ಶಿಡ್ಲಘಟ್ಟ: ಸಂವಿಧಾನತ್ಮಕ ಹಕ್ಕು ಚಲಾಯಿಸಲು  ನಾಗರಿಕರು ಜಾಗೃತರಾಗಿ : ಮಾನವ ಹಕ್ಕುಗಳ ಜನ ಜಾಗೃತಿ ಸೇನೆಯ ರಾಜ್ಯಾಧ್ಯಕ್ಷ ಆರ್.ಶಿವಕುಮಾರ್ ಕರೆ 

Source: tamim | By Arshad Koppa | Published on 21st February 2017, 8:18 AM | State News |

ಶಿಡ್ಲಘಟ್ಟ,ಫೆಬ್ರವರಿ20: ಸಂವಿಧಾನತ್ಮಕವಾಗಿರುವ ಹಕ್ಕುಗಳನ್ನು ಚಲಾಯಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಾಮಾನ್ಯಜ್ಞಾನವನ್ನು ಹೆಚ್ಚಿಸಿಕೊಂಡು ಜಾಗೃತರಾಗಬೇಕೆಂದು ಭಾರತೀಯ ಮಾನವ ಹಕ್ಕುಗಳ ಜನ ಜಾಗೃತಿ ಸೇನೆಯ ರಾಜ್ಯಾಧ್ಯಕ್ಷ ಆರ್.ಶಿವಕುಮಾರ್ ಹೇಳಿದರು.
    ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರಕಾರಿ ಕಛೇರಿಗಳಲ್ಲಿ ಭ್ರಷ್ಟಚಾರವನ್ನು ತೊಲಗಿಸಲು ಸರಕಾರಿ ಸೌಲಭ್ಯಗಳು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯನಿರ್ವಹಿಸಲಿದ್ದು ಭ್ರಷ್ಟಚಾರ ಮುಕ್ತ ರಾಜ್ಯ ಮತ್ತು ರಾಷ್ಟ್ರದ ನಿರ್ಮಾಣವೆ ಸಂಘಟನೆಯ ಮೂಲ ಗುರಿಯಾಗಿದೆ ಎಂದರು.
    ಮಾನವ ಹಕ್ಕುಗಳ ಜಾಗೃತಿ ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಕೊತ್ತನೂರು ಪ್ರಭಾಕರರೆಡ್ಡಿ, ತಾಲೂಕು ಕಾರ್ಯದರ್ಶಿಯಾಗಿ ವೇಮಗಲ್ ನಾರಾಯಣಸ್ವಾಮಿಯವರನ್ನು ಆಯ್ಕೆ ಮಾಡಿ ಅವರಿಗೆ ಸೇನೆಯ ಗುರ್ತಿನ ಚೀಟಿ ನೀಡುವ ಮೂಲಕ ಅಧಿಕಾರವನ್ನು ವಹಿಸಲಾಯಿತು.
    ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕರಿಗಿರುವ ಹಕ್ಕುಗಳ ಕುರಿತು ಸಂಘಟನೆ ಜನಜಾಗೃತಿ ಮೂಡಿಸಲಿದೆ ನಮ್ಮ ಸಂಘಟನೆಯು ಹಿಂಸಾತ್ಮಕ ರೂಪದಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವ ಹಾದಿಯಲ್ಲೂ ಹೋರಾಟ ಮಾಡುವುದಿಲ್ಲ ಸಾರ್ವಜನಿಕರು ವಿಶ್ವಾಸವನ್ನು ವೃಧ್ದಿಸಿಕೊಂಡು ಸತ್ಯಾಂಶವನ್ನು ಮುಂದಿಟ್ಟು ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದು ರಾಜ್ಯದ 7 ಜಿಲ್ಲೆಗಳಲ್ಲಿ ಈಗಾಗಲೇ ಸಂಘಟನೆಯನ್ನು ಬಲಪಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ಸಂಘಟನೆಗಳನ್ನು ರಚಿಸಿಸಲಾಗುವುದೆಂದರು.
    ಹುಟ್ಟು ಉಚಿತ ಸಾವು ಖಚಿತ ಸಾಧನೆಯೊಂದೇ ಶಾಶ್ವತ ಹುಟ್ಟಿದಾಗ ಉಸಿರು ಇರುತ್ತದೆ ಹೆಸರು ಇರುವುದಿಲ್ಲ ಸತ್ತಾಗ ಹೆಸರು ಇರುತ್ತದೆ ಉಸಿರುವ ಇರುವುದಿಲ್ಲ ಉಸಿರು ಇದ್ದಾಗಲೇ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದ ಅವರು ಸಾಧಕರು ಸಾಯುವುದಿಲ್ಲ ಸಾಧನೆಗೆ ಸಾವಿಲ್ಲ ಸಾಧನೆಗೆ ಛಲವಿದ್ದರೇ ಜಯ ನಿಮ್ಮದೆ ಜನಪ್ರೀತಿ ಮಾಡುವ ಕೆಲಸವನ್ನು ಸಂಘಟನೆಯ ಪದಾಧಿಕಾರಿಗಳು ಮಾಡಬೇಕೆಂದು ಕರೆ ನೀಡಿದರು.
     ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ಆರ್.ಶ್ರೀನಿವಾಸ್‍ರೆಡ್ಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೊತ್ತನೂರು ಪ್ರಭಾಕರರೆಡ್ಡಿ, ತಾಲೂಕು ಕಾರ್ಯದರ್ಶಿ ನಾರಾಯಣಸ್ವಾಮಿ,ಮದ್ದರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.
                                                                                                                                

 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!