ಶಿಡ್ಲಘಟ್ಟ: ನಾಲ್ಕು ಮರಿಗಳಿಗೆ ಜನ್ಮ ನೀಡಿದ ಮೇಕೆ

Source: tamim | By Arshad Koppa | Published on 18th January 2017, 8:30 AM | State News | Special Report |

ಶಿಡ್ಲಘಟ್ಟ,ಜನವರಿ17: ಮೇಕೆಗಳು ಒಂದುಗಿಂತ ಎರಡು ಅಥವಾ ಮೂರು ಮರಿಗಳನ್ನು ಜನ್ಮ ನೀಡುವುದನ್ನು ಕಂಡಿದೇವೆ ಆದರೇ ತಾಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಕುರಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿರುವ ವಿಸ್ಮಯಕಾರಿ ಘಟನೆ ವರದಿಯಾಗಿದೆ.
    
ತಾಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದ ರಾಜಣ್ಣ ಎಂಬುವರ ಕುರಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಅದನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸುತ್ತಿದ್ದು ಕುತುಹಲ ಕೆರಳಿಸಿದೆ.
    ಸಾಮಾನ್ಯವಾಗಿ ಕುರಿಗಳನ್ನು ಸಾಕಾಣಿಕೆ ಮಾಡುವ ರಾಜಣ್ಣ ಜೀವನ ನಡೆಸುತ್ತಿದ್ದಾರೆ ಈ ಹಿಂದೆ ಅನೇಕ ಕುರಿಗಳು ಒಂದು-ಎರಡು ತಪ್ಪಿದರೆ ಮೂರು ಮರಿಗಳಿಗೆ ಜನ್ಮ ನೀಡಿದೆ ಆದರೇ ಇದೇ ಮೊದಲ ಬಾರಿಗೆ ಕುರಿ 4 ಮರಿಗಳಿಗೆ ಜನ್ಮ ನೀಡಿರುವುದು ವಿಸ್ಮಯುಂಟು ಮಾಡಿದೆ ನಾಲ್ಕು ಹೆಣ್ಣು ಮರಿಗಳಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ.
    ಚಳ್ಳಕೆರೆ ತಲಿಯ ಕುರಿ ಮೊದಲ ಸೂಲಿನಲ್ಲಿಯೆ ನಾಲ್ಕು ಕುರಿ ಮರಿಗಳನ್ನು ಹಾಕುವ ಮೂಲಕ ಅಚ್ಚರಿ ಮೂಡಿಸಿದೆ ಸಾಮಾನ್ಯವಾಗಿ ಚಳ್ಳಕೆರೆ, ನಾಟಿ, ಬನ್ನೂರು, ನಾರಿ ಸುವರ್ಣ ಇನ್ನಿತರೆ ಯಾವುದೆ ಕುರಿಯಾಗಲಿ ಒಂದು ಅಥವಾ ಎರಡು ಮರಿ ಹಾಕುವುದು ಸಹಜ ಆದರೆ ಅಪರೂಪದಲ್ಲಿ ಅಪರೂಪ ಎಂಬಂತೆ ನಾಲ್ಕು ಮರಿಗಳನ್ನು ಹಾಕಿದೆ.
    ತಮ್ಮ ತಾತ ಅಪ್ಪಂದಿರ ಕಾಲದಿಂದಲೂ ವ್ಯವಸಾಯ, ಕುರಿ ಮೇಕೆ ಸಾಕಾಣಿಕೆ ಕಸುಬನ್ನು ಮಾಡುತ್ತಿದ್ದು ನಮ್ಮ ಮನೆತನದಲ್ಲಿ ಇದೆ ಮೊದಲ ಬಾರಿಗೆ ಕುರಿ ನಾಲ್ಕು ಮರಿಗಳನ್ನು ಹಾಕಿದೆ ಎಂದು ರಾಜಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
    ತಾಲೂಕಿನಲ್ಲಿ ಭೀಕರವಾಗಿ ಬರಗಾಲ ತಲೆದೂರಿದ್ದು ರೈತರು ದನಕರುಗಳನ್ನು ಮಾರಾಟ ಮಾಡಲು ಸಜ್ಜಾಗುತ್ತಿರುವ ಬೆನ್ನಲ್ಲೆ ರೈತರೊಬ್ಬರ ಮನೆಯಲ್ಲಿ ಕುರಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿರುವ ವಿಚಾರ ರೈತನ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...