ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಯೋಜನೆಗಳನ್ನು ಮುಖ್ಯಮಂತ್ರಿ ಜಾರಿ ಮಾಡಲಿದ್ದಾರೆ

Source: sonews | By Staff Correspondent | Published on 4th June 2018, 11:26 PM | State News | Don't Miss |

ಶ್ರೀನಿವಾಸಪುರ: ಪಕ್ಷಕ್ಕೆ ಸ್ಥಾನಗಳು ಕಡಿಮೆ ಬಂದರೂ ಜನತೆಯಿಂದ ಸೋತಿಲ್ಲ ಕೆಲವು ಕಾರಣಗಳಿಂದ ಬಲಿಪಶುವಾಗಿದ್ದೇವೆ ಆದರೂ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಯೋಜನೆಗಳನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಾರಿ ಮಾಡಲಿದ್ದಾರೆಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ರವರು ತಿಳಿಸಿದರು. 

ಶ್ರೀನಿವಾಸಪುರ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನೂತನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ಕೇಕ್ ಕತ್ತರಿಸುವ ಮೂಲಕ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಚುನಾವಣೆ ನಂತರ ಪ್ರಥಮ ಬಾರಿಗೆ ಕರೆದಿದ್ದ  ಸುದ್ದಿಗೋಷ್ಟಿಯಲ್ಲಿ ರಾಜ್ಯದ ಜನರ ಅಪೇಕ್ಷೆಯಂತೆ ಹೆಚ್.ಡಿ.ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾಗಿರುವುದು ನಮ್ಮ ಅದೃಷ್ಟವಾಗಿದೆ ಅದೇ ರೀತಿ ಜನ ಅನೇಕ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಈಗಾಗಲೇ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಕುಮಾರಸ್ವಾಮಿ ರವರು ಯೋಜನೆಗಳನ್ನು ನೆರವೇರಿಸಲು ಬದ್ದರಾಗಿದ್ದಾರೆ ಆದರೂ ಸಮಿಶ್ರ ಸರ್ಕಾರವಾಗಿದೆ ಪ್ರಣಾಳಿಕೆಯಲ್ಲಿ ಮುಖ್ಯವಾದ ಸಾಲಮನ್ನಾ ವಿಚಾರದಲ್ಲಿ ಮಿತ್ರಪಕ್ಷ ಕಾಂಗ್ರೆಸ್‍ನೊಂದಿಗೆ ಚರ್ಚೆ ಮಾಡಿ 15 ದಿನಗಳಲ್ಲಿ ಜಾರಿ ಮಾಡಲಾಗುತ್ತದೆ ಎಂದು ವಿಧಾನಸೌಧದಲ್ಲಿ ಎಲ್ಲಾ ರೈತರ ಮುಂದೆ ಕುಮಾರಸ್ವಾಮಿ ರವರು ತಿಳಿಸಿದ್ದಾರೆಂದು ತಿಳಿಸಿದರು. ಅದೇ ರೀತಿ ಅನೇಕ ಯೋಜನೆಗಳು ಹಾಗೂ ಜನಪರ ಕೆಲಸಗಳು ಮಾಡುವ ಆಸೆ ವ್ಯಕ್ತಪಡಿಸಿದ್ದಾರೆಂದರು. 

    ವಿಶೇಷವಾಗಿ ಜಿಲ್ಲೆಗೆ ಶಾಶ್ವತ ನೀರಾವರಿ ತರಲು ನಾವು ಈ ಮೂಲಕ ಮನ್ಯ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುತ್ತ್ತಿದ್ದೇವೆ ಎಂದರು ಜನರಿಗೆ ಹತ್ತಿರವಾಗಿ ಮುಖ್ಯಮಂತ್ರಿಗಳು ಸ್ಪಂಧಿಸುವ ನಿಟ್ಟಿನಲ್ಲಿದ್ದಾರೆ ಜನತೆ ಅಪೇಕ್ಷೆಯಂತೆ ಒಳ್ಳೆಯ ಆಡಳಿತ ಸಹ ಕೊಡುತ್ತಾರೆಂದರು. ಈಗಾಗಲೇ ಜನತಾದರ್ಶನ ಪ್ರಾರಂಭಿಸಿದ್ದಾರೆ ಅದೇ ರೀತಿ ದೇವರು ಒಳ್ಳೆಯ ಆರೋಗ್ಯ ಅವರಿಗೆ ಕೊಟ್ಟು ಜನರ ಜಲಂತ ಸಮಸ್ಯೆಗಳನ್ನು ಬಗೆಹರಿಸಲಿ ಎಂದರು ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ಒತ್ತು ನೀಡಲಿದ್ದಾರೆ ಅದೇ ರೀತಿ ಈ ಕ್ಷೇತ್ರ ಬಗ್ಗೆ ಬಹಳಷ್ಟು ಪ್ರೀತಿ ವಿಶ್ವಾಸ ಇಟ್ಟಿದ್ದರು ಎಂದು ಬಾವುಕರಾಗಿ ನುಡಿದರು. 

ಸಂಬಂಧಪಟ್ಟಂತೆ ಈ ಕ್ಷೇತ್ರ ಜನತೆ ಅಪಾರ ವಿಶ್ವಾಸವಿಟ್ಟು ಹೆಚ್ಚಿನ ಮತ ನೀಡಿದ್ದಾರೆ ಎಲ್ಲಾ ಮತದಾರರಿಗೂ ಹಾಗೂ ಈ ಕ್ಷೇತ್ರದ ಜನತೆಗೆ ಧನ್ಯವಾದಗಳನ್ನು ಅರ್ಪಿಸುವಾಗಿ ತಿಳಿಸಿದರು. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಇನ್ನು 30 ಸ್ಥಾನಗಳನ್ನು ಗಳಿಸಬೇಕಾಗಿತ್ತು ಕೆಲವು ಕಾರಣಗಳಿಂದ ಕಡಿಮೆ ಸ್ಥಾನಗಳು ಕಡಿಮೆ ಬಂದಿದೆ ಆದರೂ ಮತದಾರರು ಜೆಡಿಎಸ್‍ನ್ನು ಬೆಂಬಲಿಸಿದ್ದಾರೆಂದರು. ಹಾಗಾಗಿ ಈ ಜಿಲ್ಲೆಯ ಮತದಾರರಿಗೂ ಕೃತಜ್ಞತೆಗಳನ್ನು ಅರ್ಪಿಸುವುದಾಗಿ ತಿಳಿಸಿದರು. 
        
ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಮುಖ್ಯ ಮಂತ್ರಿಗಳು ನಮ್ಮ ಪಕ್ಷದವರೇ ಆಗಿರುವುದರಿಂದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಅದೇ ರೀತಿ ಈ ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಸದಾ ಸ್ಪಂಧಿಸುವುದಾಗಿ ಹೇಳಿದರು. ಮೊದಲಿನಿಂದಲೂ ನಡೆದುಕೊಂಡ ಬಂದ ರೀತಿಯಲ್ಲಿ ತಾನು ಸೇವೆ ಮಾಡುವುದಾಗಿ ತಿಳಿಸಿದರು.
    ನಮ್ಮ ಜಿಲ್ಲೆಯಲ್ಲಿ ನೀರಿನ ಪ್ರಾಜೆಕ್ಟ್  ಯರ್ರಗೋಳ್‍ಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 250 ಕೋಟಿ ರೂ ಯೋಜನೆ ಜಾರಿ ಮಾಡಿದ್ದರು. ಈಗ ಅದನ್ನು ಪೂರ್ಣಗೊಳಿಸಲು ಮುಂದಾಗಬೇಕೆಂದು ಒತ್ತಾಯಿಸಿದರು. 
        
ಅಲ್ಲದೇ ಶಾಶ್ವತ ನೀರಾವರಿ ಯೋಜನೆಗಳು ಜಾರಿಗೆ ತರುವಲ್ಲಿ ಮುಖ್ಯಮಂತ್ರಿಗಳು ಗಮನಹರಿಸಬೇಕೆಂದು ಈ ಮೂಲಕ ಮನವಿ ಮಾಡಿದರು. ಹಿಂದೆ ರೈತರ ಬೆಳೆಗಳಿಗೆ ನೀಡುತ್ತಿದ್ದ ಬೆಂಬಲ ಬೆಳೆ ಕೊಡುವ ವ್ಯವಸ್ಥೆ ಈಗಲೂ ಮಾಡಲು ಮುಖ್ಯಮಂತ್ರಿಗಳಿಗೆ ಮನಸ್ಸಿದೆ. ಜನರಿಗೆ ಸ್ಪಂಧಿಸಲು ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಿದ್ದಾರೆಂದರು. 
        
ಅದೇ ರೀತಿ ಕೆ.ಸಿ ವ್ಯಾಲಿ ಯೊಜನೆಯ ನೀರು ಹರಿಸು ಬಂದಿದೆ ಆದರೆ  ಈ ನೀರನ್ನು ಮತ್ತಷ್ಟು ಶುದ್ದಿಗೊಳಿಸಿ ಭೂಮಿ, ಬೆಳೆ ಜನರಿಗೆ ತೊಂದರೆಯಾಗದಂತೆ ವಿಜ್ಞಾನಿಗಳ ಸಲಹೆ, ಪರೀಕ್ಷೆ ಮಾಡುವ ಮೂಲಕ ಈ ನೀರು ಕೊಡಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು. ಪ್ರಸ್ತುತ ಶಿಕ್ಷಕರ ಆಗ್ನೇಯ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಪರವಾಗಿ ಸ್ಪರ್ಧಿಸಿರುವ ರಮೇಶ್‍ಬಾಬು ರವರನ್ನು ಗೆಲ್ಲಿಸುವ ಮೂಲಕ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಂದಾಗಬೇಕೆಂದು ಮನವಿ ಮಾಡಿದರು. 

ಸುದ್ದಿಗೋಷ್ಠಿಯಲ್ಲಿ ಜಿ.ಪಂ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಹಿರಿಯ ವಕೀಲ ಹಾಗೂ ಜೆಡಿಎಸ್ ತಾಲ್ಲೂಕು ಮುಖಂಡ ಕೇಶವಪ್ಪ, ಬಿ.ವೆಂಕಟರೆಡ್ಡಿ, ಜಿ.ರಾಜಣ್ಣ, ಶಿವಪುರ ಗಣೇಶ್, ತಾ.ಪಂ. ಸದಸ್ಯ ಚಲ್ದಿಗಾನಹಳ್ಳಿ ಮೋಹನ್, ಬೈರಾರೆಡ್ಡಿ, ಪಾತಪೇಟೆ ನಾರಾಯಣಸ್ವಾಮಿ ಲಕ್ಷ್ಮಣ್‍ರೆಡ್ಡಿ, ಎ.ಎನ್.ಜಗದೀಶ್, ಎಸ್.ಆರ್.ಮುನಿಕ್ರಿಷ್ಣ, ಮೇಸ್ತ್ರೀ ಸೀನಪ್ಪ, ಪೂಲು ಶಿವಾರೆಡ್ಡಿ, ಹೋಳೂರು ಸಂತೋಷ್, ಸೋನಿ, ಗಿರೀಶ್ ಇತರರು ಹಾಜರಿದ್ದರು. 

 

Read These Next

ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ