ಚಿತ್ರಾಪುರ ಮಠದ ಶ್ರೀಗಳಿಂದ “ಶ್ರೀ ಮಾತಾ ಮಹಿಮ” ಪುಸ್ತಕ ಲೋಕಾರ್ಪಣೆ

Source: sonews | By Staff Correspondent | Published on 15th January 2019, 5:52 PM | Coastal News |

ಭಟ್ಕಳ: ಜಿಲ್ಲೆಯ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಕುರಿತು  ಜಿಲ್ಲೆಯ ಪ್ರತಿಭಾನ್ವಿತ ಯುವ ಬರಹಗಾರ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿಯವರು ಬರೆದಿರುವ ‘ಶ್ರೀ ಮಾತಾ ಮಹಿಮ’ ಎಂಬ   ಸಾಹಿತ್ಯ ಕೃತಿಯನ್ನು ಚಿತ್ರಾಪುರ ಮಠದ ಶ್ರೀ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ಇಂದು ಲೋಕಾರ್ಪಣೆಗೊಳಿಸಿದರು.  

ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಸಾರ್ವಜನಿಕ ಟ್ರಸ್ಟ್ (ರಿ)ನ ಪ್ರಕಾಶನದಲ್ಲಿ ಪ್ರಕಟಗೊಂಡ ಮುಂಡಳ್ಳಿಯವರ ಏಳನೇ ಕೃತಿ ಶ್ರೀ ಮಾತಾ ಮಹಿಮಾ ವನ್ನು ಶ್ರೀ ದುರ್ಗಾಪರಮೇಶ್ವರಿ ಮಾರಿ ಜಾತ್ರಾ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ  ಸ್ವಾಮೀಜಿಯವರು ಶೃದ್ಧೆ ಭಕ್ತಿ ಅನುಷ್ಠಾನ ಇರುವಲ್ಲಿ ಭಗವಂತ ಸದಾ ನೆಲೆಸಿರುತ್ತಾನೆ. ಅಂತ ಪುಣ್ಯ  ಭೂಮಿ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಎಂದರು. ಹಾಗಾಗಿಯೇ ಈ ಕ್ಷೇತ್ರದಲ್ಲಿ ಧಾರ್ಮಿಕತೆಯ ಜೊತೆಗೆ ಶೈಕ್ಷಣಿಕ ಸಾಂಸ್ಕøತಿಕ ಅಭ್ಯೂದಯ ಸಾಧ್ಯವಾಗಿದೆ. ಇಂದು ಈ ಮಾತಾ ಮಹಿಮಾ ಕೃತಿ ಪ್ರಕಟಣೆ ಕೂಡ ಇದಕ್ಕೊಂದು ನಿದರ್ಶನ ಎಂದರು. ಭಜನೆ ಮತ್ತು ಸ್ತೋತ್ರ ಪಠಣದಿಂದ ದೇವಿಯು ಸಂತುಷ್ಠಳಾಗುತ್ತಾಳೆ ಎಂದು ಹರಸಿದರು.

ಈ ಸಂದರ್ಭದಲ್ಲಿ ಮಾರಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ರಾಮಾ ಮೊಗೇರರವರು ಮಾತನಾಡಿ ಶ್ರೀ ತಾಯಿಯ ಸಂಕಲ್ಪದ ನಮ್ಮೆಲ್ಲರ ಶಕ್ತಿ. ಈ ಜಾತ್ರೆಯ ಪ್ರತಿಯೊಂದು ಕಾರ್ಯವೂ ಅವಳ ಸಂಕಲ್ಪ ಕೃಪೆಯಿಂದ ಮಾತ್ರ ಸಾಧ್ಯವಾಗುವಂತದ್ದು. ಅನಿವಾರ್ಯ ಕಾರಣದಿಂದ ಭಾಗವಹಿಸಲು ಸಾಧ್ಯವಾಗದ ಗುರುಗಳು ಇವತ್ತು ನಮ್ಮೊಂದಿಗೆ ಇದ್ದಾರೆ ಎಂದರೆ ಅದು ಅವಳ ಪ್ರೇರಣೆ. ಅಂತೆಯೇ ಈ ಮಾತಾ ಮಹಿಮಾ ಕೃತಿ ಪ್ರಕಟಣೆ ಕೂಡ ಒಂದು ದೈವ ನಿರ್ಣಯ ಎಂಬ ಮಾತನ್ನು ಆಡಿದರು. 

ಈ ಸಂದರ್ಭದಲ್ಲಿ ಶ್ರೀ ಮಾತಾ ಮಹಿಮಾ ಪುಸ್ತಕದ ಲೇಖಕ ಉಮೇಶ ಮುಂಡಳ್ಳಿಯವರನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ಶ್ರೀ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮಿಜಿಗಳು ಫಲತಾಂಬೂಲವನ್ನಿತ್ತು ಸನ್ಮಾನಿಸಿದರು.
ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ನಾರಾಯಣ ಗಣಪತಿ ದೈಮನೆಯವರು ಎಲ್ಲರನ್ನೂ ಸ್ವಾಗತಿಸಿದರು ವೇದಿಕೆಯಲ್ಲಿ ಧರ್ಮದರ್ಶಿಗಳಾದ ತಿಮ್ಮಪ್ಪ ನಾರಾಯಣ ಹೊನ್ನಿಮನೆ, ಅರವಿಂದ ರಾಮನಾಥ್ ಪೈ ಹಾಗೂ  ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಮಾರಿಜಾತ್ರಾ ಮಹೋತ್ಸವ ಸಮಿತಿ ಸದಸ್ಯರಾದ ಶಿಕ್ಷಕ ರವಿರಾಜ ಚೌಕಿಮನೆ ನಿರ್ವಹಿಸಿದರು. ಮಾರಿಜಾತ್ರಾ. ಮಹೋತ್ಸವದಲ್ಲಿ ಪಾಲ್ಗೊಂಡ ಸಹಸ್ರಾರು ಭಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 
 
 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...