ಆಶಾ ಕಾರ್ಯಕರ್ತೆಯರಿಗೆ ಕಾಂಗ್ರೇಸ್ ನಿಂದ ಆಮಿಷ_ಜೆ.ಡಿ.ಎಸ್ ಆರೋಪ

Source: sonews | By Staff Correspondent | Published on 6th May 2018, 12:35 AM | State News | Don't Miss |

ಶ್ರೀನಿವಾಸಪುರ: ಆಶಾ ಕಾರ್ಯಕರ್ತರಿಗೆ ಕಾಂಗ್ರೆಸ್‍ನವರು ಪಿಎಲ್‍ಡಿ ಬ್ಯಾಂಕ್‍ನಲ್ಲಿ ಆಸೆ, ಆಮಿಷ ತೋರಿಸಿ ಕಾಂಗ್ರೆಸ್‍ಗೆ ಮತ ಹಾಕು ಎಂದು ಹೇಳುತ್ತಿದ್ದಾರೆಂದು ಆರೋಪಿಸಿ  ಜೆಡಿಎಸ್‍ನ ನೂರಾರು ಕಾರ್ಯಕರ್ತರು ಶುಕ್ರವಾರ ಮದ್ಯಾಹ್ನ ತಾಲ್ಲೂಕು ಕಛೇರಿ ಆವರಣದಲ್ಲಿ ದಿಡೀರನೆ ಜಮಾ ಆಗಿದ್ದರಿಂದ ಉದ್ರಿಕ್ತ ವಾತಾವರಣ ಕಾಣಿಸಿಕೊಂಡು ಪೋಲೀಸರು ಸೇನಾ ಪಡೆಯವರು ಹೆಚ್ಚಿನ  ಸಂಖ್ಯೆಯಲ್ಲಿ ಸೇರುವಂತಾಯಿತು.

ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂದಿಸಿ ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಿಸುವ  ಕಚೇರಿಯಾಗಿದೆ. ಇದೇ ಕಛೇರಿ ಆವರಣದಲ್ಲಿ ಶುಕ್ರವಾರ ಹಿಂಡು ಹಿಂಡಾಗಿ ಆಶಾ ಕಾರ್ಯಕರ್ತರು ಬಂದು ಸೇರತೊಡಗಿದ್ದಾರೆ. ಆದರೆ ಕೆಲವರು ಪಿಎಲ್‍ಡಿ ಬ್ಯಾಂಕ್‍ನಲ್ಲಿ ಜಮಾವಣೆಗೊಂಡು ಅಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರು ಆಮಿಷ ಒಡ್ಡಿ ಕಾಂಗ್ರೆಸ್‍ಗೆ ಮತನೀಡಬೇಕೆಂದು ಹೇಳುತ್ತಿದ್ದಾರೆಂಬ ಮಾಹಿತಿ ಅರಿತು  ಜೆಡಿಎಸ್‍ನ ನೂರಾರು ಮಂದಿ ಕಾರ್ಯಕರ್ತರು ತೀವ್ರ ಅಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನದಲ್ಲಿ  ಬಿಗುವಿನ ವಾತಾವರಣ ಕಾಣಿಸಿಕೊಂಡಿತು. 

ಇದರಿಂದ ಕಛೇರಿ ಒಳಗೆ ಕಾರ್ಯನಿರ್ವಹಿಸುತ್ತಿದ್ದ ಚುನಾವಣಾಧಿಕಾರಿ ಎನ್.ಮುನಿರಾಜು ರವರು ಹೊರಗೆ ಬಂದು ವಿಚಾರಣೆ ಮಾಡಿದಾಗ ಜೆಡಿಎಸ್‍ನ ಕಾರ್ಯಕರ್ತರು ಉದ್ರಿಕ್ತರಾಗಿ  ನೀತಿ ಸಂಹಿತೆ ಇದೆ ಆದರೆ ಬ್ಯಾಂಕ್ ಒಳಗೆ ಕಾಂಗ್ರೆಸ್ ಕಾರ್ಯಕರ್ತರು ಹಣದ ಆಮಿಷ ತೋರಿಸುತ್ತಿದ್ದಾರೆ ಹಾಗಾಗಿ ಆಶಾ ಕಾರ್ಯಕರ್ತರು ಪಿಎಲ್‍ಡಿ ಬ್ಯಾಂಕ್ ಒಳಗೆ ಹೋಗಿ ಬರುತ್ತಿದ್ದಾರೆಂದು  ಆರೋಪಿಸಿದರು. ಜೊತೆಗೆ ಜೆಡಿಎಸ್ ಕಾರ್ಯಕರ್ತರು ಚುನಾವಣಾಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದರು. ಕೂಡಲೇ ಚುನಾವಣಾಧಿಕಾರಿ ಪೋಲೀಸ್ ಠಾಣೆಗೆ ಕರೆ ಮಾಡಿದ್ದರಿಂದ ಪಿಎಸ್‍ಐ ಎ.ಆರ್.ಜಗದೀಶ್ ರವರು ಆಗಮಿಸಿದರು. ಉದ್ರಿಕ್ತರನ್ನು ಸಮಾದಾನಪಡಿಸಿ ಪಿಎಲ್‍ಡಿ ಬ್ಯಾಂಕ್ ಮುಚ್ಚಿಸಿದರು. ಇದೇ ವೇಳೆ ಒಳಗೆ ಇದ್ದ  ಕೆಲವು ಕಾಂಗ್ರೆಸ್ ಕಾರ್ಯಕರ್ತರು ಜಾಗ ಖಾಲಿ ಮಾಡಿದ್ದಾರೆಂದು ಜೆಡಿಎಸ್‍ನವರು ಆರೋಪಿಸಿದರು. 

ಈ ಎಲ್ಲಾ ಬೆಳವಣಿಗೆಗಳ ನಡುವೆ ಜೆಡಿಎಸ್‍ನ ಕಾರ್ಯಕರ್ತರು ಜಿಲ್ಲಾಧಿಕಾರಿ ಜಿ.ಸತ್ಯವತಿ ರವರಿಗೆ  ಮೊಬೈಲ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಸೇನಾ ಪಡೆಯ ಯೋದರನ್ನು ಬಂದೋಬಸ್ತ್‍ಗಾಗಿ ಕರೆಸಿಕೊಳ್ಳಲಾಯಿತು. ಕೊನೆಗೆ ಕಾರ್ಯಕರ್ತರು ಈಗಾದಂತೆ ಪಾರದರ್ಶಕವಾಗಿ ಕ್ರಮ ಕೈಗೊಳ್ಳಬೇಕೆಂದು ಮನವಿ  ಮಾಡಿ ಹಿಂದಿರುಗಿದ್ದಾರೆ.

ಈ  ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ. ಎಂ.ವಿ.ಶ್ರೀನಿವಾಸ್, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಪಾತಪೇಟೆ ಮಂಜುನಾಥ್, ಮುಖಂಡರಾದ ಪೂಲು ಶಿವಾರೆಡ್ಡಿ, ಕಾರುಬಾಬು, ಹೋಳೂರು ಸಂತೋಷ್, ಕೆ.ನರಸಿಂಹಮೂರ್ತಿ ಅನೇಕರು ಹಾಜರಿದ್ದರ
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...