ಶಿಡ್ಲಘಟ್ಟ : ಇ ಹರಾಜು ವಿವಾದ; ರೀಲರ‍್ಸ್-ರೈತರ ಮಧ್ಯೆ ಮಾತಿನ ಚಕಮುಕಿ ಉದ್ರಿಕ್ತ ವಾತವರಣ

Source: S O News service | By Staff Correspondent | Published on 23rd September 2016, 10:59 PM | State News | Don't Miss |

ಶಿಡ್ಲಘಟ್ಟ: ವ್ಯಾಪಾರ ಮತ್ತು ವಹಿವಾಟಿನ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಮಾರುಕಟ್ಟೆವೆಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ನಗರದ ಸರಕಾರಿ ರೇಷ್ಮೆ ಗೂಡಿನ ಮಾರುಟಕಟ್ಟೆಯಲ್ಲಿ ಇ-ಹರಾಜು ವಿಚಾರದಲ್ಲಿ ವಿವಾದ ಸೃಷ್ಠಿಯಾಗಿದ್ದು ಮಾರಾಟ ಮತ್ತು ಗೂಡು ಖರೀದಿಯ ಗೊಂದಲದಿಂದ ರೀಲರ‍್ಸ್‌ಗಳ ಮಧ್ಯೆ ಮಾತಿನ ಚಕಮಕಿ ನಡೆದು ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

ಮಾರುಕಟ್ಟೆಯಲ್ಲಿ ಇ ಹರಾಜು ರದ್ದುಗೊಳಿಸಬೇಕೆಂದು ಆಗ್ರಹಿಸಿ ರೇಷ್ಮೆನೂಲು ಬಿಚ್ಚಾಣಿಕೆದಾರರು ಒಂದು ವಾರಗಳ ಕಾಲ ಮುಷ್ಕರ ನಡೆಸಿದರು ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿಗಳು ಮನವೊಳಿಸುವ ಪ್ರಯತ್ನ ನಡೆಸಿದರು ಸಹ ಸಫಲವಾಗಿಲ್ಲ ಕಡೆಗೂ ರೇಷ್ಮೆ ಅಭಿವೃಧ್ಧಿ ಆಯುಕ್ತ ಸತೀಶ್ ಮತ್ತು ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಸಮ್ಮುಖದಲ್ಲಿ ರೀಲರ‍್ಸ್ ಮತ್ತು ರೈತರ ಸಭೆ ನಡೆದು ಕೇವಲ ಮೂರುದಿನಗಳ ಬಹಿರಂಗ ಹರಾಜು ಮಾಡಲು ನಿರ್ಧರಿಸಿದ್ದರು ಇದರಿಂದ ಕೇವಲ ಮೂರು ದಿನಗಳ ಬಹಿರಂಗ ಹರಾಜು ನಡೆಸಿ ಇಂದು ಇ ಹರಾಜಿಗೆ ಮಾರುಕಟ್ಟೆಯ ಅಧಿಕಾರಿಗಳು ಸಿದ್ದತೆ ನಡೆಸಿದ್ದರು ಅದರೇ ಬಹುತೇಕ ರೀಲರ‍್ಸ್‌ಗಳು ಬಹಿರಂಗ ಹರಾಜು ಮುಂದುವರೆಸಬೇಕೆಂದು ಪಟ್ಟಹಿಡಿದು ಮತ್ತೆ ಇ ಹರಾಜಿನಲ್ಲಿ ಭಾಗವಹಿಸಿಲ್ಲ.

ಅವಿಭಜಿತ ಕೋಲಾರ ಜಿಲ್ಲೆ ಸೇರಿದಂತೆ ನಾನಾ ಜಿಲ್ಲೆಗಳ ತಾಲೂಕುಗಳಿಂದ ಬಂದಿದ್ದ ರೈತರ ಗೂಡುಗಳನ್ನು ಇ ಹರಾಜಿನ ಮೂಲಕ ಕರ್ನಾಟಕ ರಾಜ್ಯ ರೇಷ್ಮೆ ಕೈಗಾರಿಕೆ ಅಭಿವೃಧ್ದಿ ನಿಗಮದ (ಕೆ.ಎಸ್.ಐ.ಸಿ) ಮೂಲಕ ರೇಷ್ಮೆ ಇಲಾಖೆಯ ಅಧಿಕಾರಿಗಳು ಪ್ರಯತ್ನ ನಡೆಸಿದ್ದರಿಂದ ೦೫ ಮಂದಿ ರೀಲರ‍್ಸ್ ಮಾತ್ರ ಭಾಗವಹಿಸಿದರೆನ್ನಲಾಗಿದೆ ಇದನ್ನು ಸಹ ರೀಲರ‍್ಸ್ ಪ್ರತಿಭಟಸಿದ್ದರಿಂದ ಮಾರುಕಟ್ಟೆಯಲ್ಲಿ ಇ ಹರಾಜಿನಲ್ಲಿ ಭಾಗವಹಿಸಿದ ಬೆರಳೆಣಿಕೆ ರೀಲರ‍್ಸ್ ಮತ್ತು ರೀಲರ‍್ಸ್ ಸಂಘಗಳ ಪ್ರತಿನಿಧಿಗಳ ಮಧ್ಯೆ ಮತ್ತು ರೈತರ ಮಧ್ಯೆ ಮಾತಿನ ಚಕಮುಕಿ ನಡೆದು ಗದ್ದಲ ಮತ್ತು ಗೊಂದಲದಿಂದ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು ಇನ್ನು ಕೆಲವರು ತೂಕ ಮಾಡುವ ಬುಟ್ಟು ಎಸೆದಿದ್ದರಿಂದ ಉಪನಿರ್ದೇಶಕರ ಕಿಟಕಿ ಗಾಜುಗಳು ಜಖಂಗೊಂಡಿತ್ತು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮಾರುಕಟ್ಟೆಯಲ್ಲಿ ಇ ಹರಾಜಿನ ವ್ಯವಸ್ಥೆಯನ್ನು ಜಾರಿಗೊಳಿಸಲು ಉಸ್ತುವಾರಿವಹಿಸಿಲು ಬಂದಿದ್ದ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರಾದ ಹೆಚ್.ಆರ್.ಪ್ರಭಾಕರ್,ಅಝೀಝುಲ್ ರೆಹಮಾನ್,ಮೋಮಿನ್,ವೆಂಕಟರಾವ್ ಹಾಗೂ ಮಾರುಕಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ವಾಹನಗಳ ಮೂಲಕ ರೈತರು ತಂದಿದ್ದ ಗೂಡುಗಳನ್ನು ಬೇರೆ ಮಾರುಕಟ್ಟೆಗಳಿಗೆ ಸಾಗಾಣಿಕೆ ಮಾಡಲು ಮುಂದಾಗಿದ್ದಾಗ ಅದಕ್ಕೂ ಸಹ ರೀಲರ‍್ಸ್ ವಿರೋಧ ವ್ಯಕ್ತಪಡಿಸಿ ಇಲ್ಲಿಯೇ ಬಹಿರಂಗ ಹರಾಜು ನಡೆಸಿ ರೈತರಿಗೆ ಯಾಕೆ ತೊಂದರೆ ಕೊಡ್ತೀರಿ ಎಂದು ರೇಷ್ಮೆ ಇಲಾಖೆಯ ಅಧಿಕಾರಿಗಳ ವರ್ತನೆಯ ವಿರುಧ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಮಾರುಕಟ್ಟೆಯಲ್ಲಿ ನಡೆಯುವ ಇ ಹರಾಜಿನಲ್ಲಿ ಭಾಗವಹಿಸಬೇಕೆಂದು ತಹಶೀಲ್ದಾರ್ ಕೆ.ಎಂ.ಮನೋರಮಾ,ಡಿವೈ‌ಎಸ್ಪಿ ಕೃಷ್ಣಮೂರ್ತಿ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ರೀಲರ‍್ಸ್‌ಗಳೊಂದಿಗೆ ಮಾತುಕತೆ ನಡೆಸಿದರು ಸಹ ಪ್ರಯೋಜನವಾಗಿಲ್ಲ ಬೆಳಿಗ್ಗೆಯಿಂದ ಮಧ್ಯಾಹ್ನವರೆಗೆ ಯಾವುದೇ ರೀತಿಯ ಸಂಧಾನ ಮತ್ತು ಮಾತುಕತೆಗೆ ರೀಲರ‍್ಸ್ ಮುಖಂಡರು ಸಹಮತ ವ್ಯಕ್ತಪಡಿಸಿಲ್ಲ ಮಾನಸಿಕ ನೆಮ್ಮದಿಭಂಗ ಮಾಡಿರುವ ಇ ಹರಾಜು ವ್ಯವಸ್ಥೆ ಬೇಡವೇ ಬೇಡವೆಂದು ಖಡಾಖಂಡಿತವಾಗಿ ತಳ್ಳಹಾಕಿದರು.

ಮಾರುಕಟ್ಟೆಯಲ್ಲಿ ಇ ಹರಾಜು ಜಾರಿಗೊಳಿಸುವ ಸಂಬಂಧ ಗೊಂದಲ ಮತ್ತು ಗದ್ದಲದ ವಾತಾವರಣ ನಿರ್ಮಾಣವಾಗಿ ಮೊದಲಿಗೆ ಇ ಹರಾಜಿನಲ್ಲಿ ಕೆಲ ಲಾಟ್‌ಗಳನ್ನು ಮಾತ್ರ ಖರೀದಿ ಮಾಡಿ ನಂತರ ಮಧ್ಯಾಹ್ನ ಸುಮಾರು ೩ ಗಂಟೆಯಲ್ಲಿ ರೇಷ್ಮೆ ಇಲಾಖೆಯ ಆಯುಕ್ತರ ಆದೇಶದನ್ವಯ ಬಹಿರಂಗ ಹರಾಜು ನಡೆಸಿ ೨೧ ಸಾವಿರ ೮೦೦ ಕೆ.ಜಿ.ಗೂಡುಗಳನ್ನು ಮಾರಾಟ ಮಾಡಲಾಗಿದೆ ಒಟ್ಟಾರೇ ಮಾರುಕಟ್ಟೆಯಲ್ಲಿ ಇ ಹರಾಜಿನ ವಿಚಾರದಲ್ಲಿ ಬೇಕು-ಬೇಡ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು ಪರಿಸ್ಥಿತಿ ಮಾತ್ರ ಇಂದು ವಿಕೋಪಕ್ಕೆ ಹೋಗಿದೆ.

ಇ-ಹರಾಜು ನಡೆಸಿ ಇಲ್ಲವೇ ಮಾರುಕಟ್ಟೆ ಬಂದ್ ಮಾಡಿ: ಸರಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೊಳಿಸಲು ಸರಕಾರ ಆರಂಭಿಸಿರುವ ಇ ಹರಾಜಿನ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದೆಂದು ರೈತರು ಒತ್ತಾಯಿಸಿದ್ದಾರೆ.

ಮಾರುಕಟ್ಟೆಯ ಸಭಾಂಗಣದಲ್ಲಿ ಸಭೆ ನಡೆಸಿದ ರೈತ ಮುಖಂಡರು ಚಿಕ್ಕಬಳ್ಳಾಪುರದಲ್ಲಿ ಶಾಸಕ ರಾಜಣ್ಣ,ಜಿಲ್ಲಾಧಿಕಾರಿಗಳು ಹಾಗೂ ರೇಷ್ಮೆ ಇಲಾಖೆಯ ಆಯುಕ್ತರ ಸಮ್ಮುಖದಲ್ಲಿ ರೀಲರ‍್ಸ್ ಮತ್ತು ರೈತರ ಸಭೆ ನಡೆಸಿ ಇ ಹರಾಜಿನ ವಿಚಾರದಲ್ಲಿ ಸುದೀರ್ಘವಾಗಿ ಚರ್ಚೆ ನಡೆದು ಮೂರು ದಿನಗಳ ಕಾಲ ಬಹಿರಂಗ ಹರಾಜು ನಡೆಸಲು ಒಪ್ಪಿಗೆ ಸೂಚಿಸಿ ನಂತರ ಇ ಹರಾಜಿನ ಮೂಲಕ ಗೂಡು ಖರೀದಿ ಮಾಡುವುದಾಗಿ ಹೇಳಿದ್ದ ರೀಲರ‍್ಸ್‌ಗಳ ಮುಖಂಡರು ಮಾತಿಗೆ ತಪ್ಪಿದ್ದಾರೆ ಎಂದು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಮತ್ತು ಭಾನುವಾರ ರೀಲರ‍್ಸ್‌ಗಳು ಇ ಹರಾಜಿನ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೇ ಸೋಮವಾರದಿಂದ ಶಿಡ್ಲಘಟ್ಟದ ಸರಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಅನಿರ್ಧಿಷ್ಠಾವಧಿವರೆಗೂ ಬಂದ್ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದು ಇ ಹರಾಜಿನಿಂದ ರೈತರ ಶೋಷಣೆ ತಪ್ಪಿದ್ದು ಸರಕಾರ ಮತ್ತು ಇಲಾಕೆಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಇ ಹರಾಜು ರದ್ದು ಮಾಡಬಾರದೆಂದು ಆಗ್ರಹಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಸಂಚಾಲಕ ಯಲುವಹಳ್ಳಿ ಸೊಣ್ಣೆಗೌಡ,ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್,ಪ್ರಾಂತ ರೈತ ಸಂಘದ ಮುಖಂಡ ಮಳ್ಳೂರು ಶಿವಣ್ಣ ಮತ್ತಿತರರು ಭಾಗಹಿಸಿದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...