ಶಿರಾಲಿ ರಾ.ಹೆ. 45ಮೀ ವಿಸ್ತರಣೆಗೆ ಪಕ್ಷಾತೀತ ಹೋರಾಟಕ್ಕೆ ಸಿದ್ಧ-ಶಾಸಕ ಸುನಿಲ್ ನಾಯ್ಕ

Source: sonews | By Staff Correspondent | Published on 14th February 2019, 6:24 PM | Coastal News | Don't Miss |

ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ವಾಣಿಜ್ಯ ಪ್ರದೇಶಗಳಲ್ಲೊಂದಾದ ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯು 45 ಮೀ ವಿಸ್ತರಣೆ ಪ್ರಸ್ತುತ ಮತ್ತು ಭವಿಷ್ಯದ ದೃಷ್ಟಿಯಿಂದ ತುಂಬಾ ಅನುಕೂಲಕರವಾಗಿದ್ದು, ಈ ಪ್ರದೇಶದಲ್ಲಿ 45ಮೀ ವಿಸ್ತಾರಗೊಳ್ಳಲೇಬೇಕು, 30ಮೀಗೆ ಸೀಮೀತಗೊಳಿಸಿ ಕಾಮಗಾರಿ ಮುಂದುವರೆಸಿದ್ದಲ್ಲಿ ಸಾರ್ವಜನಿಕರೊಂದಿಗೆ ಪಕ್ಷಾತೀತವಾಗಿ ಹೊರಾಟಕ್ಕೆ ಸದಾ ಸಿದ್ದನಿದ್ದೇನೆ ಎಂದು ಶಾಸಕ ಸುನೀಲ್ ನಾಯ್ಕ ತಿಳಿಸಿರುವುದಾಗಿ ಶಾಸಕರ ಆಪ್ತ ಸಹಾಯಕ ಕರಿಯಪ್ಪ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಆರ್‍ಬಿ ಕಂಪನಿ ಮತ್ತಿತರ ಅಧಿಕಾರಿಗಳು ಅಮಾನುಷವಾಗಿ ಇಲ್ಲಿಯ ನಾಗರಿಕರ ಪ್ರತಿರೋಧವನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕಿ ಹೋರಾಟದ ಕಾವನ್ನು ತಗ್ಗಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬೇಸರವೆನಿಸಿದ್ದು ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿರುವ ತನಗೆ ನೇರವಾಗಿ ಸಾರ್ವಜನಿಕರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಇದಕ್ಕಾಗಿ ವಿಷಾದಿಸುತ್ತೆನೆ ಎಂದು ತಿಳಿಸಿರುತ್ತಾರೆ. 

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಸಂಬಂದಿಸಿದ ಅಧಿಕಾರಿಗಳೊಂದಿಗೆ ಕಳೆದ 6-7 ತಿಂಗಳುಗಳಿಂದ ಶಿರಾಲಿಯ ಹೆದ್ದಾರಿಯ 45 ಮೀ ವಿಸ್ತಾರ ಅಗತ್ಯವಿದೆ ಎಂದು ಮನವರಿಕೆ ಮಾಡಿ ಕೊಟ್ಟಿದ್ದೇನೆ ಆದರೂ ಉಸ್ತುವಾರಿ ಸಚಿವರು ಈ ಕುರಿತು ಆಸಕ್ತಿ ತಳೆದಿಲ್ಲದಿರುವುದರಿಂದ ಅಧಿಕಾರಿಗಳು  ಭವಿಷ್ಯದ ಶಿರಾಲಿಯ ಅಭಿವೃದ್ದಿಯನ್ನು ಕಡೆಗಣಿಸಿ ಇಲ್ಲಿಯ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ ಮಾತನ್ನು ಲೆಕ್ಕಿಸದೆ ಯಾರನ್ನೋ ಮೆಚ್ಚಿಸಲು ಬಹುಸಂಖ್ಯಾತ ನಾಗರಿಕರ  ಜನಜೀವನದ ಮೇಲೆ ಚೆಲ್ಲಾಟ ವಾಡುತ್ತಿರುವುದನ್ನು ಶಾಸಕರು ಖಂಡಿಸಿರುವುದಾಗಿ ಶಾಸಕರ ಆಪ್ತ ಸಹಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...