ಎಪಿಎಂಸಿ ಪ್ರಾಂಗಣದಲ್ಲಿ ಕೊಳೆ; ಸಾಂಕ್ರಾಮಿಕ ರೋಗ ಹರಡುವ ಭಯ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ

Source: sonews | By Staff Correspondent | Published on 5th July 2018, 7:04 PM | State News | Don't Miss |

ಶ್ರೀನಿವಾಸಪುರ: ಕಸದ ತಿಪ್ಪೆಯಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ಕೊಳೆ ಮಾವಿನ ರಾಶಿಗಳನ್ನು ತೆಗೆಸಬೇಕೆಂದು ಈ ಮುಂಚೆ ಮನವಿ ಮಾಡಿದ್ದರೂ ಎಪಿಎಂಸಿ ಅಧಿಕಾರಿಗಳು ಹಾಗು ಆಡಳಿತ ಮಂಡಳಿ ನಿರ್ಲಕ್ಷ ವಹಿಸಿ ಜನರ ಪ್ರಾಣಗಳ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಆರೋಪ ಮಾಡಿದರು.

ಶ್ರೀನಿವಾಸಪುರ ಎಪಿಎಂಸಿ ಪ್ರಾಂಗಣದಲ್ಲಿ ಗುರುವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವೇದಿಕೆ ವತಿಯಿಂದ  ಆಡಳಿತ ಮಂಡಳಿ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವೇದಿಕೆ ಮುಖಂಡರು ಮಾತನಾಡಿ ಎಪಿಎಂಸಿ ಪ್ರಾಂಗಣದಲ್ಲಿ ಸೀಜನ್ ಸಮಯದಲ್ಲಿ ಸಾವಿರಾರು ಮಂದಿ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ ಆದರೆ ಇಲ್ಲಿ ಮಂಡಿಗಳಲ್ಲಿ ಬಂದ ಮಾವು ಕೊಳೆತ ನಂತರ ಇಲ್ಲಿಯೇ ರಾಶಿರಾಶಿಯಾಗಿ ಹಾಕುವುದರಿಂದ ಜನರ ಆರೋಗ್ಯದ ದುಷ್ಪರಿಣಾಮ ಬೀರುತ್ತದೆ ಎಂದು ಅಪಾದಿಸಿದರು.
ಆದ್ದರಿಂದ ಕೊಳೆತ ಕಾಯಿಗಳನ್ನು ತೆಗೆದು ಸ್ವಚ್ಚತೆ ಕಾಪಾಡಬೇಕೆಂದು ಜೂನ್ 30ರಂದು ಆಡಳಿತ ಮಂಡಳಿಯ ಅಧ್ಯಕ್ಷರಿಗೆ ಹಾಗು ಕಾರ್ಯದರ್ಶಿಗಳಿಗೆ ಸೇರಿದಂತೆ ಪುರಸಭೆ ಹಾಗು ತಹಶೀಲ್ದಾರರಿಗೆ ಈ ಬಗ್ಗೆ ಮನವಿಯನ್ನು ಸಲ್ಲಿಸಲಾಗಿತ್ತು ಆದರೂ ಇದುವರಿಗೂ ಪ್ರಯೋಜನ ಕಂಡು ಬರದ ಕಾರಣ ಪ್ರತಿಭಟನೆ ಅನಿವಾರ್ಯವಾಗಿ ಹಮ್ಮಿಕೊಳ್ಳಬೇಕಾಯಿತು. ಎಂದರು. ಸದರಿ ಎಪಿಎಂಸಿ ಪ್ರಾಂಗಣದಲ್ಲಿ ಮಾವು ವಹಿವಾಟು ಆರಂಭಗೊಂಡು 2 ತಿಂಗಳಿಗೆ ಸಮೀಪಿಸುತ್ತಿದೆ ಆದರೆ ಕೊಳೆತ ಕಾಯಿಗಳನ್ನು ದೂರ ಸಾಗಿಸುವ ಕೆಲಸ ಮಾಡದೇ ಅಧಿಕಾರಿಗಳು ಸಬೂಬುಗಳನ್ನು ಹೇಳುತ್ತಾ ನುಣಚಿಕೊಳ್ಳುತ್ತಿದ್ದಾರೆ  ಇಡೀ ವಿಶ್ವದ ಗಮನ ಸೆಳೆದ ಮಾವಿನ ನಾಡು ಶ್ರೀನಿವಾಸಪುರ ಎಪಿಎಂಸಿ ಪ್ರಾಂಗಣ ಅನೈರ್ಮಲ್ಯದಿಂದ ಕೂಡಿದೆ ಎಂದು ವಿಷಾದಿಸಿದರು.

ಇಲ್ಲಿ ಕೂಲಿಯಾಳುಗಳು, ವ್ಯಾಪಾರಸ್ಥರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಇರುವ ಸ್ಥಳದಲ್ಲಿ ಸ್ವಚ್ಛತೆ ಕನಸಾಗಿ ದುರ್ವಾಸನೆ ಎಲ್ಲೆಲ್ಲೂ ವ್ಯಾಪಿಸಿಕೊಂಡಿದೆ. ಪ್ರಾಂಗಣದಲ್ಲಿ ಇರಬೇಕಾದರೆ ಮೂಗು ಮುಚ್ಚಿಕೊಂಡು ಇರಬೇಕು ಎಂದರು. ಈಗಾಗಿ ಸ್ವಚ್ಚತೆಗಾಗಿ ಎಪಿಎಂಸಿ ನಿರ್ಲಕ್ಷ ತಾಳಿದೆ ಎಂದರು. ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿಗಳ ಅನುಪಸ್ಥಿಯಲ್ಲಿ ಸಿಬ್ಬಂದಿ ಹಾಗು ಆಡಳಿತ ಮಂಡಳಿ ಅಧ್ಯಕ್ಷೆ ಶ್ಯಾಮಲಾ ರವರ ಪತಿ ಪ್ರತಿಭಟನೆಕಾರರೊಂದಿಗೆ ಮಾತನಾಡಿ ಈಗಾಗಲೇ ಕಾಯಿಗಳನ್ನು ದೂರ ಸಾಗಿಸುವ ಕೆಲಸ ಮಾಡುತ್ತಿದ್ದೇವೆ ಕೂಡಲೇ ಎಲ್ಲಾ ಮಾಡಿ ಎಂದರೆ ಆಗುವುದಿಲ್ಲ ಪ್ರತಿದಿನ ಈ ಕೆಲಸದಲ್ಲಿ ತೊಡಗಿದ್ದೇವೆ ಎಂದರು. ಈ ಮದ್ಯೆ ಮಾತಿಗಿಳಿದ  ಸಂಘಟನೆಯ ಮುಖಂಡರು. ಏನಾದರೊಮದು ಸಬೂಬು ಹೇಳುತ್ತಿದ್ದೀರಿ ಎಪಿಎಂಸಿಯ ಕಾರ್ಯದರ್ಶಿಗಳನ್ನು ಕರೆಸಿ ಎಂದಾಗ ಅವರು ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದಾರೆಂದರು ಇದರಿಂದ ಕುಪಿತಗೊಂಡ ಪ್ರತಿಭಟನಾಕಾರರು ಯಾವಾಗಲೂ ಅವರಿಗೆ ಮೀಟಿಂಗ್ ಇಲ್ಲಿ ಮಾಡುವುದಾರರೂ ಏನೆಂದು ಅಕ್ರೋಶವ್ಯಕ್ತಪಡಿಸಿದರು. ಸ್ವಚ್ಚತೆ ಮಾಡಲು ತಮಗೆ ಏನು ಸಮಸ್ಯೆ ಜನ ಇಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆಂದರು.  ಕೊಳೆತ ಕಾಯಿಗಳು ದುರ್ವಾಸನೆಗೆ ಕಾರಣವಾಗಿದೆ  ಎಂದರು. ಆಡಳಿತ ಮಂಡಳಿಯ ಕೆಲವರು ರೈತರು ತರುತ್ತಾರೆ ಮಂಡಿಗಳವರು ಕೊಳೆತ ಕಾಯಿಗಳನ್ನು ಪ್ರಾಂಗಣದಲ್ಲಿ ಎಸೆಯುತ್ತಾರೆ ಆದರೂ ನಾವು ಸ್ವಚ್ಚತೆಗೆ ಆದ್ಯತೆ ನೀಡುತ್ತಿದ್ದೇವೆ ಎಂದರು ಕೊಳೆತ ಕಾಯಿಗಳನ್ನು ರೈತರು ತರುವುದಿಲ್ಲ ಎಂದಾಗ ಆಡಳಿತ ಮಂಡಳಿಯ ಅಧಿಕಾರಿಗಳು ಹಾಗು ಪ್ರತಿಭಟನಾಕಾರರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಒಂದೆರಡು ದಿನದಲ್ಲಿ ಸ್ವಚ್ಚತೆ ಪೂರ್ಣಗೊಳಿಸುತ್ತೇವೆ ಎಂದಾಗ ಹಾಗೆಂದು ಬರವಣಿಗೆಯಲ್ಲಿ ಕೊಡಿ ಎಂದು ಪ್ರತಿಭಟನೆಕಾರರು ಕೇಳಿದಾಗ ಮತ್ತಷ್ಟು ಮಾತಿನ ಚಕಮಕಿ ಎರಡುಕಡೆಯಿಂದ ನಡೆಯಿತು. ಕೊನೆಗೂ ಆಡಳಿತ ಮಂಡಳಿಯವರು 4 ದಿನದೊಳಗೆ ಸ್ವಚ್ಚಗೊಳಿಸುತ್ತೇವೆ ಒಂದು ವೇಳೆ ಹಾಗೆ ಮಾಡದಿದ್ದಲ್ಲಿ ತವು ಬಂದು ಪ್ರತಿಭಟನೆ ಮಾಡಬಹುದು ಎಂದಾಗ ಪ್ರತಿಭಟನೆ ಹಿಂತೆಗೆದುಕೊಂಡು ಮನವಿಯನ್ನು ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವೈ.ಬಿ.ಮಂಜುನಾಥ್, ಟಿ.ಸುಬ್ರಮಣಿ, ಸಂತೋಷ್, ಸುರೇಶ್, ನವೀನ್, ಶಿವಣ್ಣ, ಅಂಬರೀಶ್, ನರಸಿಂಹರಾಜ್, ಸತೀಶ್, ನಾಗೇಶ್ ಇತರರು ನೇತೃತ್ವ ವಹಿಸಿದ್ದರು.
 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...