ಶ್ರೀನಿವಾಸಪುರ: ಎಸ್‍ಎಪ್‍ಎಸ್ ಶಾಲೆಯ ವಿಧ್ಯಾರ್ಥಿನಿ 622 ಅಂಕ

Source: sonews | By sub editor | Published on 7th May 2018, 7:05 PM | State News | Don't Miss |

ಶ್ರೀನಿವಾಸಪುರ: ಈ ಬಾರಿಯ ಎಸ್‍ಎಸ್‍ಎಲ್‍ಸಿ  ಪಲಿತಾಂಶದಲ್ಲಿ ಪಟ್ಟಣದ ಎಸ್‍ಎಪ್‍ಎಸ್ ಶಾಲೆಯ ವಿಧ್ಯಾರ್ಥಿನಿ 622 ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಮೊದಲಾಗಿದ್ದು ಶಾಲೆಯು 100 ರಷ್ಟು ಪಲಿತಾಂಶ ಪಡೆದುಕೊಂಡಿದೆ ಎಂದು ಶಾಲೆಯ ಪ್ರಾಂಶುಪಾಲ ಮಜೀಶ್ ಮ್ಯಾಥ್ಯೂ ರವರು ತಿಳಿಸಿದ್ದಾರೆ. 
     

ಶ್ರೀನಿವಾಸಪುರ ಪಟ್ಟಣದ ಕೊಳ್ಳೂರು ರಸ್ತೆಯಲ್ಲಿರುವ ಎಸ್‍ಎಪ್‍ಎಸ್ ಶಾಲೆಯಲ್ಲಿ ಈ ಬಾರಿಯ ಹತ್ತನೆ ತರಗತಿ ಪಲಿತಾಂಶದಲ್ಲಿ 100 ರಷ್ಟು ಸಾಧನೆ ಮಾಡಿದೆ. ಶಾಲೆಯಲ್ಲಿ ಒಟ್ಟು 114 ಮಂದಿ ಪರೀಕ್ಷೆಗೆ ಹಾಜರಾಗಿ ಇದರಲ್ಲಿ 622 ಅಂಕಗಳನ್ನು ಪಡೆತಯುವ ಮೂಲಕ ಅಲಕಾ ಶಾಲೆಗೆ ಹಾಗು ತಾಲ್ಲೂಕಿಗೆ ಮೊದಲಿಗಳಾಗಿದ್ದಾಳೆ. ಅದೇ ರೀತಿ 51 ಅತ್ಯನ್ನತ ಶ್ರೇಣಿಯಲ್ಲಿ, 63 ಮಂದಿ ವಿಧ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಶಾಲೆಯ ಉತ್ತಮ ಪಲಿತಾಂಶ ತಂದುಕೊಟ್ಟು ವಿಧ್ಯಾರ್ಥಿಗಳನ್ನು ಇದಕ್ಕೆ ಕಾರಣರಾದ ಶಿಕ್ಷಕರನ್ನು ಶಾಲೆಯ ಪ್ರಾಂಶುಪಾಲ ಮಜೀಶ್ ಮ್ಯಾಥ್ಯೂ ರವರು ಅಭಿನಂದಿಸಿದ್ದಾರೆ.
 

Read These Next