ಡಿ.ಕೆ ರವಿ ವ್ಯಕ್ತಿತ್ವ ಯುವಕರಿಗೆ ಆದರ್ಶ-ಸುರೇಶ್ ಶೆಟ್ಟಿ

Source: sonews | By Staff Correspondent | Published on 18th March 2018, 12:41 AM | State News |

ಶ್ರೀನಿವಾಸಪುರ: ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಅವರಂತ ವ್ಯಕ್ತಿತ್ವ ಇಂದಿನ ಯುವಕರಿಗೆ ಆದರ್ಶ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಶ್ರೀನಿವಾಸಪುರ  ತಾಲೂಕು ಯೋಜನಾಧಿಕಾರಿ ಸುರೇಶ್ ಶೆಟ್ಟಿ ಅಭಿಪ್ರಾಯ ಪಟ್ಟರು. 

ಶ್ರೀನಿವಾಸಪುರ ತಾಲೂಕಿನ ಅವಲಕುಪ್ಪ ಗ್ರಾಮದಲ್ಲಿ ಸ್ಥಳಿಯ ಡಿ.ಕೆ. ರವಿ ಸ್ವಸಹಾಯ ಸಂಘ ಮತ್ತು ಶ್ರೀ ಕ್ಷೇತ್ರ  ಧರ್ಮಸ್ಥಳ ಸಂಸ್ಥೆ  ಗ್ರಾಮದ ಸರ್ಕಾರಿ ಕಿರಿಯ ಮಾದರಿ ಶಾಲೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಡಿ.ಕೆ. ರವಿ ನಾಲ್ಕನೆ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಸುರೇಶ್ ಶೆಟ್ಟಿ,  ಬಡ ಕುಟುಂಬದಲ್ಲಿ ಜನಿಸಿದ ರವಿ ಅವರು ಶ್ರಮ ಪಟ್ಟು ಉನ್ನತ ಶಿಕ್ಷಣ ಪೆರೈಸಿದ ಅವರು,  ಅಧಿಕಾರಿಯಾಗಿ ಬಡಜನರ ಅನುಕೂಲಕ್ಕಾಗಿ ಉತ್ತಮ ಕಾರ್ಯಗಳನ್ನು ಜಾರಿಗೆ ತಂದು ಜನಮೆಚ್ಚಿದ ಅಡಳಿತ ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ರೈತಾಪಿ ಹಾಗು ಮಹಿಳೆಯರಿಗೆ ನೆರವಾಗುವಂತ ಕಾರ್ಯಗಳನ್ನು ನಿರ್ವಹಿಸುತ್ತ ಬಂದಿರುತ್ತದೆ.  ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪ್ರದೇಶದಲ್ಲಿ  ಸಮಾಜ ಸೇವಾ ಕಾರ್ಯಗಳನ್ನು ಮಾಡಲಾಗಿತ್ತಿದೆ. ಇದಕ್ಕೆ ಸ್ಥಳೀಯವಾಗಿ ಉತ್ತಮ ಸಹಕಾರ ನೀಡುತ್ತಿರುವುದು ಉತ್ತಮ ಉದಾರತೆಗೆ ಸಾಕ್ಷಿ ಎಂದು ಹೇಳಿದರು.

ಪತ್ರಕರ್ತ ಆರ್. ಬಾಬು ಮಾತನಾಡಿ ಈ ಭಾಗದ ಜನರ ಜೀವನ ಹಸನಾಗಲು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಸಾಕಷ್ಟು ಶ್ರಮಿಸುತ್ತಿದೆ ಎಂದ ಅವರು, ಇಂದು ಡಿ.ಕೆ. ರವಿ ಪುಣ್ಯಸ್ಮರಣೆ ಶ್ಲಾಘನೀಯ ಎಂದರು.   ಚಿತ್ರನಟರ ಮತ್ತು ರಾಜಕೀಯ ನಾಯಕರ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸುವ ವ್ಯವಸ್ಥೆ ಇರುವಂತ ಇಂದಿನ ದಿನಗಳಲ್ಲಿ ಜಿಲ್ಲೆಗೆ ಅತ್ಯುತ್ತಮ ಕಾರ್ಯಕ್ರಮ ಮಾಡಿರುವಂತ ಅಧಿಕಾರಿ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಮಾಜಕ್ಕೆ ಮಾದರಿ ಎಂದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಂಬರೀಶ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರೆಡ್ಡಿ, ಪುಟ್ಟರಾಜು ಮುಖ್ಯ ಶಿಕ್ಷಕ  ಎಂ, ರವೀಂದ್ರಸಿಂಗ್, ಸಹ ಶಿಕ್ಷಕಿ ಪಾರ್ವತಮ್ಮ,  ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಸಿಬ್ಬಂದಿ ಸಂತೋಷ, ಯೋಗಿಷ್, ನಂದಿನಿ, ಶಾರದಮ್ಮ ಮುಂತಾದವರು ಇದ್ದರು.

     

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...