ಸರ್ಕಾರಿ ಆಸ್ಪತ್ರೆಗೆ ಸಿಬ್ಬಂಧಿ ಒದಗಿಸುವಂತೆ ಸಾರ್ವಜನಿಕರ ಆಗ್ರಹ

Source: sonews | By sub editor | Published on 16th August 2018, 11:43 PM | State News |

ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ಕೇಂದ್ರವಾದ ಶ್ರೀನಿವಾಸಪುರ ಪಟ್ಟಣದಲ್ಲಿ ಸುಸಜ್ಜಿತ ಐಸಿಯು ಇದ್ದು 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ 01 ಇ.ಎನ್.ಟಿ, ವೈದ್ಯ ತಜ್ಞರು, 01 ಪಿಜಿಷಿಯನ್, 01 ನರ್ಸಿಂಗ್ ಸೂಪರ್ ಇಂಟೆಂಡೆಂಟ್, 15 ಶುಶ್ರೂಷಕರು, 15 ಡಿ ಗ್ರೂಪ್ ನೌಕರರು ಖಾಲಿಯಾಗಿದೆ. ತುಂಬುವುದು ಸರ್ಕಾರದ ಕರ್ತವ್ಯವಾಗಿದೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಆರೊಗ್ಯ ಕರ್ನಾಟಕ ಯೊಜನೆ ಜಾರಿಗೆ ತಂದಿದ್ದು ಪ್ರತಿಯೊಬ್ಬರಿಗೂ ಆರೊಗ್ಯ ಸುರಕ್ಷಿತ ವಾಗಿರಬೇಕೆಂದು ಜಾರಿಗೆ ತಂದಿರುವ ಯೋಜನೆಯ ಅಡಿಯಲ್ಲಿ ಬಿ.ಪಿ.ಎಲ್ ಹಾಗು ಎ.ಪಿ.ಎಲ್ ಹೊಂದಿರುವ ನಾಗರೀಕರಿಗೆ ಉತ್ತಮ ಚಿಕಿಸ್ಥೆ ನೀಡಲು ಕೋಟ್ಯಾಂತರ ರೂ ಗಳನ್ನು ಮೀಸಲಿಟ್ಟಿರುತ್ತಾರೆ ಜಿಲ್ಲಾ ಮಟ್ಟದಲ್ಲಿ ಯೂನಿವರ್ಸಲ್ ಹೆಲ್ತ್ ಕಾರ್ಡ ಸಹಾ ನೀಡಿದ್ದು ಶ್ರೀನಿವಾಸಪುರದ ತಾಲ್ಲೂಕಿನ ಕೇಂದ್ರಸ್ಥಾನದಲ್ಲಿ ಇರುವ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಸುಮಾರು 15 ಕ್ಕೂ ಹೆಚ್ಚು ಮದುಮೇಹ ರೋಗಿಗಳಿಗೆ ಇನ್ಸುಲಿನ್ ಚುಚ್ಚುಮದ್ದು ಇಲ್ಲದೇ ಪರದಾಡುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಸುಮಾರು 400-500 ಹೊರ ರೋಗಿಗಳು ಬಂದು ಚಿಕಿತ್ಸೆಯನ್ನು ಪಡೆಯುತ್ತಿದ್ದು ಇಡೀ ತಾಲ್ಲೂಕಿಗೆ ಈ ಆಸ್ಪತ್ರೆ ಕೇಂದ್ರ ಸ್ಥಾನವಾಗಿದೆ. ಈ ಆಸ್ಪತ್ರೆಗೆ ಪ್ರತಿನಿತ್ಯ ಮದುಮೇಹ ಕಾಯಿಲೆ 10 ರಿಂದ 15 ರೋಗಿಗಳು ಚಿಕಿಸ್ತೆಗಾಗಿ ಆಸ್ಪತ್ರೆಗೆ ಬರುತ್ತಿದ್ದು ಇಲ್ಲಿ ಸುಮಾರು 3 ತಿಂಗಳಿಂದ ಇನ್ಸುಲಿನ್ ಇಲ್ಲದಕಾರಣ ಪ್ರತಿನಿತ್ಯ ಮದುಮೇಹ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ, 

ಸರ್ಕಾರದಿಂದ ಸಾರ್ವಜನಿಕ ಆಸ್ಪತ್ರೆಗಳಿಗೆ ಔಷದಿಗಳನ್ನು ಸರಬರಾಜು ಮಾಡುತ್ತಿದ್ದು ಮುಖ್ಯವಾಗಿ ನವಜಾತ ಶಿಶುಗಳಿಂದ ಪ್ರಾರಂಭಗೊಂಡು, ಹೆಚ್1ಎನ್1, ರಕ್ತದೊತ್ತಡ, ಕ್ಷಯ, ಮಾನಸಿಕ ಖಾಯಿಲೆಗಳಿಗೆ ಸೇರಿದಂತೆ ಔಷಧಿಗಳನ್ನು ದಾಸ್ತಾನು ಮಾಡುತ್ತಿದ್ದರೂ ಮದುಮೇಹ ರೋಗಿಗಳಿಗೆ ಮಾತ್ರ ಇನ್ಸುಲಿನ್‍ಔಷದಿ ಕೊರತೆ ಉಂಟಾಗಿದೆ. ಈ ಆಸ್ಪತ್ರೆಯು ವಿಶಾಲವಾಗಿದ್ದು ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು, ಇದರಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಇರುತ್ತಾರೆ ಇನ್ನೂ 1 ಇ.ಎನ್.ಟಿ ವೈದ್ಯ ತಜ್ಞರು, 1 ಪಿಜೀಷಿಯನ್, 15 ಶುಶ್ರೂಷಕರು, 15 ಡಿ ಗ್ರೂಪ್ ನೌಕರರ ಕೊರತೆ ಇರುವುದರಿಂದ ರೋಗಿಗಳು ಪರದಾಡುತ್ತಿದ್ದಾರೆ ಈ ಸಮಸ್ಯೆಗಳಬಗ್ಗೆ ಸಂಬಂದ ಪಟ್ಟ ಅಧಿಕಾರಿಗಳು ಎತ್ತೆಚ್ಚಿಕೊಂಡು ಸಾರ್ವಜನಿಕ ರೋಗಿಗಳಿಗೆ ಅನುಕೂಲವಾಗುವಂತೆ ಕೊರತೆ ಇರುವಂತಹ ಸಿಬ್ಬಂದಿಯನ್ನು ಹಾಗು ವೈದ್ಯರನ್ನು ಶೀಘ್ರವಾಗಿ ನೇಮಿಸಬೇಕೆಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Read These Next