ಮುಸಾಫಿರ್ ಖಾನೆ ಜಾಗದಲ್ಲಿ ಮಳಿಗೆ ನಡೆಸುತ್ತಿವವರಿಗೆ ನೂತನ ಕಟ್ಟಡದಲ್ಲಿ ಮಳಿಗೆ ನೀಡಲು ನಿರ್ಣಯ

Source: sonews | By Staff Correspondent | Published on 3rd July 2018, 7:00 PM | State News | Don't Miss |

ಶ್ರೀನಿವಾಸಪುರ: ಮುಸಾಫೀರ್‍ಖಾನೆ ಜಾಗದಲ್ಲಿ ಸುಮಾರು ವರ್ಷಗಳಿಂದ 15ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಈಗ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ಅವರಿಗೆ ಮಳಿಗೆಗಳನ್ನು ನೀಡಬೇಕೆಂಬ ಪ್ರಸ್ತಾವನೆಗೆ ಸರ್ವಸದಸ್ಯರು ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದ ಘಟನೆ ಇಂದು ಪುರಸಭೆಯಲ್ಲಿ ನಡೆಯಿತು.
   
ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭಾಧ್ಯಕ್ಷೆ ರತ್ನಮ್ಮ ನಾಗರಾಜ್ ರವರ ಅಧ್ಯಕ್ಷತೆಯಲ್ಲಿ ಮಂಗಳವಾರ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಮುಸಾಫೀರ್‍ಖಾನೆ ಜಾಗದಲ್ಲಿ ಪುರಸಭೆವತಿಯಿಂದ 59ನೂತನ ವಾಣಿಜ್ಯ ಮಳಿಗೆಗಳ ಕಾಂಪ್ಲೆಕ್ಸ್ ಹರಾಜು ಪ್ರಕ್ರಿಯೆಗೆ ಕರಡು ಪ್ರತಿಯನ್ನು ಸಿದ್ದ ಪಡಿಸಿ ಜಿಲ್ಲಾಧಿಕಾರಿಗಳ ಅನುಮೋಧನೆಗೆ ಕಳುಹಿಸುವ ಸಲುವಾಗಿ ನಡೆದ ವಿಶೇಷ ಸಭೆಯಲ್ಲಿ ಹಾಜರಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಸರ್ವ ಸದಸ್ಯರು ಈಗಾಗಲೆ ಈ ಜಾಗದಲ್ಲಿ ವ್ಯಾಪಾರ ನಡೆಸುತ್ತಿದ್ದ 15ಮಳಿಗೆಗಳನ್ನು ಅವರಿಗೆ ನೀಡಬೇಕೆಂದು ಸಮ್ಮತಿ ಸೂಚಿಸಿದರು. ಸರ್ಕಾರದ ಮೀಸಲಾತಿ ಆದಾರದ ಅನ್ವಯ ಶೇ.24.10ರಂತೆ ಎಸ್.ಸಿ.ಗೆ16.5 ಮತ್ತು ಎಸ್.ಟಿ.ಗೆ 6.95 ಹಾಗೂ ವಿಕಲಚೇತನರಿಗೆ ಶೇ.3ರಂತೆ ಮಳಿಗೆಗಳನ್ನು ನೀಡಲು ನಿರ್ಧರಿಸಲಾಯಿತು.
     
ಪುರಸಭೆಗೆ ಆದಾಯ ಹೆಚ್ಚಿಗೆ ಬರುವಂತೆ ಸರ್ಕಾರದ ಸುತ್ತೊಲೆಯನ್ವಯ ನಿಗಧಿಪಡಿಸಲಾಗಿದ್ದ ಮರುಪಾವತಿ ಠೇವಣಿ ಮತ್ತು ಬಾಡಿಗೆಯನ್ನು ಶೇ.25ರಂತೆ ನಿಗಧಿಪಡಿಸಲು ಸದಸ್ಯರು ಸಮ್ಮತಿಸಿದರು. ಇದರಂತೆ ಸೆಲ್ಲರ್‍ನಲ್ಲಿ 23ಮಳಿಗೆಗಳು, ನೆಲ ಅಂತಸ್ತಿನಲ್ಲಿ 18, ಮೊದಲ ಅಂತಸ್ತಿನಲ್ಲಿ 18ಮಳಿಗೆಗಳನ್ನು ನಿರ್ಮಿಸಲಾಗಿದೆ. ಸೆಲ್ಲರ್‍ನಲ್ಲಿ ಇತರರಿಗೆ 12 ಪರಿಶಿಷ್ಟ ಜಾತಿಗೆ4, ಪರಿಶಿಷ್ಟಪಂಗಡಕ್ಕೆ2 ಮತ್ತು ವಿಕಲಚೇತನರಿಗೆ1 ಮಳಿಗೆಯನ್ನು ನೀಡಲು ನಿಗಧಿಪಡಿಸಲಾಯಿತು. ನೆಲ ಅಂತಸ್ತಿನಲ್ಲಿ ಮೊದಲು ವ್ಯಾಪಾರ ನಡೆಸುತ್ತಿದ್ದ 15ಮಳಿಗೆಗಳನ್ನು ನೀಡಿ ಎಸ್.ಸಿ1, ಎಸ್.ಟಿ.1 ಮತ್ತು ವಿಕಲಚೇತನರಿಗೆ 1ಮಳಿಗೆ ಎಂದು ನಿರ್ಧರಿಸಲಾಯಿತು. ಮೊದಲ ಅಂತಸ್ತಿನಲ್ಲಿ 12ಇತರರಿಗೆ ಎಸ್.ಸಿ5, ಎಸ್.ಟಿ1 ರಂತೆ ನೀಡಬೇಕೆಂದು ಸದಸ್ಯರು ಸೂಚಿಸಿದರು.
ಪುರಸಭೆಯ ನಾಮ ನಿರ್ಧೇಶನ ಸದಸ್ಯ ಜಯಣ್ಣ ಪುರಸಭೆ ಮಳಿಗೆಗಳನ್ನು ಬಾಡಿಗೆಗೆ ಪಡೆದುಕೊಂಡು ಇತರರಿಗೆ ಹೆಚ್ಚು ಬಾಡಿಗೆಗೆ ನೀಡುತ್ತಿದ್ದಾರೆ. ಪುರಸಭೆಗೆ ಆದಾಯ ಬರಬೇಕು ಆದ್ದರಿಂದ ಅಂತಹ ಮಳಿಗೆಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕೆಂದು ಮುಖ್ಯಾಧಿಕಾರಿಗಳಿಗೆ ತಿಳಿಸಿದ ಸಂದರ್ಭದಲ್ಲಿ ಮುಖ್ಯಾಧಿಕಾರಿ ಸತ್ಯನಾರಾಯಣ್ ರವರು ನಾಮ ನಿರ್ಧೇಶನ ಸದಸ್ಯರು ಕಾನೂನಾತ್ಮಕ ಸಲಹೆ ಸೂಚನೆಗಳನ್ನಷ್ಟೆ ನೀಡ ಬೇಕೆ ಹೊರತು ಇತರ ವಿಷಯಗಳಲ್ಲಿ ಮೂಗು ತೂರಿಸಬಾರದು ಎಂದು ತುಚ್ಚವಾಗಿ ನುಡಿದರು. 
ಪುರಸಭೆಯಲ್ಲಿ ಒಳಚರಂಡಿ ಕಾರ್ಯವನ್ನು ನಿರ್ವಹಿಸುತ್ತಿರುವ ನೌಕರರಿಗೆ 5ತಿಂಗಳ ವೇತನ ನೀಡಿಲ್ಲ ಮತ್ತು ಅವರ ಕುಟುಂಬ ನಿರ್ವಹಣೆ ದುಸ್ತರವಾಗಿದೆ ಎಂದು ಸದಸ್ಯ ಬಿ.ಎಂ.ಪ್ರಕಾಶ್ ಮುಖ್ಯಾಧಿಕಾರಿಗಳಿಗೆ ಪ್ರಶ್ನಿಸಿದರು. ಹಣಕಾಸಿನ ವಿಷಯಕ್ಕೆ ಸಂಬಂದಿಸಿದಂತೆ ತಾಂತ್ರಿಕ ದೋಷಗಳಿಂದ ನೀಡಿಲ್ಲ. ಈಗ ಎಲ್ಲವೂ ಸುಗಮವಾಗಿ ನಡೆಯುತ್ತಿರುವುದರಿಂದ ಎಲ್ಲಾ ತಿಂಗಳ ವೇತನವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಪುರಸಭೆಗೆ ವಾಣಿಜ್ಯ ಮಳಿಗೆಗಳಿಂದ ಬಾಡಿಗೆ 41ಲಕ್ಷ ಬಾಕಿ: ಪಟ್ಟಣದಲ್ಲಿ ಪುರಸಭೆಯ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಪಡೆದುಕೊಂಡು ಸುಮಾರು 41ಲಕ್ಷ ರೂಗಳು ಬಾಕಿ ಇರುವುದರಿಂದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಬಾಡಿಗೆ ವಸೂಲಿಗೆ ಹೋದ ಸಂದರ್ಭದಲ್ಲಿ ಮಳಿಗೆಗಳು ಮುಚ್ಚಿರುತ್ತವೆ. ಆದ ಕಾರಣ ಮಾಸಿಕ ಬಾಡಿಗೆ ವಸೂಲಿಯಾಗುತ್ತಿಲ್ಲ ಎಂದರು. ಸದಸ್ಯ ಪ್ರಕಾಶ್ ಈ ಮಾತಿಗೆ ಆಕ್ರೋಶಗೊಂಡು ಅಧಿಕಾರಿಗಳು ಪಟ್ಟಣದಲ್ಲಿ ಮಳಿಗೆಗಳ ಬಳಿ ತೆರಳಿ ನೋಡ ಬೇಕು. ಪುರಸಬೆಗೆ ಬರಬೇಕಾದ ಹಣ ಬರಲಿಲ್ಲ ಎಂದರೆ ಪಟ್ಟಣದ ಅಭಿವೃದ್ಧಿ ಕೆಲಸಗಳು ನಡೆಯುವುದಾದರೆ ಹೇಗೆ ಎಂದು ಛೇಡಿಸಿದರು.


ಈ ಸಭೆಯಲ್ಲಿ ಪುರಸಭೆಗೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾದ ಆರ್.ಇಮ್ರಾನ್‍ಪಾಷಾ ರವರನ್ನು ಸಭೆಗೆ ಪರಿಚಯಿಸಿ ಹೂಮಾಲೆಯ ಮುಕಾಂತರ ಸ್ವಾಗತಿಸಿದರು. ಉಪಾಧ್ಯಕ್ಷ ಟಿ.ಎಂ.ಬಿ.ಮುಖ್ತಿಯಾರ್ ಹಾಗೂ ಇತರೆ 13ಸದಸ್ಯರು ಹಾಜರಿದ್ದರು.
    
     

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...