಿ ನಾಯಿಗಳ ಹಾವಳಿಯಿಂದ ಮೇಕೆಗಳಿಗೆ ಕಚ್ಚಿರುವ ಘಟನೆ ನಡೆದಿದೆ ಮೊಹಲ್ಲಾ ಗೃಹವಾಸಿಗಳು ತಮ್ಮ ಮಕ್ಕಳಿಗೆ ಬೀದಿನಾಯಿಗಳ ಹಾವಳಿಯಿಂದ ಆಟವಾಡಲು ಬಿಡುತ್ತಿಲ್ಲ ಪುgಸÀಭೆ ಅಧಿಕಾರಿಗಳು ಪಟ್ಟಣದ ಸಾರ್ವಜನಿಕರಿಗೆ  ತೊಂದರೆಯಾಗದೆ ರೀತಿಯಲ್ಲಿ  ಪುರಸಭೆ ಅಧಿಕಾರಿಗಳು ಪಟ್ಟಣದ ವಾರ್qಗಳಲ್ಲಿ ಬೇಟಿ ನೀಡಿ ಸಾರ್ವಜನಿಕರ ಕಷ್ಟಗಳು ಹಾಗೂ ಕುಂದು ಕೊರತೆಗಳನ್ನು ಬಗೆಹರಿಸುವ À ಜವಾಬ್ದಾರಿ ಪುರಸಭೆ ಅಧಿಕಾರಿಗಳಾಗಿದ್ದು ಇದರ ಬಗ್ಗೆ ವಾರ್ಡಗಳಿಗೆ ಬೇಟಿ ನೀಡದೆ ಅಧಿಕಾರಿಗಳು ಕಛೇರಿಯಲ್ಲಿ ಕುಳಿತು ತಮ್ಮ ಕೆಲಸದಲ್ಲಿ ತೊಡಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡಗಳಲ್ಲಿ ಸಮಸ್ಯೆಗಳ  ಬಗೆಹರಿಸಲು ಅಧಿಕಾರಿಗಳು ಪಟ್ಟಣದ ಪ್ರವಾಸ ಕೈಗೊಳ್ಳಬೇಕು.  ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯಲ್ಲಿ ವಾಸವಿರುವ ನಾಗರೀಕರ ಕಷ್ಟಗಳನ್ನು ಹಗೂ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಪಟ್ಟಣದ ನಿವಾಸಿಗಳ ಕಷ್ಟ ಹಾಗೂ ಸಮಸ್ಯೆ ಬಗೆಹರಿಸಬೇಕು ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು  ಎಚ್ಚಿತಕೊಂಡು ಪಟ್ಟಣದ ನಿವಾಸಿಗಳ ಸಮಸ್ಯೆಗಳು ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಡಿ ಸಿ ಸಿ ಬ್ಯಾಂಕ್ ವತಿಯಿಂದ ಬೀದಿ ಬದಿಯ ವ್ಯಾಪಾರರಿಗೆ ಸಾಲದ ಚೆಕ್ಕನ್ನು  ಆರೋಗ್ಯ  ಸಚಿವ ಕೆ ಆರ್ ರಮೇಶ್ ಕುಮಾರ್ ವಿತರಿಸಿದರು. 


ಪಟ್ಟಣದ  ಬೀದಿ ವ್ಯಾಪಾರಸ್ಥರಿಗೆ ವ್ಯಾಪರ ಮಾಡಿಕೊಳ್ಳುವ ಸಲುವಾಗಿ ಡಿ ಸಿ ಸಿ ಬ್ಯಾಂಕ್ ನಿಂದ ಕೆ ಆರ್ ರಮೇಶ್ ಕುಮಾರ್  ಸಾಲ ವಿತರಣೆ ಮಾಡಿದರು ಪಟ್ಟಣದಲ್ಲಿ ತರಕಾರಿ ಹಣ್ಣು ಹೂವು ಮಾರುವ ಪುರಸಭೆಯಲ್ಲಿ ನೊಂದಾಯಿತ ಸುಮಾರು 67 ವ್ಯಾಪಾರಸ್ಥರಿಗೆ 14 ಲಕ್ಷ ರೂ ಸಾಲ ವಿತರಿಸಿದರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಬ್ಯಾಂಕಿನ ಸಿಬ್ಬಂದಿಯೊಂದಿಗೆ ವ್ಯಾಪಾರ ಮಾಡುವ ಸ್ಥಳಗಳಿಗೆ ತರಳಿ ಸಾಲದ ಚೆಕ್ ವಿತರಣೆ ಮಾಡಿದರು  ಬೀದಿ ಬದಿಯಲ್ಲಿ ವ್ಯಾಪರ ಮಾಡಿ ಕುಟುಂಬ ನಿರ್ವಹಣೆ ಮಾಡುವ ತಾವು ಡಿಸಿಸಿ ಬ್ಯಾಂಕ್ ಸಾಲ ಸದ್ಬಳಿಕೆ ಮಾಡಿಕೊಳ್ಳಬೇಕೆಂದು ಹೇಳಿದರು ಪಡೆದ ಸಾಲ ಸಕಾಲಕ್ಕೆ ಮರುಪಾವತಿ ಮಾಡಬೇಕು ಆಗ ಇನ್ನು ಉಳಿದ ಅರ್ಹ ವ್ಯಕ್ತಿಗಳಿಗೆ ಸಾಲ ನೀಡಲು ಸಹಾಯವಾಗುತ್ತದೆ ಎಂದು ಸಚಿವ  ಕೆ ಆರ್ ರಮೇಶ್ ಕುಮಾರ್ ವ್ಯಾಪಾರಸ್ಥರಿಗೆ ಕಿವಿ ಮಾತು ಹೇಳಿದರು
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಪುರಸಭೆ ಅಧ್ಯಕ್ಷ ರತ್ನಮ್ಮ ನಾಗರಾಜ್ ಉಪಾದ್ಯಕ್ಷ ಟಿ ಎಮ್ ಬಿ ಮುಕ್ತೀಯರ್ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ  ದಿಂಬಾಲ ಅಶೋಕ್ ಮುಖಂಡರಾದ ಅಕ್ಬರ್ ಷರೀಫ್ ತಜಮುಲ್ ಮಹಮದ್ ಆಲಿ ಬಿ ಎಂ ಪ್ರಕಾಶ್ ವೆಂಕಟೇಶ್ ರೆಡ್ಡಿ ಕೆ ಕೆ ಮಂಜು ಮುಂತಾದವರು


ಎಚ್ಡಿಕೆ ಮುಖ್ಯಮಂತ್ರಿಯಾಬೇಕೆಂದು ರಾಜ್ಯದ ಬಯಕೆಯಾಗಿದೆ-ದೇವೆಗೌಡ
ರಾಜ್ಯದಲ್ಲಿ ಎಲ್ಲಾ ಜಾತಿ ವರ್ಗದ ಜನರು ಕುಮಾರಸ್ವಾಮಿ ಅವರು  ಮುಖ್ಯ ಮಂತ್ರಿ ಆಗಬೇಕೆಂದು ಬಯಸುತ್ತಿದ್ದಾರೆ ಮುಂದಿನ ಸಿ ಎಮ್ ಆದಲ್ಲಿ  ಸ್ರೀಶಕ್ತಿ ಸಂಘಗಳ ಸಾಲಮನ್ನ ಮಾಡುವುದರ ಜೊತೆಗೆ 70 ವರ್ಷ ತುಂಬಿದ ರೈತರಿಗೆ ತಲಾ 5 ಸಾವಿರ ರೂಪಾಯಿ ಮಾಶಾಸನ  ನೀಡುತ್ತೇನೆ ಎಂದು ಚುನಾವಣೆ ಪ್ರನಾಲಿಕೆ ಸಿದ್ದಪಡಿಸುವ ಶಕ್ತಿ ನಿಮ್ಮಿಂದ ಆಗಬೇಕಾಗಿದೆ ಎಂದು ಮಾಜಿ ಪ್ರಧಾನ  ಮಂತ್ರಿಗಳು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಎಚ್ ಡಿ ದೇವೇಗೌಡರು ಹೇಳಿದರು 
ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಜೆ ಡಿ ಎಸ್ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ದೇವೇಗೌಡರು ಮಾತನಾಡಿ ಪ್ರಾದೇಶಿಕ ಪಕ್ಷಗಳ ಬಲಪ್ರರ್ದನಕ್ಕೆ ತಮಿಳುನಾಡು ಉತ್ತಮ  ನಿರ್ದಶನವಾಗಿದೆ ಅಲ್ಲಿ ರಾಷ್ಟ್ರೀಯ ಪಕ್ಷಗಳ ಪಾರುಪತ್ಯಕ್ಕೆ ತಡೆಯೊಡ್ಡಿವೆ ಈಗ ಪ್ರದಾನಿ ನರೇಂದ್ರ ಮೋದಿ ಕರುಣಾನಿದಿ ರವರ ಮನೆಗೆ ಹೋಗಿ ಮಾತು ಕಥೇ ನಡೆಸಿದ್ದಾರೆ ಇದು ಪಾದ್ರೇಶಿಕ ಪಕ್ಷಗಳ ನಿಜವಾದಿ ಶಕ್ತಿ ತೋರಿಸುತ್ತದೆ ಎಂದು ಹೇಳಿದರು
ಜೆ ಡಿ ಎಸ್ ಒಂದು ಕುಟುಂಬಕ್ಕೆ ಸೇರಿದ ಪಕ್ಷವಲ್ಲ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯ ಮಂತ್ರಿ ಮಾಡುವುದೆ ಅವರ ದೇಯವಲ್ಲಿ ರಾಜ್ಯ ಎದುರುಸುತ್ತಿರುವ ನೆಲ ಜಲ ಸಮಸ್ಯೆಗಳು ಪರಿಹಾರಕ್ಕೆ ಶ್ರಮಿಸುವುದು ರೈತರ ಸಮಾಜದ ಎಲ್ಲಾ ಬಡವರ ಹಿತ ಕಾಯುವರಿಗೂ ಪಕ್ಷದ ಆದ್ಯತೆ ಆಗಿದೆ ನಾನು ಆಕಸ್ಮಿಕವಾಗಿ ಪ್ರದಾನಿ ಆದೆ ಆದರೂ ಜನಪರ ಕಾರ್ಯಗಳನ್ನು ಕೈಗೊಂಡೆ ಇದು ಜನರಿಗೆ ಗೊತ್ತಿದೆ 
ಮೇಕೆ ದಾಟು ಕುಡಿಯುವ ನೀರು ಯೋಜನೆಗೆ ತಮಿಳುನಾಡು ಖ್ಯಾತೆ ತೆಗೆದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮನೆಗೆ ಬಂದು ಸಮಸ್ಯೆ ಬಗ್ಗೆ ತಿಳಿಸಿದರು ನಾನು ಮಹಾತ್ಮಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಗ್ರಾಹ ಕೈಗೊಂಡೆ ಸಮಸ್ಯೆ ಬಗೆಹರಿಸಲು ಕೇಂದ್ರ ಮುಂದಾಗದಿದ್ದಲ್ಲಿ ಪ್ರಾನ ತ್ಯಾಗ ಮಾಡುವುದಾಗಿ ಪ್ರದಾನಿಗೆ ದೂರವಾಣಿ ಮೂಲಕ ತಿಳಿಸಿದೆ ಅದಕ್ಕೆ ಅವರು ಸ್ಪಂದಿಸಿ ಸಮಸ್ಯೆ ಬಗೆಹರಿಸುವ ಬರವಸೆ  ನೀಡಿದರು ಎಂದು ಹೇಳಿದರು
ಕಾವೇರಿ ನೀರಿಗಾಗಿ ತಮಿಳುನಾಡಿನಲ್ಲಿ ಪ್ರದಾನಿ  ನರೇಂದ್ರ   ಮೋದಿ ಮೇಲೆ ಅಲ್ಲಿನ ರಾಜಕೀಯ ಒತ್ತಡ ಹೇರಲಾಗಿತ್ತು ಆದರು ನನ್ನ ಕನ್ನಡ ನಾಡಿನ ಕಾವೇರಿ ನೀರನ್ನು ಬಿಟ್ಟು ಕೊಡಲು ಸಾದ್ಯವಿಲ್ಲ ಎಂದು ಪಾರ್ಲಿಮೆಂಟ್ ನಲ್ಲಿ  ವಾದ ಮಂಡಿಸಿದ್ದೆ ಆದೆ ರೀತಿಯಾಗಿ ಮನಮೋಹನ್ ಸಿಂಗ್ ಪ್ರದಾನಿಯಾಗಿದ್ದಗಲೂ ಇದೇ ವಿಚಾರದಲ್ಲಿ ಸಮರಸಾರಿದ್ದೆ ಆದರೆ ಸಿಂಗ್ ರವರು ನಮ್ಮ ಸರ್ಕಾರ ಹೊಗುತ್ತೆ ಸರ್ಕಾರವನ್ನು  ಉಳಿಸಿಕೊಳ್ಳಿ ಎಂದು ಪ್ರಾರ್ಥನೆ ಮಾಡಿದರು ಎಂದು ಹೇಳಿದರು 

ನಾನು ಸಿ ಎಂ ಆದ ಸಮಯದಲ್ಲಿ  ಕೋಲಾರ ಜಿಲ್ಲೆಯಲ್ಲಿ ಜೆ ಡಿ ಎಸ್ ಗೆ  9 ಸ್ಥಾನಗಳು ಬಂದಿದವು ಆಗಾಗಿ  ಕೋಲಾರ ಜಿಲ್ಲೆಗೆ  ಜೆ ಡಿ ಎಸ್ ಪಕ್ಷಕ್ಕೆ ಅವಿನಾಭವ ಸಂಬಂದವಿದೆ ಕೋಲಾರ ಜಿಲ್ಲೆಯ ಅನೇಕ ಮಹಾನ್ ನಾಯಕರು ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ  ಈ ನಿಟ್ಟಿನಲ್ಲಿ ಕೆ ಸಿ ರೆಡ್ಡಿ ಎಂ ವಿ ಕೃಷ್ಣಪ್ಪ ನಾರಯಣಗೌಡ ರಂತಹ ಅನೇಕರು ರಾಜ್ಯದ ಬಡವರು ಹಿಂದುಳಿದವರು ಎಲ್ಲಾ ವರ್ಗದವರ ಹಿತದೃಷ್ಟಿಯಲ್ಲಿ ಅಪಾರ ಸೇವೆ ಮಾಡಿದ್ದಾರೆ ಎಂದು ಬಣ್ಣಿಸಿದರು ಮಾಜಿ ಶಾಸಕ ಜೆ ಡಿ ಎಸ್ ಜಿಲ್ಲಾ ಅಧ್ಯಕ್ಷ ಜಿ ಕೆ ವೆಂಕಟಶಿವರೆಡ್ಡಿ  ಮಾತನಾಡಿ ರಾಜ್ಯದ ಕಾಂಗ್ರೇಸ್ ಸರ್ಕಾರ ನೀರಾವರಿ ಯೋಜನೆಗಳನ್ನು ತರುತ್ತೇವೆ ಎಂದು   ಹೇಳಿಕೊಂಡು ತಮ್ಮ ಪಕ್ಷದ ಕಾರ್ಯಕರ್ತರ ಜೇಬು ತುಂಬಿಸಲು ಮುಂದಾಗಿದೆ ತಮ್ಮ ಕಾರ್ಯಕರ್ತರಿಗೆ ಗುತ್ತಿಗೆ ನೀಡುವ ಮೂಲಕ ಕೋಟ್ಯಾಂತರರೂ ಗುಳುಂ ಮಾಡಿದ್ದಾರೆ 50 ಲಕ್ಷ ರೂ ಕಾಮಗಾರಿಯಲ್ಲಿ ಕೇವಲ 5 ಲಕ್ಷ ರೂ  ವ್ಯಯಿಸಿ ಉಳಿದುದನ್ನು ಲಪಟಾಯಿಸಲಾಗುತ್ತಿದೆ.
ಭೂ ಸೇನೆಗೆ ಗುತ್ತಿಗೆ ವಹಿಸಿ ಕಾಮಗಾರಿಯ ಕ್ರಿಯಾಯೋಜನೆ ಮತ್ತು ಅಂದಾಜು ಪಟ್ಟಿ ತಯಾರಿಸದೆ ಟೆಂಡರ್ ನೀಡದೆಯೇ  ಹಣವನ್ನು ಪಡೆದಿದ್ದಾರೆ ಬಿ ಜೆ ಪಿ ಮತ್ತು ಕಾಂಗ್ರೇಸ್ 2 ಪಕ್ಷಗಳು ಹತ್ತು ವರ್ಷಗಳಲ್ಲಿ ರಾಜ್ಯವನ್ನು  ಲೂಟಿ ಮಾಡಿ ಖಜಾನೆ ಖಾಲಿ ಮಾಡಿದ್ದಾರೆ ಅಭಿವೃದ್ದಿ ನೆಪದಲ್ಲಿ ಜನತೆಗೆ ದ್ರೋಹ ವಸಗಿದ್ದಾರೆ ಮುಂದಿನ ಚುನಾವಣೆಗಳಲ್ಲಿ ಇಬ್ಬರಿಗೂ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದೆ ಎಂದು    ಹೇಳಿದರು 
ಶ್ರೀನಿವಾಸಪುರ ಕ್ಷೇತ್ರದಲ್ಲಿ ವಸತಿ ಯೋಜನೆಗಳನ್ನು ಬಡಜನತೆಗೆ ನೀಡದೆ ಉಳ್ಳವರಿಗೆ ನೀಡಲಾಗಿದೆ ಜೆ ಡಿ ಎಸ್ ಪಕ್ಷದೆಂಬ ಕಾರಣಕ್ಕೆ ಬಡವರಾಗಿದ್ದರು ಮನೆ ನೀಡದೆ ವಂಚನೆ  ಮಾಡಲಾಗಿದೆ  ಕ್ಷೇತ್ರದಲ್ಲಿ ಸಾವಿರಾರು ಮನೆಗಳನ್ನು ಕೊಟ್ಟಿರುವುದಾಗಿ ಹೇಳಿಕೊಳ್ಳುವುದನ್ನು ಸಚಿವರು ಬಿಡಬೇಕು ಬಡಜನರ ಅಭಿವೃದ್ದಿಗೆ ಸಹಕಾರ ನೀಡಬೇಕು ಒಂದೇ ಒಂದು ಬೋರ್‍ವೇಲ್  ಕೊರೆಯಿಸಲು ಗಂಗಾ ಕಲ್ಯಾಣ ಯೋಜನೆಯಲ್ಲಿ ಬಡವರಿಗೆ ನೆರೆವು ನೀಡಿಲ್ಲ ಎಂದು ಆರೋಪಿಸಿದರು
ಈ ಸಂದರ್ಭದಲ್ಲಿ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫರುಲ್ಲಾ ಖಾನ್ , ವಿಧಾನ ಪರಿಷತ್ತು ಸದಸ್ಯರಾದ ತೂಪಲ್ಲಿ ಚೌಡರೆಡ್ಡಿ ರಮೇಶ್ ಬಾಬು, ಸಿ ಆರ್  ಮನೋಹರ್ ಟಿ ಎ ಶರವಣ, ಶಾಸಕರರಾದ ಜೆ ಕೆ ಕೃಷ್ಣಾರೆಡ್ಡಿ ಮಾಜಿ ಶಾಸಕ ಭಕ್ತವಸ್ಸಲಂ  ಜೆ ಡಿ ಎಸ್ ರಾಷ್ಟ್ರೀಯ ಉಪಾಧ್ಯಕ್ಷ ಕೆ ವಿ ಗೋಪಾಲಕೃಷ್ಣ, ರಾಜ್ಯ ಪರಿಶಿಷ್ಟ ವಿಭಾಗದ ಉಪಾಧ್ಯಕ್ಷ  ಹಾರೊವಳ್ಳಿ ವೆಂಕಟೇಶ, ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್ ನಾರಾಯಣಸ್ವಾಮಿ ಎಂ ವಿ ಶ್ರಿನಿವಾಸ್,ಗಣೇಶ, ಮುದುವಾಡಿ ಶ್ರಿನಿವಾಸ,ನಂಜುಂಡಪ್ಪ, ತಾಲ್ಲೂಕು ಪಂಚಾಯಿತಿ ಉಪಾದ್ಯಕ್ಷೆ ಮಂಜುಳ ರಾಮಚಂದ್ರೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಜಶೇಖರ್ ರೆಡ್ಡಿ ,ಮಂಜುನಾಥರೆಡ್ಡಿ ಮಾಜಿ ಪುರಸಭಾ ಅಧ್ಯಕ್ಷ ಮಹಬೂಬ್ ಷರೀಫ್, ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ ಎಲ್ ಸೂರಣ್ಣ ಮಾಜಿ ಪುರಸಭಾ ಸದಸ್ಯ ನಯಾಜ್ ಅಹಮದ್,ಎ ಪಿ ಎಂ ಸಿ ನಿರ್ದೇಶಕ ಅತಾವುಲ್ಲಾ ಖಾನ್ ಹಾಗೂ ತಾಲ್ಲೂಕಿನ ಜೆ ಡಿ ಎಸ್ 

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ
ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಮತ್ತು ಪೌಷ್ಠಿಕಾಂಶಗಳ ಕುರಿತು ಹೆಚ್ಚಿನ ಅರಿವು ರೈತರಲ್ಲಿ ಮತ್ತು ಜನಸಾಮಾನ್ಯರಲ್ಲಿ  ಮೂಡಿಸುವಂತೆ ಹಾಲು ಒಕ್ಕೂಟದ ವತಿಯಿಂದ ಫ್ರೌಡಶಾಲಾ ವಿದ್ಯಾರ್ಥಿನಿಯರಿಗೆ ರಸ ಪ್ರಶ್ನೆ ಹಾಗೂ ಸಂಗೀತ ಸ್ಪರ್ದೆ ಮೂಲಕ ನಂದಿನಿ ಪ್ರತೀಭಾನ್ವೇಷನೆ ಸ್ಪರ್ದೆಯನ್ನು ಕಾರ್ಯಕ್ರಮವನ್ನು ಕೋಚಿಮುಲ್ ಅಧ್ಯಕ್ಷ ಎಂ ಜಿ ಬೇಟಪ್ಪ ಉದ್ಘಾಟಿಸಿದರು
ಪಟ್ಟಣದ ಹೊರವಲೆಯದ ವೆಂಕಟೇಗೌಡ  ಕಲ್ಯಾಣ ಮಂಟಪಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಗಮ ಕೋಲಾರ ವತಿಯಿಂದ ಫ್ರೌಡಶಾಲಾ ವಿದ್ಯಾರ್ಥಿನಿಯರಿಗೆ ರಸ ಪ್ರಶ್ನೆ ಹಾಗೂ ಸಂಗೀತ ಸ್ಪರ್ದೆ ಮೂಲಕ ನಂದಿನಿ ಪ್ರತೀಭಾನ್ವೇಷನೆ ಸ್ಪರ್ದೆಯನ್ನು ಕಾರ್ಯಕ್ರಮವನ್ನು ಕೋಚಿಮುಲ್ ಅಧ್ಯಕ್ಷ ಎಂ ಜಿ ಬೇಟಪ್ಪ ಉದ್ಘಾಟಿಸಿ ಮಾತನಾಡಿದ ಅವರು ಖಾಸಗಿ ಹಾಲಿನಲ್ಲಿ ಕಲಬೆರಿಕೆ ಮಿಶ್ರಿತವಾಗಿರುದರಿಂದ ಜನರು ಖರೀದಿಸಿ ಬಳಕೆ ಮಾಡುತ್ತಿರುವುದರಿಂದ ಅತಿ ಹೆಚ್ಚಿನ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ
ನಂದಿನಿ ಹಾಲಿನಲ್ಲಿ ಯಾವುದೇ  ರೀತಿಯ ವಿಷಪೂರಿತ ಮಿಶ್ರಣಗಳು ಇರುವುದಿಲ್ಲ ನಂದಿನಿ ಹಾಲನ್ನು ನಮ್ಮ ರಾಜ್ಯದ ರೈತರು ಉತ್ಪಾದಿಸಿ ನಮ್ಮ ಹಸುವಿನ ಹಾಲಿನಲ್ಲಿ ಪೌಷ್ಠಿಕಾಂಶಗಳು ಹೆಚ್ಚಿನ ರೀತಿಯಲ್ಲಿ ಇದೆ ಈ ಕುರಿತು ಮನವರಿಕೆ ಮಾಡುವುದು ಮತ್ತು ಬಳಕೆ ಮಾಡುವುದು ನಮ್ಮ ದಿನನಿತ್ಯದಲ್ಲಿ ಆಗಬೇಕಾಗಿದೆ ಎಂದು ಕರೆನೀಡಿದರು
ಈ ಸಂದರ್ಭದಲ್ಲಿ  ನಿರ್ದೇಶಕ ಬೈರಾರೆಡ್ಡಿ ಶಿಬಿರ ವ್ಯವಸ್ಥಾಪಕ ಬಿ ಶಿವರಾಜ್, ಡಾ// ವೆಂಕಟಚಲ,ಸನತ್ ಕುಮಾರ್,ಬಿ ಇ ಓ ಶಂಶುನ್ನೀಸ್ಸಾ, ವೇಣು ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ, ಬಿ ಆರ್ ಸಿ ವೀರಭದ್ರಪ್ಪ ,ನಂಜುಂಡೆಗೌಡ ಹಾಗೂ ಪೋಷಕರು ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು 


 

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...