ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಸ್ಥಳ ಪರಿಶೀಲನೆ

Source: sonews | By Staff Correspondent | Published on 9th February 2018, 6:09 PM | State News | Don't Miss |

ಶ್ರೀನಿವಾಸಪುರ: ಯಾವುದೇ ಲಾಭಗಳಿಸಲು ಆಸ್ಪತ್ರೆ ಸ್ಥಾಪಿಸುತ್ತಿಲ್ಲ, ಬಡರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಸ್ಥಾಪಿಸಲಾಗುತ್ತಿದೆ' ಎಂದು ಟಾಟಾ ಟ್ರಸ್ಟ್ ಸಾರ್ವಜನಿಕ ಸಂಪರ್ಕಾಧಿಕಾರಿ ಲಕ್ಷ್ಮಣ್ ಸೇತುರಾಮ್ ತಿಳಿಸಿದರು.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಬಳಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆ ಜಾಗ ವೀಕ್ಷಿಸಿ ಮಾತನಾಡಿ, ಡಿಪಿಆರ್ ವರದಿ ಸರ್ಕಾರಕ್ಕೆ ಸಲ್ಲಿಸಿದ ಕೂಡಲೇ ಜಾಗವನ್ನು ಟ್ರಸ್ಟ್ಗೆ ಹಸ್ತಾಂತರ ಮಾಡಲಿದ್ದಾರೆ ಎಂದರು.

ನಾಲ್ಕೈದು ವಾರದಲ್ಲಿ ಡಿಪಿಆರ್ ವರದಿ ತಯಾರಾಗುತ್ತದೆ. ಆನಂತರ ಹತ್ತು ದಿನದಲ್ಲಿ ಜಾಗ ನೀಡುವುದಾಗಿ ಸರ್ಕಾರ ತಿಳಿಸಿದ್ದು, ಚಿಕಿತ್ಸಾ ಕೇಂದ್ರ ನಿರ್ಮಾಣ ಮಾಡಲು ಅಗುವ ವೆಚ್ಚದ ಬಗ್ಗೆ ಯೋಜನೆಯಿಲ್ಲ. ಭಾಗದ ಜನರ ಸೇವೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ವಿವಿಧ ರೀತಿಯ ಕಾನ್ಸರ್ಗೆ ಜನ ಬಲಿಯಾಗುತ್ತಿದ್ದಾರೆ. ಈಗಾಗಲೇ 2017 ಅಗಸ್ಟ್ತಿಂಗಳಿಂದ ಜನವರಿತನಕ ಯಾವ ಸಮೀಕ್ಷೆ ನಡೆಸಿದ್ದು, ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಇದನ್ನು ಅರಿತ ಟಾಟಾ ಟ್ರಸ್ಟ್‌ ನವರು ಭಾಗದಲ್ಲಿ ಸ್ಥಾಪನೆ ಮಾಡಿದರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ, ಪಕ್ಕದ ಆಂದ್ರ ಪ್ರದೇಶದ ಜನಕ್ಕೂ ಅನುಕೂಲವಾಗುತ್ತದೆ. ಇದಕ್ಕೆ ಪೂರಕವಾಗಿ ಸೂಕ್ತ ಸರ್ಕಾರ ನೀಡಲು ಮುಂದಾಗಿದೆ ಎಂದರು.

ಕ್ಯಾನ್ಸರ್ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿ ನಿರ್ಮೂಲನೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಕೇಂದ್ರ, ಹೊರ ಹಾಗೂ ಒಳ ರೋಗಿಗಳ ವಿಭಾಗ ಒಳಗೊಂಡತೆ ಸಾಮಾನ್ಯ ವಾರ್ಡ್, ವಿಷೇಷ ವಾರ್ಡ್, ರೇಡಿಯೊ ಥೆರಪಿ, ಕಿಮಿಯೋ ಥೆರಪಿ, ರಕ್ತ ಪರೀಕ್ಷೆ ಪ್ರಾಯೋಗಾಲಯ, ಶಸ್ತ್ರ ಚಿಕಿತ್ಸಾ ವಿಭಾಗಗಳನ್ನು ಒಳಗೊಂಡ ಸುಸಜ್ಜಿತ ಆಸ್ಪತ್ರೆಯನ್ನು ಪ್ರಾಥಮಿಕ ಹಂತದಲ್ಲಿ ನಿರ್ಮಾಸಲಾಗುವುದು ಎಂದು ವಿವರಿಸಿದರು.

ಯಾವ ತೊಂದರೆಗಳಿಂದ ಕ್ಯಾನ್ಸರ್ ಹರಡುತ್ತದೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ, ಪ್ಯಾರ ಮೆಡಿಕಲ್, ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಇದರಿಂದ ಲಾಭಗಳಿಸುವ ಉದ್ದೇಶವಿಲ್ಲ. ಇಲ್ಲಿಗೆ ಹೊರಗಿನಿಂದ ರೋಗಿಗಳು ಬಂದರು ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಚುನಾವಣಾ ಪ್ರಚಾರಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಿಲ್ಲ. ಸತತವಾಗಿ ಏಳು ಎಂಟು ತಿಂಗಳುಗಳಿಂದ ಕ್ಯಾನ್ಸರ್ ಕೇಂದ್ರ ಸ್ಥಾಪನೆಗೆ ಜಾಗ ಹುಡುಕಲಾಗುತ್ತಿದ್ದು, ಕಂದಾಯ ಜಾಗವೇ ಸಿಕ್ಕಿದೆಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್ಕುಮಾರ್ ತಿಳಿಸಿದರು.

ತಾಲ್ಲೂಕಿನ ಕಲ್ಲೂರು ಗ್ರಾಮದ ಬಳಿ ಸರ್ವೇ ನಂಬರ್ 31ರಲ್ಲಿ 38.20 ಗುಂಟೆ ಕಂದಾಯ ಜಮೀನು ಸಿಕ್ಕಿದ್ದು, ಈಗಾಗಲೇ ಸರ್ವೆ ಮುಗಿಸಿ ದಾಖಲೆಗಳನ್ನು ಸಹ ಸಿದ್ದಪಡಿಸಿಕೊಳ್ಳಲಾಗಿದೆ. ರಾಜ್ಯ ಕಂದಾಯ ಇಲಾಖೆಯಿಂದ ಅನುಮತಿ ಪಡೆದು ಹತ್ತು ದಿನದಲ್ಲಿ ಒಪ್ಪಂದ ಮಾಡಿಕೊಂಡು ಟ್ರಸ್ಟ್ಗೆ ನೀಡಲಾಗುವುದು ಎಂದು ಹೇಳಿದರು.

ಚಿಕಿತ್ಸಾ ಕೇಂದ್ರವನ್ನು ಕೋಲಾರದಲ್ಲಿ ಸ್ಥಾಪನೆ ಮಾಡಲು ತಯಾರಿ ನಡೆಸಿಕೊಳ್ಳಲಾಗುತ್ತಿತ್ತು, ಆದರೆ ಕಾಣದ ಕೈಗಳ ಸಹಕಾರದಿಂದ ನಮ್ಮ ಕ್ಷೇತ್ರದಲ್ಲಿ ಸ್ಥಾಪನೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲಾರ ಪುಣ್ಯ ಎಂದರು.

ಬಡ ರೋಗಿಗಳು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದರು. ಅವರು ಅಲ್ಲಿ ಪಡುತ್ತಿದ್ದ ಗೋಳು ನೋಡಲಾಗದೆ ಕಾನೂನು ಜಾರಿಗೆ ತರಲು ಪ್ರಯತ್ನಿಸಿದೇವು. ಜನ ಸಹ ಮುಖರಂತೆ ನನಗೆ ಸಹಕಾರ ನೀಡಿದರು. ಕಾಯ್ದೆಯಡಿ ನಿಗಧಿಪಡಿಸಿದ ದರಪಟ್ಟಿಯನ್ನು ಖಾಸಗಿ ಆಸ್ಪತ್ರೆಗಳವರು ಪಾಲಿಸದಿದ್ದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದರು.

ಇದೇ ತಿಂಗಳು 15ರಿಂದ ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕಾಮಗಾರಿ ಆರಂಭವಾಗಲಿದ್ದು, ಇದಕ್ಕೆ ಸರ್ಕಾರ ಶೇ.75ರಷ್ಟು ಭಾಗ ಅನುದಾನ ನೀಡಲಾಗುತ್ತದೆ. ಎರಡು ಆಸ್ಪತ್ರೆಗಳ ನಿರ್ವಹಣೆಗೆ ಅಗತ್ಯವಾಗ ಸೌಕರ್ಯ ಕಲ್ಪಿಸಲು ಸರ್ಕಾರ ಸಿದ್ದವಾಗಿದೆ, ರಾಜ್ಯಾದ್ಯಂತ ಯುನಿವರ್ಸಲ್ ಯೋಜನೆಯೂ ಫೆ.26ರಂದು ಉದ್ಘಾಟನೆಯಾಗಲಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಉಪವಿಭಾಗಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ವಿಜಯ್ ಕುಮಾರ್ n.ºÉZï.M f ²æäªÁ¸À  ತಹಶೀಲ್ದಾರ್ ರವಿ, ಟಾಟಾ ಟ್ರಸ್ಟ್ ಸಲಹೆಗಾರ ವಿಜಯಕುಮಾರ್, ವಾಸ್ತು ಶಿಲ್ಪಿ ರವಿಶಂಕರ್, f¯Áè¥ÀAZÁ¬ÄÛ  ¸ÀzÀ¸Àå UÀÆ«AzÀ ¸Áé«Ä ಕೋಚಿಮುಲ್ ಅಧ್ಯಕ್ಷ ಬ್ಯಾಟಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅಶೋಕ್ C®ªÀl.ªÀÄAf£ÁxÀ gÉrØ ¥ÀÄgÀ¸À¨sÉ ªÀÄÄSÁå¢üPÁj «..¸ÀvÀå£ÁgÁAiÀÄt CzsÀåPÀë gÀvÀߪÀÄä £ÁUÀgÁeï G¥ÀzsÀåPÀë n.JA.©.ªÀÄÄQÛAiÀÄgï  ಹಾಜರಿದ್ದರು.

 

 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...