ಸಿದ್ದರಾಮಯ್ಯ ನವರಿಗೆ ಜೆಡಿಎಸ್ ಬಿರುಗಾಳಿಯಿಂದ ನಡುಕ ಪ್ರಾರಂಭವಾಗಿದೆ-ಹೆಚ್.ಡಿ.ಕುಮಾರಸ್ವಾಮಿ

Source: sonews | By Staff Correspondent | Published on 1st May 2018, 11:55 PM | State News | Don't Miss |

ಶ್ರೀನಿವಾಸಪುರ: ರಾಜ್ಯದಲ್ಲಿ 3800 ರೈತರ ಆತ್ಮಹತ್ಯೆಗಳು ನಡೆದಿವೆ ಆದರೆ ರೈತರ ಬದಕನ್ನು ಹಸನು ಮಾಡಬೇಕಾದ ಸರ್ಕಾರ ರೈತರು  ಮಾಡಿದ 40 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಲು ಸಾಧ್ಯವಾಗಿಲ್ಲ ಆದರೂ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಹಾಗು ಸಹಕಾರ ಸಂಘಗಳಲ್ಲಿನ ಹಾಗು ಸ್ತ್ರೀಶಕ್ತಿ ಸಂಘಗಳ ಸಂಪೂರ್ಣ ಸಾಲವನ್ನು ಮನ್ನಾ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಹೇಳಿದರು.
 

ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಬೃಹತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜನಕ್ಕೆ ಅನ್ನ ಕೊಡುವ ರೈತರ ನೆರವಿಗೆ ಬಾರದ ಸರ್ಕಾರದಿಂದ ಜೀವನ ನಡೆಸಲು ಅಥವಾ ಕುಟುಂಬಗಳಿಗೆ ಆದಾರವಾಗಿರುವ ರೈತರು ಮಾಡಿದ ಸಾಲ ತೀರಿಸಲಾಗದೇ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆತ್ಮಹತ್ಯೆಗಳನ್ನು ಮಾಡಿಕೊಂಡಿದ್ದಾರೆ. ಅದೇ ರೀತಿ ತಾಯಂದಿರು ಸ್ತ್ರೀಶಕ್ತಿ ಸಂಘಗಳ ಮೂಲಕ 4300 ಸಾವಿರ ಕೋಟಿ ಸಾಲ, ರೈತರು ಮಾಡಿದ ಸಾಲ ಅಧಿಕಾರಕ್ಕೆ ಬಂದೊಡನೆ ಮನ್ನಾ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. ರೈತರಿಗೆ ಅನುಕೂಲವಾಗುವಂತೆ ಆಯಾ ಪ್ರದೇಶಗಳಿಗೆ ಅನುಕೂಲವಾಗುವಂತೆ  ಬೆಳೆ ಆದಾರಿತ ತಿಳುವಳಿಕೆ ನೀಡಲಾಗುತ್ತದೆ. 
   

ಯಾವುದೇ ಖಾಸಗೀ ಸಾಲ ಮಾಡಬೇಕಾದ ಅಗತ್ಯವಿಲ್ಲ ಸರ್ಕಾರದಿಂದಲೇ ನೀಡುವ ಯೋಜನೆ ಸಹ ರೂಪಿಸಲಾಗಿದೆ ಎಂದರು. ಅಲ್ಲದೇ ಸ್ತ್ರೀ ಸಂಘಗಳು ಆದಾಯ ತರುವ ಪದಾರ್ಥಗಳನ್ನು ಮಾಡುವ ಸಲುವಾಗಿ ಅವರಿಗೆ ಬದಕನ್ನು ಕಟ್ಟಿಕೊಡುವ ಯೋಜನೆಯನ್ನು ಪಕ್ಷ ಹಮ್ಮಿಕೊಂಡಿದೆ. ಇಳಿವಯಸ್ಸಿನಲ್ಲಿನ ಯಾವುದೇ ಜಾತಿ, ವರ್ಗ ಭೇದವಿಲ್ಲದೇ 65 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 5 ಸಾವಿರ ರೂ ವೇತನ ಹಾಗೆಯೇ ಬಡತನದಲ್ಲಿ ಪ್ವಷ್ಟಿಕಾಂಸ ಕೊರತೆಯಿಂದ ತಾಯಿ ಮಕ್ಕಳ ಸಾವುಗಳು ಕಂಡು ಬರುತ್ತಿದೆ ಇದು ಕರ್ನಾಟಕದಲ್ಲಿ ಹೆಚ್ಚಿದೆ ಆದ್ದರಿಂದ ತಾಯಿ ಮತ್ತು ಮಗುವಿನ ಸುರಕ್ಷತೆಗಾಗಿ ಪ್ರತಿ ತಿಂಗಳು 6 ಸಾವಿರ ರೂ ನಂತೆ 6 ತಿಂಗಳು ನೀಡಲಾಗುತ್ತದೆ ಎಂದರು. ಅದೇ ರೀತಿ  5 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿದ ಕುಟುಂಬಗಳ ಎಲ್ಲಾ ಸಮಾಜದ ಹೆಣ್ಣು ಮಕ್ಕಳಿಗೆ  ಪ್ರತಿ ಮಾಹೆ 2 ಸಾವಿರ ರೂನಂತೆ  ವೇತನ ನೀಡಲಾಗುತ್ತದೆ.  ಮುಸ್ಲಿಂ ಬಾಂದವರು ಮಾವಿನಕಾಯಿ ಹಾರ ಹಾಕಿ ಗೌರವಿಸಿದ್ದಾರೆ ಇವರಿಗೆ ನಾನು ಅಭಾರಿಯಾಗಿ ಅವರ ಕಷ್ಟ ಸುಖಕ್ಕೆ ತಾನು ಇರುವುದಾಗಿ ತಿಳಿಸಿದರು. 

ಸಿದ್ದರಾಮಯ್ಯ ನವರಿಗೆ ಜೆಡಿಎಸ್ ಬಿರುಗಾಳಿಯಿಂದ ನಡುಕ ಪ್ರಾರಂಭವಾಗಿದೆ ಅವರು ಮುಸ್ಲಿಂ ಬಾಂದವರಲ್ಲಿ ಜೆಡಿಎಸ್ ಪಕ್ಷ ಹಾಗು ನನ್ನ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ಅಮಿತ್‍ಶಾ ರವರನ್ನು ಡೆಲ್ಲಿಯಲ್ಲಿ ಬೇಟಿ  ಮಾಡಿ  ರಹಸ್ಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ  ತನ್ನನ್ನು ವಿರೋದಿ ಎಂಬ ಭಾವನೆಯನ್ನು ಕಲ್ಪಿಸಲು ಮುಂದಾಗಿರುವುದು ಸಿಎಂ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನವಾಗಿದೆ ಎಂದರು. ತನ್ನ ಸರ್ಕಾರ ಬಂದಲ್ಲಿ ಮುಸ್ಲಿಂ ರಕ್ಷಣೆ ನನ್ನ ಜವಾಬ್ದಾರಿಯಾಗಿರುತ್ತದೆ ಜೆಡಿಎಸ್ ಅದಿಕಾರಕ್ಕೆ ಬರುವ ಭಯದಲ್ಲಿ ಸಿದ್ದರಾಮಯ್ಯ ಮತಿಭ್ರಮಣೆಯಿಂದ ಸೌಹಾರ್ಧ ಭಾವನೆಯಲ್ಲಿರುವ  ರಾಜ್ಯದಲ್ಲಿನ ಮುಸ್ಲಿಂ ಭಾಂದವರಲ್ಲಿ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಆದ್ದರಿಂದ  ಜೆಡಿಎಸ್ ಎಂದೂ ಮುಸ್ಲಿಂ ಭಾಂದವರನ್ನು ಸಹೋದರ ಭಾವನೆಯಿಂದ ನಡೆಸಿಕೊಳ್ಳುತ್ತೇನೆ ಎಂದರು. 
   

ಸದಾ ಮೊಸಳೆ ಕಣ್ಣೀರು ಸುರಿಸುವ ಕೆ.ಆರ್.ರಮೇಶ್‍ಕುಮಾರ್ ರವರು ದೇವೇಗೌಡ ರವರ ಪಾಳಯದಲ್ಲಿ 20 ವರ್ಷ ಇದ್ದವರು  ಇವರ ನಡೆ ನುಡಿ ನನಗೆ ಚೆನ್ನಾಗಿ ಗೊತ್ತಿದೆ. ಯಾವುದೇ ಸಂದರ್ಬದಲ್ಲಿಯೂ ಇವರನ್ನು ನಂಬುವಂತಿಲ್ಲ ಕಪಟ ನಾಟಕವನ್ನು ಆಡುವವರಾಗಿದ್ದಾರೆ ಎಂದರು. ಆರೋಗಯ ಇಲಾಖೆ ಸರಿಪಡಿಸುತ್ತೇನೆಂದು ಕಂಪನಿಗಳ ಜೊತ ಶ್ಯಾಮೀಲಾಗಿ ಕಮೀಷನ್ ಪಡೆದು ಇಲಾಖೆಗೆ ಮಿಷನ್‍ಗಳನ್ನು ತಂದಿದ್ದಾರೆ ಎಂದರು ಕೋ-ಚಿ ಜಿಲ್ಲೆಗಳಿಗೆ ನೀರು ತರುವುದಾಗಿ ಹೇಳಿದ್ದರು ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ತಾನು ನಿಲ್ಲುವುದಿಲ್ಲವೆಂದಿದ್ದರು ಸಕಾರದ ಅವದಿ ಮುಗಿಯಿತು ಇನ್ನು ಮಾಡುವುದಾದರೂ ಏನೆಂದು ಮೂದಲಿಸಿದರು. ಜನರ ಆರೋಗ್ಯವನ್ನು ಸುದಾರಿಸಬೆಕಾದ ಆರೋಗ್ಯ ಸಚಿವರು ಈ ಜಿಲ್ಲೆಗಳಿಗೆ ಕೊಳಚೆ ನೀರು ತರುತ್ತೇನೆಂದು ಹೊರಟಿದ್ದಾರೆ ಅದು ಸಾದ್ಯವಾಗಿಲ್ಲ ಇನ್ನೇನು ಮಾಡಲು ಸಾದ್ಯವೆಂದು ವ್ಯಂಗ್ಯವಾಡಿದರು. ಒಂದಡೆ ಅಮಿತ್ ಶಾ ರಾಜ್ಯ ಸರ್ಕಾರ ಶೇ 10 ಪರ್ಸೆಂಟ್ ಎಂಸದರೆ ಸಿದ್ದಾರಾಮಯ್ಯ 90 ಪರ್ಸೆಂಟ್ ನಮ್ಮದು ಎನ್ನುತ್ತಾರೆ ಈ ಎರಡು ಕಾಂಗ್ರೆಸ್ ಹಾಗು ಬಿಜೆಪಿ ಸರ್ಕಾರಗಳು ಪರಸ್ಪರ ಹೇಳಿಕೊಂಡು ಜನರ ಬದುಕಿಗೆ ಸ್ಪಂದಿಸುವುದನ್ನೇ ಮರೆತಿದ್ದಾರೆಂದು ಲೇವಡಿ ಮಾಡಿದರು.  
 

ತಾನು ಸಿಎಂ ಆಗಿ ಮೆರೆಯಬೇಕೆಂದು ಬಂದಿಲ್ಲ ಜೆಡಿಎಸ್ ಅಭ್ಯರ್ಥಿಗಳನ್ನು ಆರಿಸಿ ಆಶೀರ್ವಾದ ಮಾಡಬೇಕೆಂದು ಬಂದಿದ್ದೇನೆ. ಜಿ.ಕೆ.ವೆಂಕಟಶಿವಾರೆಡ್ಡಿ ಇನ್ನೊಬ್ಬರಿಗೆ ದ್ರೋಹ ಬಗೆದವರಲ್ಲ, ಅಥವಾ ಸುಳ್ಳು ಹೇಳಿ ಯಾಮಾರಿಸುವವರಲ್ಲ ಇವರು ಒಂದು ರೀತಿ ಅಮಾಯಕರು. ಮುಂದಿನ ಸರ್ಕಾರದಲ್ಲಿ ಇವರು ಮಂತ್ರಿಆಯಗಿ ಕೆಲಸ ಮಾಡಬೇಕು ಜೆಡಿಎಸ್ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ರಾಜ್ಯದಲ್ಲಿ 113 ಸ್ಥಾನಗಳನ್ನು ಪಡೆಯುವ ಗುರಿ ಹೊಂದಲಾಗಿದೆ ಹಾಗಾಗಿ ಶ್ರೀನಿವಾಸಪರ ಅದರಲ್ಲಿ ಮೊದಲ  ಸ್ಥಾನ ನೀಡಬೇಕೆಂದು ಹೇಳಿದರು. ಅದೇ ರೀತಿ ಜಿಲ್ಲೆಯ 6 ಕ್ಷೇತ್ರಗಳನ್ನು ಗೆಲ್ಲಿಸುವ ಮೂಲಕ  ಜೆಡಿಎಸ್‍ನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
 

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ರವರು ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕಾವಗಿ ಮಾತನಾಡಿ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು ಕುಮಾರಸ್ವಾಮಿ ಹಾಗು ಜೆಡಿಎಸ್ ಪಕ್ಷ ಹಾಗು ನನ್ನ ಮೇಲೆ ನಂಬಿಕೆಯಿಟ್ಟು ಸೇರ್ಪಡೆಯಾಗಿ ಬಂದಿದ್ದಾರೆ ಇವರೆಲ್ಲರನ್ನು ಗೌರವದಿಂದ ಕಾಣುತ್ತೇನೆ. ತನಗೆ ಅಧಿಕಾರ ಇರಲಿ ಇಲ್ಲದಿರಲಿ ಎಲ್ಲರನ್ನು ಗೌರದಿಂದ ತನ್ನ ಮನೆಗೆ ಆಹ್ವಾನಿಸಿ ಅವರ ಕಷ್ಟ ಸುಖ ವಿಚಾರಿಸಿದ್ದೇನೆ ಎಂದರು ಜನ ಸಾವಿರಾರು ಸಂಖ್ಯೆಯಲ್ಲಿ ನನ್ನ ನಂಬಿ ಬಂದಿದ್ದಾರೆ ಇಂತಹ ಪ್ರೀತಿಗೆ ತಲೆ ಬಾಗುತ್ತೇನೆ ಎಂದರು. 
   

ವೆಂಕಟಶಿವಾರೆಡ್ಡಿಗೆ ಎಸ್‍ಎಸ್ಟಿ ಮೇಲೆ ಪ್ರೀತಿ ಇಲ್ಲ ಎಂದು ವಿರೋದಿಗಳು ಸೃಷ್ಟಿ ಮಾಡುತ್ತಿದ್ದಾರೆ ಆದರೆ ತಾಲ್ಲೂಕು ಕಚೇರಿ ಮುಂದೆ ಡಾ|| ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆ  ಹಾಗು ಅವರ ಹೆಸರಿನಲ್ಲಿ ಉದ್ಯಾನ ವನ ಸ್ಥಾಪಿಸಿದ್ದು ಈ ವೆಂಕಟಶಿವಾರೆಡ್ಡಿ ಎನ್ನುವುದು ನೆನಪಿಸಿಕೊಳ್ಳಬೇಕು ಎಸ್ಸಿ ಎಸ್ಟಿ ರವರಿಗೆ 1 ಸಾವಿರ ಕೊಳವೆ ಬಾವಿಗಳು ಬಂದಿವೆ ಒಬ್ಬರಿಗೂ ನೀಡಿಲ್ಲ ಯಾರಿಗೆ ಎಸ್ಸಿ ಎಸ್ಟಿ ರವರಿಗೆ ಪ್ರೀತಿ ಇದೆ ಎಂದು ಇದನ್ನು ತಿಳಿಯಬೇಕು ಎಂದರು. ಸಾವಿರಾರು ಮನೆಗಳನ್ನು ಕೊಟ್ಟಿದ್ದೇನೆ ಎನ್ನುತ್ತಾರೆ ಆದರೆ ಬಡವರಿಗೆ ಸಿಕ್ಕಿಲ್ಲ ಕೊತ್ತಪೇಟೆ ಗ್ರಾಮದಲ್ಲಿ ಒಬ್ಬರಿಗೆ 5 ಮನೆಗಳನ್ನು ನೀಡಿದ್ದೀರಿ ತಮ್ಮ ಹಿಂಬಾಲಕರಿಗೆ ಮಣೆ ಹಾಕಿದ್ದೀರಿ ಬಡವರಿಗೆ ಯಾಕೆ ಕೊಟ್ಟಿಲ್ಲ ಯಾರಿಗೆ ತಾವು ಮನೆ ಕೊಟ್ಟಿದ್ದೀರೆಂದು ಹೇಳಿ ಮಿಸ್ಟರ್ ರಮೇಶ್‍ಕುಮಾರ್ ರವರೇ ಎಂದು ಪ್ರಶ್ನೆ ಮಾಡಿದರು. ನೀರಿನ ವಿಚಾರದಲ್ಲಿ ಚಿಕ್ಕಬಳ್ಳಾಪುರದವರಿಗೆ ಪಾದಯಾತ್ರೆ ಮಾಡಿ ನೀರು ತರಿಸುವುದಾಗಿ ಇಲ್ಲದಿದ್ದರೆ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಾಟಕ ಸಹ ಮಾಡಿದ್ದರು. ಅದು ಕಾಂಗ್ರೆಸ್ ಸರ್ಕಾರಕ್ಕೆ  ಸಾದ್ಯವಾಗಿಲ್ಲ. ಎಂದರು.
 

ಎತ್ತಿನ ಹೊಳೆ ಯೋಜನೆಯಲ್ಲಿ  ಎಸ್ಸಿಎಸ್ಟಿ ರವರ ಹೆಸರೇಳಿ ಸಾವಿರಾರು ಕೋಟಿ ರೂಪಾಯಿ ತನ್ನ ಹಿಂಬಾಲಕರಾದ ಪಟ್ಟಭದ್ರ ಹಿತಾಸಕ್ತಿಗಳಿಗೆ ಜೇಬು ತುಂಬಿಸುವ ಮೂಲಕ ಲೂಠಿಯಾಗಿದೆ ಎಂದು ಆರೋಪಿಸಿದರು. ನಿಮ್ಮ ಹತ್ತಿರ ಹಣವಿದೆ ಆದರೆ ನನ್ನ ಬಳಿ ಹಣವಿಲ್ಲ ಜನರ ಆಶೀರ್ವಾದವಿದೆ ಎಂದರು. ಇಲ್ಲಿ ಹಿಂಬಾಲಕರಿಗೆ ನೀರಾವರಿ ಯೋಜನೆಯಲ್ಲಿ ಲೂಠಿ ಮಾಡಿ ಚುನವಣೆಯಲ್ಲಿ ಖರ್ಚು ಮಾಡಲು ಹೇಳಿದ್ದೀರಿ ಇನ್ನು ತಮ್ಮ ಆಟ ನಡೆಯದು ಈ ಚುನಾವಣೆಯಲ್ಲಿ ತಮಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಇನ್ನೊಂದಡೆ ಬಿಜೆಪಿ ಹಾಗು ಕಾಂಗ್ರೆಸ್ ರಾಜ್ಯದ ಮಾನ ಮರ್ಯಾದೆ ಕಳೆದಿದ್ದಾರೆ ಇವರಿ ಈ ಚುನಾವಣೆ ತಕ್ಕ ಶಾಸ್ತ್ರಿ ಮಾಡಲಿದೆ ಎಂದರು.

ಈ ಸಂದರ್ಭದಲ್ಲಿ ಕೋಲಾರ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಕೆ.ಶ್ರೀನಿವಾಸಗೌಡ, ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿ ಸಂಮೃದ್ದಿ ಮಂಜುನಾಥ್, ಬಂಗಾರುಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಆರ್. ಚೌಡರೆಡ್ಡಿ, ಜಿ.ಪಂ ಸದಸ್ಯರಾದ ಎಂ.ವಿ.ಶ್ರೀನಿವಾಸ್, ತೂಪಲ್ಲಿ ನಾರಾಯಣಸ್ವಾಮಿ, ರತ್ನಮ್ಮ ಗಣೇಶ್, ತಾಲ್ಲೂಕು ಜೆಡಿಎಸ್ ಮುಖಂಡ ಹಾಗು ಹಿರಿಯ ವಕೀಲ ಕೆ.ಶಿವಪ್ಪ, ಅತ್ಥಾವುಲ್ಲಾ ಖಾನ್, ಪಾತಪೇಟೆ ಮಂಜು,  ಮಹಬೂಬ್ ಷರೀಪ್, ಅನ್ವರ್, ಬಿಎಸ್ಪಿ ಅಧ್ಯಕ್ಷ ಪ್ರಸಾದ್, ಏಜಾಜ್‍ಪಾಷಾ ಇತರರು ಹಾಜರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...