ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾ.ಪಂ.ನೌಕರರಿಂದ ಪ್ರತಿಭಟನೆ

Source: sonews | By sub editor | Published on 20th June 2018, 8:10 PM | State News | Don't Miss |

ಶ್ರೀನಿವಾಸಪುರ: ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುವ 51,114 ಮಂದಿ ನೌಕರರನ್ನು ಪಂಚತಂತ್ರ ಇಎಪ್‍ಎಂಎಸ್‍ಗೆ ಸೇರಿಸಿ ವೇತನ ನೀಡುವಂತೆ ಸೇರಿದಂತೆ 6 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ  ತಾಲ್ಲೂಕು ಗ್ರಾಮ ಪಂಚಾಯ್ತಿ ನೌಕರರ ಸಂಘದ ನೇತೃತ್ವದಲ್ಲಿ ನೂರಾರು ಮಂದಿ ನೌಕರರು ತಾಲ್ಲೂಕು ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿದರು.
     

ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಸಿ.ಶಂಕರಪ್ಪ ರವರು ಮಾತನಾಡಿ ಗ್ರಾಮ ಪಂಚಾಯ್ತಿ ನೌಕರರಿಗೆ ಮಾಸಿಕ ಸಂಬಳ ಸಿಗದೇ ಸರ್ಕಾರ ನಿಗದಿಪಡಿಸಿದ ಕನಿಷ್ಟ ವೇತನ ಜಾರಿಯಾಗದೇ ಬಹಳ ಕಷ್ಟದಲ್ಲಿ ಇರುವಂತಹ ಅಂತಹ ಗ್ರಾಮ ಪಂಚಾಯ್ತಿಯ 51,114 ಮಂದಿ ನೌಕರರಿಗೆ ಸರ್ಕಾರದಿಂದ ಇಎಪ್‍ಎಂಎಸ್ ಮೂಲಕ ವೇತನ ಕೊಡಿಸಲು ಆದೇಶ ಹೊರಡಿಸಿರುವುದು ಜೊತೆಗೆ ಶೇ65 ಮಂದಿ ನೌಕರರನ್ನು ಪಂಚತಂತ್ರಾಂಶದಲ್ಲಿ ಸೇರ್ಪಡೆ ಮಾಡಿರುವುದಕ್ಕೆ ಈ ಮೂಲಕ ಸರ್ಕಾರಕ್ಕೆ ಸಂಘ ಚಿರುಋಣಿಯಾಗಿದೆ ಎಂದರು. ಇದೇ ಜೂನ್ 5ರಂದು ನಡೆದ ವಿಡಿಯೋ ಸಂವಾದದಲ್ಲಿ ಪೂರ್ಣಪ್ರಮಾಣದ ಅನುಮೋದನೆ, ಬೇಕಾದಂತಹ ವಿಧ್ಯಾರ್ಹತೆ, ಮಂಜೂರಾದ ಹುದ್ದೆ ಇತ್ಯಾದಿಗಳು ಇದ್ದರೆ ಮಾತ್ರ ಪಂಚತಂತ್ರ ಇಎಪ್‍ಎಂಎಸ್‍ಗೆ ಸೇರಿಸಬೇಕೆಂಬ ನಿರ್ಧೇಶನದಿಂದ 17 ಸಾವಿರ ಮಂದಿ ನೌಕರರು ಪಂಚತಂತ್ರ ಇಎಪ್‍ಎಂಎಸ್‍ಗೆ ಸೇರ್ಪಡೆಯಾಗದೇ ಉಳಿದಿದ್ದಾರೆ ಎಂದು ಅಸಮದಾನ ತೋಡಿಕೊಂಡರು.  ಇದರಲ್ಲಿ ಸ್ವಚ್ಚತಾಗಾರರು, ನಾಲೆ ಸ್ವಚ್ಚ ಮಾಡುವವರು ಇದ್ದಾರೆ. ಹೀಗೆ ಗ್ರಾಮ ಪಂಚಾಯ್ತಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಹತ್ತಾರು ವರ್ಷಗಳಿಂದ ಕನಿಷ್ಟ ವೇತನವಿಲ್ಲದೇ ವಂಚಿತರಾಗಿದ್ದಾರೆ. ಹಾಗಾಗಿ ಗ್ರಾಮ ಪಂಚಾಯ್ತಿ ನೌಕರರಿಗೆ ಸಂಬಂದಿಸಿ 6 ಕಡತಗಳು ವಿವಿದ ಹಂತಗಳಲ್ಲಿ ಒಂದು ವರ್ಷದಿಂದ ಸರ್ಕಾರದ ಮುಂದೆ ಇದೆ ಕೂಡಲೇ ಇವುಗಳಿಗೆ ಮಂಜೂರಾತಿ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಡಿ.ಈಶ್ವರಪ್ಪ, ಖಜಾಂಚಿ ಎಂ.ಶ್ರೀನಿವಾಸ, ಆವಲಕುಪ್ಪ ಶ್ರೀನಿವಾಸ್, ಯಲ್ದೂರು ಅಮರನಾಥ, ಶಿವಣ್ಣ, ಲಕ್ಷ್ಮೀಪುರ ನಾಗಪ್ಪ, ಹೊದಲಿ ವೆಂಕಟರವಣಪ್ಪ, ತಾಡಿಗೋಳ್ ಗೋವಿಂದಪ್ಪ, ಪುಲಗೂರಕೋಟೆ ನಾಗಪ್ಪ ಆಂಜಪ್ಪ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 

Read These Next

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಳೆರೋಗಕ್ಕೆ 16,955 ಹೆಕ್ಟೇರ್ ಬೆಳೆ ಹಾನಿ: ಶಶಿಕಾಂತ್ ಕೋಟಿಮನಿ

ಕಾರವಾರ :ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಅತೀವೃಷ್ಠಿ, ಪ್ರವಾಹ ಹಾಗೂ ಕೊಳೆರೋಗಕ್ಕೆ ...