ಸಮಸ್ಯೆ ಪರಿಹಾರಕ್ಕೆ ಸಂಘಟಿತ ಹೋರಾಟ ನಡೆಸಬೇಕು-ವೀರಭದ್ರಸ್ವಾಮಿ

Source: sonews | By sub editor | Published on 29th January 2018, 11:40 PM | State News | Don't Miss |

ಶ್ರೀನಿವಾಸಪುರ: ರೈತರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ನಡೆಸಬೇಕು. ನ್ಯಾಯುತ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒಕ್ಕೊರಲಿನಿಂದ ಒತ್ತಾಯಿಸಬೇಕು ಎಂದು ಜಿಲ್ಲಾ ಹಸಿರು ಸೇನೆ ಹಾಗೂ ರೈತ ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಹಸಿರು ಸೇನೆ ಹಾಗೂ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತ ಕಾಯುವಲ್ಲಿ ವಿಫಲವಾಗಿವೆ ಎಂದು ಆಪಾದಿಸಿದರು.

ರೈತರ ಕಷ್ಟ ಬೆಟ್ಟದಷ್ಟಿದೆ. ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಇಂಥ ಸಂದರ್ಭದಲ್ಲಿ ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳಬೇಕು. ರೈತ ಪರ ಸಂಘಟನೆಗಳು ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ರೈತರು ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಬೇಕು. ಇಲ್ಲವಾದರೆ ಈ ಸಮುದಾಯಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು.

ಜ.31 ರಂದು ಬೆಂಗಳೂರಿನ ಬಸವನ ಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ರೈತ ಸಮಾವೇಶ ಏರ್ಪಡಿಸಲಾಗಿದೆ. ಸಮಾಜ ಸೇವಕ ಅಣ್ಣಾ ಹಜಾರೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್‌.ದೊರೆಸ್ವಾಮಿ, ಸಂಸದ ರಾಜೇಶ್‌ ಶೆಟ್ಟಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕು. ರೈತರ ಕೂಗನ್ನು ವಿಧಾನ ಸೌಧಕ್ಕೆ ಮುಟ್ಟಿಸಬೇಕು. ಆ ಮೂಲಕ ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಮಾಡಬೇಕು ಎಂದು ಹೇಳಿದರು. ರೈತ ಮುಖಂಡರಾದ ಬೈರಾರೆಡ್ಡಿ, ನಾರಾಯಣಸ್ವಾಮಿ, ನಂಜುಂಡಪ್ಪ, ಶ್ರೀರಾಮರೆಡ್ಡಿ, ದೇವರಾಜಗೌಡ ಸಭೆಯಲ್ಲಿ ಇದ್ದರು.

ವರದಿ ಶಬ್ಬೀರ್ ಅಹ್ಮದ್  ಶ್ರೀನಿವಾಸಪುರ

Read These Next

ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೂತನ ಕೊಳವೆಬಾವಿ ಲೋಕಾರ್ಪಣೆ ನೀರಿನ ಸದ್ಬಳಕೆಗೆ ಶಾಸಕ ಕೆ.ಶ್ರೀನಿವಾಸಗೌಡರ ಕರೆ 

ಕೋಲಾರ: ಕೋಲಾರ ನಗರದ 26ನೇ ವಾರ್ಡಿಗೆ ಸೇರಿದ ಸಂತೇ ಮೈದಾನ ಶಿವಗಿರಿ ನಗರದಲ್ಲಿ ಕೇಂದ್ರ ಪುರಸ್ಕøತ ಅಮೃತ್ ಯೋಜನೆಯಡಿ ನಿರ್ಮಿಸಿರುವ ...

ವಿಕಲಚೇತನ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪೋಷಿಸುತ್ತಿರುವ ಸ್ನೇಹ ಶಾಲೆ-ಎಂ.ವಿ.ಹೆಗಡೆ

ಭಟ್ಕಳ: ವಿಶೇಷ ಚೇತನ ಮಕ್ಕಳಿಗೆ ಒಂದು ಶಾಲೆಯನ್ನು ತೆರೆದು ಅವರಿಗೆ ಸೇವೆ ನೀಡುತ್ತಿರುವ ಸ್ನೇಹ ವಿಶೇಷ ಮಕ್ಕಳ ಶಾಲೆಯ ಮಾಲತಿ ...