“ಸೋಲಾರ್ ಅನುದಾನ ಹಾಗೂ ಗೃಹಪಯೋಗ ವಸ್ತುಗಳ ವಿತರಣೆ ”

Source: sonews | By Staff Correspondent | Published on 18th January 2018, 1:05 AM | State News |

 

ಶ್ರೀನಿವಾಸಪುರ ತಾಲೂಕಿನ ಯಲ್ದೂರು ವಲಯದ ಶ್ಯಾಗತ್ತೂರು ಗ್ರಾಮದಲ್ಲಿ   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವತಿಯಿಂದ  ಸೋಲಾರ ಅನುದಾನ ಮತ್ತು ಗೃಹಪಯೋಗ ವಸ್ತುಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀಯುತ.ಜೆ.ಚಂದ್ರಶೇಖರ್ ರವರು ಉದ್ಘಾಟನೆ ಮಾಡಿ ಮಾತನಾಡುತ್ತಾ, ಕ್ಷೇತ್ರವು ವಿವಿಧ ದಾನಧರ್ಮಗಳಿಗೆ ಪ್ರಸಿಧ್ಧಿಯಾಗಿದೆ ಹಾಗೂ ಕ್ಷೇತ್ರವು ನಿರಂತರವಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೆ ಹಾಗೂ ಪ್ರಸ್ತುತ ವರ್ಷದಲ್ಲಿ 30 ಕೋಟಿಪ್ರಗತಿನಿಧಿ, ಒಟ್ಟು 70 ಕುಟುಂಬಗಳಿಗೆ ಮಾಸಾಶನ, 100 ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿವೇತನ, ಕೃಷಿ ಕಾರ್ಯಕ್ರಮಗಳಿಗೆ 2 ಲಕ್ಷ ಅನುದಾನ, 11 ಹಾಲು ಉತ್ಪಾಧಕ ಸಹಕಾರ ಸಂಘಗಳಿಗೆ 8 ಲಕ್ಷ ರೂಗಳು ಅನುದಾನ ಹಾಗೂ ಸೋಲಾರ್ ಅಳವಡಿಕೆಗೆ, ಸಸಿ ನಾಟಿಗೆ, ಯಂತ್ರೋಪಕರಣಗಳಿಗೆ , 25 ದೇವಾಸ್ಥಾನಗಳಿಗೆ 35 ಲಕ್ಷ ರೂಪಾಯಿ ಅನುದಾನ ಮತ್ತು ಶಾಲೆಗಳಿಗೆ ಶಿಕ್ಷಕರು ಹಾಗೂ ಡೆಸ್ಕ್ ಬೆಂಚ್‍ಗಳನ್ನು ವಿತರಣೆ, ಮದ್ಯವರ್ಜನ ಶಿಬಿರ ಕಾರ್ಯಕ್ರಮಗಳು ಅನುಷ್ಟಾನ ಮಾಡಲಾಗಿದೆ. ಇದಕ್ಕೆ ಮಂಜುನಾಥ ಸ್ವಾಮಿಯ ಆರ್ಶಿವಾದ ಮತ್ತು ಪೂಜ್ಯರ ಆರ್ಶೀವಾದದಿಂದ ಸಾಧ್ಯವಾಗಿದೆ ಎಂದು ಹೇಳಿದರು ಹಾಗೂ ಯೋಜನೆಯಿಂದ ಪ್ರಗತಿನಿಧಿ ಪಡೆದು ಕುಟುಂಬದ ಅಭಿವೃದ್ಧಿ ಸದುಪಯೋಗ ಮಾಡಿಕೊಂಡು ವಾರದ ಸಭೆಯನ್ನು ನಿಷ್ಠೆಯಿಂದ ಮಾಡುವ ಬಗ್ಗೆ ಮಾಹಿತಿ ನೀಡಿದರು. 
ಮಾನ್ಯ ತಾಲೂಕಿನ ಯೋಜನಾಧಿಕಾರಿಯಾದ ಶ್ರೀ ಸುರೇಶ್ ಶೆಟ್ಟಿ, ರವರು ಮಾತನಾಡುತ್ತಾ, ಗ್ರಾಮಾಭಿವೃದ್ಧಿ ಯೋಜನೆಯು 35 ವರ್ಷಗಳಿಂದ ಕಾರ್ಯಾಚರಣೆ ಮಾಡುತ್ತಿದ್ದು, ಪ್ರತಿಯೊಬ್ಬರು ತಮ್ಮ ಅಭಿವೃದ್ಧಿ ಅಲ್ಲದೇ, ಗ್ರಾಮದ ಅಭಿವೃದ್ಧಿಗೋಸ್ಕರ ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಬೇಕು, ಪ್ರಸ್ತುತ ನೀಡುತ್ತಿರುವ ಸಾಲದ ಸಂಪೂರ್ಣ ಜವಾಬ್ದಾರಿಯು ಬ್ಯಾಂಕಿನವರಾಗಿದ್ದು, ಗ್ರಾಮಾಭಿವೃದ್ಧಿ ಯೋಜನೆ ಮಧ್ಯವರ್ತಿಯಾಗಿ ಬ್ಯಾಂಕ್ ಸೇವೆಯನ್ನು ಜನರಿಗೆ ತಲುಪಿಸುತ್ತಿದ್ದೇವೆ. ವೈಯಕ್ತಿಕವಾಗಿ ಜನರು ಬ್ಯಾಂಕಿನಿಂದ ಸೇವೆ ಪಡೆಯಲು ಹಲವಾರು ಸಮಸ್ಯೆಗಳಿದ್ದು, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಮಸ್ಯೆಗಳು ನಿವಾರಣೆಯಾಗಿದೆ ಎಂದು ಹೇಳಿದರು. 

ತಾಲೂಕಿನ ಕೃಷಿ ಅಧಿಕಾರಿಯಾದ ಯೋಗೀಶ್, ವಲಯದ ಮೇಲ್ವಿಚಾರಕರಾದ ವಿಶ್ವನಾಥ್ ದೇವಾಡಿಗ, ಸೇವಾಪ್ರತಿನಿಧಿಯಾದ ಕವಿತ, ಒಕ್ಕೂಟದ ಅಧ್ಯಕ್ಷರಾದ ಪದ್ಮಮ್ಮ, ಅತಿಥಿ ಶಿಕ್ಷಕಿಯಾದ ರಮಾದೇವಿ ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...