ಹಾಲು ಕರೆಯುವ ಯಂತ್ರಗಳ ಸದ್ಬಳಕೆಗೆ  ಕೆ.ಎಂ.ಎಫ್. ನಿರ್ದೇಶಕ ಬೈರೆಡ್ಡಿ  ಕರೆ

Source: sonews | By Staff Correspondent | Published on 8th July 2018, 8:12 PM | State News |

ಶ್ರೀನಿವಾಸಪುರ: ಹಾಲು ಉತ್ಪಾದಕರು ಹಾಲು ಕರೆಯುವ ಯಂತ್ರಗಳ ಸದ್ಬಳಕೆಯನ್ನು ಉಪಯೋಗಿಸಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೆಕೆಂದು ಕೆ.ಎಂ.ಎಫ್. ನಿರ್ದೇಶಕ ಬೈರೆಡ್ಡಿ ತಿಳಿಸಿದ್ದಾರೆ. 

ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿಯ ಶ್ಯಾಗತ್ತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಕರೆಯುವ  ಯಂತ್ರಗಳನ್ನು ವಿತರಿಸಿ ಮಾತನಾಡಿದ ಕೆ.ಎಂ.ಎಫ್. ನಿರ್ದೇಶಕ, ಈ ಯಂತ್ರಗಳಲ್ಲಿ ಒಂದು ಬಾರಿಗೆ 6 ಹಸುಗಳಿಂದ  ಹಾಲು ಕರೆಯುವದರಿಂದ ಉತ್ಪಾದಕರಿಗೆ ಸಮಯದ ಉಳಿತಾಯ, ಗುಣಮಟ್ಟದ ಹಾಲು, ರಾಸುಗಳಿಗೆ ಆರೋಗ್ಯ ಹಿತವಾಗಿದ್ದು, ಒಂದೇ ಅವಧಿಯ ಮಿತ  ಸಮಯದಲ್ಲಿ ಹಾಲನ್ನು ಕರೆಯಬಹುದು, ಈ ಸದಾವಕಾಶವನ್ನು ಪ್ರತಿಯೊಬ್ಬ ಉತ್ಪಾದಕರು ಸದ್ಬಳಕೆ ಮಾಡಿಕೊಡಬೇಕೆಂದರು. 

ಡಿ.ಎಂ. ಶಿವರಾಜ್ ಮಾತನಾಡಿ ಕೋಚಿಮುಲ್ ಸಂಸ್ಥೆಯಿಂದ ಈ ಸಂಘಕ್ಕೆ ಹಾಲು ಕರೆಯುವ ಯಂತ್ರಗಳಿಗಾಗಿ ಸುಮಾರು 4 ಲಕ್ಷರೂಗಳ ಮೊತ್ತ, ಸ್ಥಳೀಯ ಸಂಘದಿಂದ 1 ಲಕ್ಷ ಪಡೆದು, ಒಟ್ಟು 5 ಲಕ್ಷ ರೂಗಳ ವೆಚ್ಚದಲ್ಲಿ ಸಾಮೂಹಿಕ ಹಾಲು ಕರೆಯುವ ಯಂತ್ರಗಳನ್ನು ವಿತರಿಸಲಾಗಿದ್ದು, ಇವುಗಳ ಸದ್ಬಳಕೆಯನ್ನು ಸಂಘದ ಆಡಳಿತ ಮಂಡಲಿಯವರು ಉತ್ಪಾದಕರಿಗೆ ನೆರವಾಗುವ ನಿಟ್ಟಿನಲ್ಲಿ ಉಪಯೋಗವಾಗುವಂತೆ ಅನುವು ಮಾಡಿಕೊಡಬೇಕೆಂದು ತಿಳಿಸಿದರು. 

ಈ ಸಂದರ್ಭದಲ್ಲಿ ಡಿ.ಎಂ. ಗುರಪ್ಪ, ಡಾ. ರಾಘವನ್, ಶ್ರೀನಿವಾಸ್ ಎಸ್.ವಿ. ಕೃಷ್ಣೇಗೌಡ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಸ್.ವಿ. ಸುಧಾಕರ್, ನಿರ್ದೇಶಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.  

Read These Next