ಶಿಡ್ಲಘಟ್ಟ:  ಅಭಿವೃಧ್ಧಿ ಕಾಮಗಾರಿ ಬಗ್ಗೆ ನಿರ್ಲಕ್ಷ್ಯವಹಿಸಿರುವ ಅಭಿವೃಧ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳ ವರ್ಗಾವಣೆಗೆ ಆಗ್ರಹ

Source: tamim | By Arshad Koppa | Published on 23rd April 2017, 10:00 AM | State News |

ಶಿಡ್ಲಘಟ್ಟ,ಏಪ್ರೇಲ್22: ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಅಭಿವೃಧ್ಧಿ ಕಾಮಗಾರಿಗಳನ್ನು ನಡೆಸಲು ಸ್ಪಂದಿಸದೆ ನಿರ್ಲಕ್ಷ್ಯವಹಿಸಿರುವ ಜೆ.ಡಿ.ಎಸ್ ಬೆಂಬಲಿತ ಸದಸ್ಯರೊಂದಿಗೆ ಸೇರಿಕೊಂಡು ಪಕ್ಷಪಾತ ಮಾಡುತ್ತಿರುವ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಯನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಕಾಂಗ್ರೇಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರೊಂದಿಗೆ ತಾಲೂಕಿನ ಪಲೀಚೇರ್ಲು ಗ್ರಾಮ ಪಂಚಾಯಿತಿ ಮುಂದೆ ಧರಣಿ ನಡೆಸುತ್ತಿದ್ದಾರೆ.
    ಹಿಂದುಳಿದ ಗ್ರಾಮ ಪಂಚಾಯತಿಯಲ್ಲಿ ಹಿರಿಯ ಅಧಿಕಾರಿಗಳ ಸಹಕಾರದಿಂದ ಅಭಿವೃಧ್ಧಿ ಕಾಮಗಾರಿಗಳನ್ನು ನಡೆಸಿ ಮಾದರಿಯಾಗಿ ಪರಿವರ್ತಿಸಲು ಅಧ್ಯಕ್ಷ ಗೋಪಿ ಶ್ರಮವಹಿಸುತ್ತಿದ್ದರು ಸಹ ಅಧ್ಯಕ್ಷರ ಅಭಿವೃಧ್ಧಿಪರ ನಿಲುವು ಸಹಿಸದ ಜೆ.ಡಿ.ಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಬೆಂಬಲದಿಂದ ಸಮಯ ಮತ್ತು ಶಿಸ್ತು ಪಾಲನೆ ಮಾಡದೆ ಪಕ್ಷಪತದಿಂದ ಸಾಮಾನ್ಯ ಜನರ ಕೆಲಸ ಕಾರ್ಯಗಳಿಗೆ ಬಂದರೆ ನಿರ್ಲಕ್ಷದೋರಣೆಯಿಂದ ಅನುಸರಿಸುತ್ತಿರುವ ಪಂಚಾಯತಿ ಅಭಿವೃದ್ದಿ ಅಧಿಕಾರಿ ಜಿ.ವಜ್ರೇಶ್ ಕುಮಾರ್ ಮತ್ತು ಕಾರ್ಯದರ್ಶಿ ಮದ್ದರೆಡ್ಡಿ ಅವರನ್ನು ಕೂಡಲೇ ವರ್ಗವಣೆ ಮಾಡಬೇಕೆಂದು ಒತ್ತಾಯಿಸಿದರು.
    ಪೋಸ್ಟ್ ಗ್ರಾಜುಯೇಷನ್ ಪದವಿದರ ನಾನು ಐ.ಎ.ಎಸ್, ಐ.ಪಿ.ಎಸ್ ಆಗುತ್ತಿದ್ದೇನೆ ನನಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿ ಕೆಲಸ ಮಾಡಲು ಇಷ್ಟವಿಲ್ಲ, ನಾನು ಪಂಚಾಯತಿ ಅಧ್ಯಕ್ಷರಿಗೆ ಗೌರವ ನೀಡುವುದಿಲ್ಲ ಅಧ್ಯಕ್ಷರ ಮಾತೇ ಕೇಳುವುದಿಲ್ಲ ನಾನು ಇನ್ನು ದಲಿತರಾಗಿರಲಿ ಸಾಮಾನ್ಯ ಜನರಾಗಿರಲಿ,ಯಾರಿಗೇ ಆಗಲಿ ನಾನು ಸ್ವಂಧಿಸುವುದಿಲ್ಲ ನೀವು ಯಾರ ಬಳಿಯಾದರೂ ಹೋಗಿ ನಾನು ಯಾರಿಗೂ ಗೌರವ ನೀಡುವುದಿಲ್ಲ ನನಗೆ ಪಂಚಾಯತಿ ರಾಜ್ ಇಲಾಖೆ ಸಚಿವರ ಬೆಂಬಲ ಇದೆ ನನ್ನನ್ನು ಯಾರು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಜನ ವಿರೋಧಿ ಧೋರಣೆಯನ್ನು ಅನುಸರಿಸಿರುವ ಪಕ್ಷಪಾತ ಮಾಡುತ್ತಿರುವ ಸರ್ವಾಧಿಕಾರಿ ಪಿಡಿಓ ವಜ್ರೇಶ್ ಮತ್ತು ಕಾರ್ಯದರ್ಶಿ ಮದ್ದರೆಡ್ಡಿಯನ್ನು ವರ್ಗಾವಣೆ ಮಾಡುವುವರೆಗೂ ಧರಣಿಯನ್ನು ವಾಪಸ್ಸು ಪಡೆಯುವುದಿಲ್ಲವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
    ಗುಂಡುತೋಪಿನ ಜಮೀನುಗಳ ಖಾತೆಗಳನ್ನು ಮಾಡಿಕೊಡಲು ತಾವು ಒತಡ ಹೇರಿದ್ದೇನೆ ಎಂದು ಜೆ.ಡಿ.ಎಸ್ ಗ್ರಾಮ ಪಂಚಾಯಿತಿ ಸದಸ್ಯರ ಆರೋಪ ಸತ್ಯಕ್ಕೆ ದೂರವಾಗಿದೆ ಗುಂಡುತೋಪಿನ ಜಮೀನಿಗಳ ಖಾತೆ ಮಾಡಲು ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ಇದಿಯೇ? ಎಂಬುದರ ಕುರಿತು ಕನಿಷ್ಠ ಜ್ಞಾನ ಇಲ್ಲದೇ ಜನಗಳಲ್ಲಿ ಗೊಂದಲ ಸೃಷ್ಠಿಸಿ ಅಭಿವೃಧ್ಧಿ ಕೆಲಸಗಳನ್ನು ಮಾಡಲು ಅಡಚಣೆ ಮಾಡುತ್ತಿದ್ದಾರೆ ಅದಕ್ಕೆ ಪಿಡಿಓ ಮತ್ತು ಕಾರ್ಯದರ್ಶಿಗಳು ಬೆಂಬಲ ನೀಡುತ್ತಿದ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತರಿಗೆ ಜಾಬ್ ಕಾರ್ಡ್‍ಗಳನ್ನು ನೀಡುತ್ತಿಲ್ಲ ಮಜನರೇಗಾ ಯೋಜನೆಯಲ್ಲಿ ಕೈಗೊಂಡಿರುವ ಕೆಲಸಗಳಿಗೆ ಬಿಲ್ಲು ಪಾವತಿಸದೆ ತೊಂದರೆ ಮಾಡುತ್ತಿದ್ದಾರೆ ಸರಕಾರಿ ನಿಯಮಗಳನ್ನು ಮೀರಿ ಕೈಗೊಂಡಿರುವ ಕ್ರಮಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಿ ಒತ್ತಾಯಿಸಿದರು.
    ಪ್ರತಿಭಟನಾಕಾರ ಮನವಿಯನ್ನು ಸ್ವೀಕರಿಸಿ ತಾಪಂ ಇಓ ವೆಂಕಟೇಶ್ ಮಾತನಾಡಿ ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳು ಮಿನಿ ಸರಕಾರಗಳಿದ್ದಂತೆ ಗ್ರಾಮಾಭಿವೃಧ್ಧಿ ವಿಚಾರದಲ್ಲಿ ರಾಜಕೀಯ ಮತ್ತು ಪಕ್ಷಪಾತ ಮಾಡದೆ ಅಭಿವೃಧ್ಧಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಮತ್ತು ಕಾರ್ಯದರ್ಶಿಗಳ ಮೇಲೆ ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸಿ ಜಿಪಂ ಸಿಇಓಗೆ ಮಾಹಿತಿ ನೀಡಿ ಮುಂದಿನ ಕ್ರಮ ಜರುಗಿಸುವುದಾಗಿ ಭರವಸೆ ನೀಡಿ ಧರಣಿಯನ್ನು ವಾಪಸ್ಸು ಪಡೆಯಬೇಕೆಂದು ಮನವಿ ಮಾಡಿದರು ಆದರೇ ಪಟ್ಟುಬಿಡದ ಗ್ರಾಮಸ್ಥರು ಇಬ್ಬರು ಅಧಿಕಾರಿಗಳು ವರ್ಗಾವಣೆ ಮಾಡುವವರೆಗೂ ಧರಣಿಯನ್ನು ವಾಪಸ್ಸು ಪಡೆಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
    
ಪ್ರತಿಭಟನೆಯಲ್ಲಿ ಪಲೀಚೇರ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟಶಿವಾರೆಡ್ಡಿ,ಮಂಜುನಾಥ್,ಗಂಗಪ್ಪ,ರಾಮಾಂಜಿನಪ್ಪ,ಶಾಂತಮ್ಮರಾಮಚಂದ್ರಪ್ಪ,ರತ್ನಮ್ಮಚಂದ್ರಪ್ಪ,ಪಾರ್ವತಮ್ಮ ನಾರಾಯಣಸ್ವಾಮಿ,ತಾಲೂಕು ದಸಂಸ ಪ್ರಧಾನ ಕಾರ್ಯದರ್ಶಿ ಬೈರಗಾನಹಳ್ಳಿ ನಾರಾಯಣಸ್ವಾಮಿ,ಬಿ.ಎನ್.ಮಂಜುನಾಥ್,ಬಿ.ಎಂ.ರವಿ,ಸದ್ದಹಳ್ಳಿ ಪ್ರಕಾಶ್,ದೊಗರನಾಯಕನಹಳ್ಳಿ ದ್ಯಾವಪ್ಪ,ಬೈರಗಾನಹಳ್ಳಿ ಬಿ.ಎಂ.ರವಿ, ದ್ಯಾವಪ್ಪ,ಆನಂದ್, ನಾರಾಯಣಸ್ವಾಮಿ, ಗುರುರಾಜ್,ಎಸ್.ವಿ.ವೆಂಕಟೇಶ್,ಕನ್ನಪ್ಪನಹಳ್ಳಿ ತಿಪ್ಪಣ್ಣ,ನಾಗರಾಜ್,ಮುಮ್ಮನಹಳ್ಳಿ ನರಸರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.    
ಸುಧ್ಧಿಚಿತ್ರ,ಏಪ್ರೇಲ್22 ಎಸ್.ಡಿ.ಎಲ್.ಪಿ01 ಶಿಡ್ಲಘಟ್ಟ ತಾಲೂಕಿನ ಪಲಿಚೇಲು ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಿ ನೇತೃತ್ವದಲ್ಲಿ ಸದಸ್ಯರು ಗ್ರಾಮ ಪಂಚಾಯಿತಿ ಮುಂದೆ ಧರಣಿ ನಡೆಸುತ್ತಿದ್ದಾರೆ.
ಸುಧ್ಧಿಚಿತ್ರ,ಏಪ್ರೇಲ್22 ಎಸ್.ಡಿ.ಎಲ್.ಪಿ02 ಶಿಡ್ಲಘಟ್ಟ ತಾಲೂಕಿನ ಪಲಿಚೇಲು ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರೊಂದಿಗೆ ತಾಪಂ ಇಓ ವೆಂಕಟೇಶ್ ಮಾತುಕತೆ ನಡೆಸಿದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...