ಶಿಡ್ಲಘಟ್ಟ:ಮತಪಡೆದ ಶಾಸಕರಿಂದ ಏನೂ ಆಗಿಲ್ಲ-ಸಮುದಾಯದವರಿಗೆ ಅನುಕೂಲ ಕಲ್ಪಿಸುವ ಪಕ್ಷಕ್ಕೆ ಮಾತ್ರ ಬೆಂಬಲಕ್ಕೆ ಕೇಶವಮೂರ್ತಿ ಕರೆ 

Source: tamim | By Arshad Koppa | Published on 15th August 2017, 8:39 AM | State News | Guest Editorial |

ಶಿಡ್ಲಘಟ್ಟ,ಆಗಸ್ಟ್14: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಯಾದ ಸಮಾಜದವರ ಮತಗಳನ್ನು ಪಡೆದುಕೊಂಡ ಸಂಸದರು-ಶಾಸಕರು,ಮಾಜಿ ಶಾಸಕರು ಸಮುದಾಯಕ ಕಲ್ಯಾಣಕ್ಕಾಗಿ ಏನು ಮಾಡಿಲ್ಲ ಮುಂದಿನ ವಿಧಾನಸಭಾ ಚುನಾವಣೆಯ ಮುನ್ನ ಸಮುದಾಯದವರಿಗೆ ಅನುಕೂಲ ಕಲ್ಪಿಸುವ ಪಕ್ಷಕ್ಕೆ ಮಾತ್ರ ಬೆಂಬಲಿಸಬೇಕೆಂದು ತಾಲೂಕು ಯಾದವ್ ಸಂಘದ ಅಧ್ಯಕ್ಷ ಕೇಶವಮೂರ್ತಿ ಕರೆ ನೀಡಿದರು.
    ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಯಾದವ ಸಂಘದ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚುನಾವಣೆಗಳಲ್ಲಿ ಯಾದವ ಸಮಾಜದವರ ಮತಗಳನ್ನು ಪಡೆದುಕೊಂಡಿರುವ ಸಂಸದರು ಶಾಸಕರು-ಮಾಜಿ ಶಾಸಕರು ಏನು ಮಾಡಿಲ್ಲ ಎಂದು ದೂರಿದ ಅವರು ಮುಂದಿನ ವಿಧಾನಸಭೆಯ ಚುನಾವಣೆಯ ವೇಳೆಯಲ್ಲಿ ಸಮುದಾಯ ಮಕ್ಕಳಿಗೆ ಶೈಕ್ಷಣಿಕವಾಗಿ ಪೂರಕವಾಗಿರುವ ಹಾಸ್ಟೆಲ್‍ಗಳನ್ನು ಮತ್ತು ಸಕಲ ಸೌಲಭ್ಯಗಳನ್ನು ಒದಗಿಸುವ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರ ಬೆಂಬಲಿಸಬೇಕೆಂದು ಕರೆ ನೀಡಿದರು.
    ಯಾದವ ಸಮಾಜದವರು ಶೈಕ್ಷಣಿಕವಾಗಿ,ಸಾಮಾಜಿಕವಾಗಿ,ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಸಬಲರಾಗಬೇಕೆಂದ ಅವರು ಸಮುದಾಯದವರು ಮೊದಲು ಸಂಘಟಿತರಾಗಿ ತಮ್ಮ ತಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ವಿಶೇಷ ಗಮನಹರಿಸಬೇಕು ಪ್ರತಿಯೊಬ್ಬರು ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕೆಂದರು.
    ಶಾಸಕ ಎಂ.ರಾಜಣ್ಣ ಮಾತನಾಡಿ    ಶ್ರೀ ಕೃಷ್ಣನವರ ಗೀತೋಪದೇಶ ವಿಶ್ವವಿಖ್ಯಾತಗೊಂಡಿದೆ ಅಂತಹ ಮಹಾನ ಪುರುಷರ ಜೀವನ ಆದರ್ಶಗಳನ್ನು ಮೈಗೂಡಿಸಿಕೊಂಡು ಆರೋಗ್ಯವಂತ ಮತ್ತು ಆದರ್ಶಸಮಾಜವನ್ನು ನಿರ್ಮಿಸಬೇಕೆಂದು ಕರೆ ನೀಡಿದರು.
    ಮುಖ್ಯ ಭಾಷಣಕಾರ ಡಾ.ಸತ್ಯನಾರಾಯಣ ಮಾತನಾಡಿ ಜಗತ್ತಿನಲ್ಲಿ ಶ್ರೇಷ್ಠ ಜಯಂತಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗಾಗಿ ಸರಕಾರ ಜಯಂತಿಯನ್ನು ಸರಕಾರಿ ಮಟ್ಟದಲ್ಲಿ ಆಚರಿಸುವ ಜೊತೆಗೆ ಸಾರ್ವತ್ರಿಕ ರಜೆಯನ್ನು ಘೋಷಿಸಬೇಕೆಂದು ಆಗ್ರಹಿಸಿದರು,ತಹಶೀಲ್ದಾರ್ ಅಜೀತ್‍ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಕೃಷ್ಣ ಜೀವನ ಚರಿತ್ರೆ ಕುರಿತು ಬೆಳಕು ಚೆಲ್ಲಿದರು.
ಕಾರ್ಯಕ್ರಮಕ್ಕೆ ಮುನ್ನ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ಟಿ.ಬಿ.ರಸ್ತೆಯಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು ಕರ್ಣಶ್ರೀ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಡಿ.ಆರ್.ಶಿವಕುಮಾರಗೌಡ ಸೇರಿದಂತೆ ಹಲವರು ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು ಯಾದವ ಸಮುದಾಯದವರು ಕಲಾವಿದರು ತಂಡದೊಂದಿಗೆ ತಂಬಿಟ್ಟ ದೀಪಗಳೊಂದಿಗೆ ಅಲಂಕೃತ ಪಲ್ಲಕ್ಕಿಯ ಮೂಲಕ ಮೆರವಣಿಗೆ ನಡೆಸಿದರು ಸಮುದಾಯದ ಪ್ರಮುಖ ನಾಯಕರು ಕೋಟೆ ವೃತ್ತದಲ್ಲಿ ತಮಟೆ ವಾದಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಇದೇ ವೇಳೆಯಲ್ಲಿ 25 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಿ.ಎಲ್.ಡಿ ಬ್ಯಾಂಕಿನ ನಿರ್ದೇಶಕ ಯಾದವ ಸಮಾಜದ ಮುಖಂಡ ಅಶ್ವತ್ಥನಾರಾಯಣ ವೈಯಕ್ತಿಕವಾಗಿ ನಗದು ನೀಡುವ ಮೂಲಕ ಪ್ರೋತ್ಸಾಹಿಸಿದರು.
ತಾಲೂಕು ಯಾದವ ಸಂಘದ ಗೌರವಾಧ್ಯಕ್ಷ ಟಿ.ಕೆ.ನಟರಾಜ್,ಉಪಾಧ್ಯಕ್ಷ ರಾಮಚಂದ್ರಪ್ಪ,ಎಪಿಎಂಸಿ ನಿರ್ದೇಶಕ ಡಿ.ವಿ.ವೆಂಕಟೇಶ್,ಮುಖಂಡರಾದ ನಾರಾಯಣಸ್ವಾಮಿ,ನಗರಸಭೆಯ ಸದಸ್ಯ ಲಕ್ಷ್ಮಯ್ಯ, ಜಿಪಂ ಸದಸ್ಯ ಬಂಕ್ ಮುನಿಯಪ್ಪ, ತನುಜ ರಘು,ಜಿಪಂ ಮಾಜಿ ಅಧ್ಯಕ್ಷ ವಿ.ಸುಭ್ರಮಣಿ, ತಾಪಂ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ,ಉಪಾಧ್ಯಕ್ಷ ನರಸಿಂಹಯ್ಯ,ಕಾನೂನು ಸಲಹೆಗಾರ ವಕೀಲ ಶ್ರೀನಿವಾಸ್,ಜಿಲ್ಲಾ ಯಾದವ ಯುವಕರ ವೇದಿಕೆಯ ಗೌರವಾಧ್ಯಕ್ಷ ಮುನಿರಾಜು,ತಾಪಂ ಮಾಜಿ ಅಧ್ಯಕ್ಷ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ಶಿಡ್ಲಘಟ್ಟದಲ್ಲಿ ನಡೆದ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದ ಅಂಗವಾಗಿ ತಂಬಿಟ್ಟ ದೀಪಗಳು ಮತ್ತು ಅಲಂಕೃತ ಪಲ್ಲಕ್ಕಿಗಳೊಂದಿಗೆ ಮೆರವಣಿಗೆ ನಡೆಸಿದರು.


 

Read These Next

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...