ರಾಜ್ಯ ಸರ್ಕಾರದ ಜನಪರ ಕಾರ್ಯಗಳಿಗೆ ಕ್ಷೇತ್ರದ ಅಭಿವೃದ್ಧಿಯೇ ಸಾಕ್ಷಿ- ಕೆ.ಆರ್.ಕೃಷ್ಣಮೂರ್ತಿ

Source: sonews | By sub editor | Published on 10th February 2018, 12:38 AM | State News |

ರಾಯಲ್ಪಾಡು  ; ರಾಜ್ಯದಲ್ಲಿನ ಸರ್ಕಾರವು ಕೇವಲ ಭಾಷಣಗಳಿಗೆ ಸೀಮಿತವಾದ ಸರ್ಕಾರವಲ್ಲ , ಜನಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಸರ್ಕಾರವಾಗಿದೆ. ಎಂಬುದಕ್ಕೆ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿ ಕಾರ್ಯಗಳೇ ಸಾಕ್ಷಿ ಎಂದು ಪಕ್ಷದ ಮುಖಂಡ ಅಡ್ಡಗಲ್ ಕೆ.ಆರ್.ಕೃಷ್ಣಮೂರ್ತಿ ತಿಳಿಸಿದರು. 

ಗೌನಿಪಲ್ಲಿಯ ಬೆಂಗಳೂರು ಬ್ಯಾಗ್‍ವಕ್ರ್ಸ್ ಬಳಿ ಸಿಸಿರಸ್ತೆಗೆ ಚಾಲನೆ ನೀಡಿ ಮಾತನಾಡಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅದರ ಸಮರ್ಪಕ ಅನುಷ್ಠಾನಕ್ಕಾಗಿ ಶ್ರಮಿಸಿದೆ. ಮತ್ತು ಜನಸಾಮಾನ್ಯರ ವಿಶ್ವಾಸಗಳಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ ಎಂದರು. 

ಈ ಸಮಯದಲ್ಲಿ ಗೌನಿಪಲ್ಲಿ ಗ್ರಾ.ಪಂ.ಸಂಬಂದಿಸಿದಂತೆ 80ಲಕ್ಷರೂ ಮೌಲ್ಯದ ಕಾಮಾಗಾರಿಗಳಿಗಾಗಿ ಚಾಲನೆ ನೀಡಲಾಯಿತು. ರಾಯಲ್ಪಾಡು ಜಿ.ಪಂ. ಸದಸ್ಯ ಮ್ಯಾಕಲನಾರಾಯಣಸ್ವಾಮಿ, ರಾಜ್ಯಯೋಜನಾ ಮಂಡಲಿ ಸದಸ್ಯ ಸಂಜಯ್‍ರೆಡ್ಡಿ, ಗ್ರಾ.ಪಂ.ಸದಸ್ಯರಾದ ಟಿ.ಜಿ.ರಮೇಶ್‍ಬಾಬು, ಚುಕ್ಕಮಂಜುನಾಥ್, ಅಶ್ವಥ್, ಕಿರಿಯ ಅಬಿಯಂತರ ಜಗದೀಶ್, ಗ್ರಾಮದ ಮುಂಖಡರಾದ ಸೋಮಶೇಖರ್, ವೈ.ಎಮ್.ಅಮೀರ್‍ಖಾನ್, ಸಲ್ಲಪ್ಪ, ಮಧುಸೂದನ್ ಇದ್ದರು. 
 

Read These Next