ಶಿಡ್ಲಘಟ್ಟ:ಹಿಂದೆ ಸೇವಾ ಕ್ಷೇತ್ರವಾಗಿದ್ದ ರಾಜಕಾರಣ ಇತೀಚಿಗೆ ವ್ಯಾಪಾರಸ್ಥಳವಾಗಿದೆ-ನಾರಾಯಣಸ್ವಾಮಿ ಕಳವಳ

Source: tamim | By Arshad Koppa | Published on 16th August 2017, 9:33 PM | State News | Guest Editorial |

ಶಿಡ್ಲಘಟ್ಟ,ಆಗಸ್ಟ್16: ಈ  ಹಿಂದೆ ಸೇವಾ ಕ್ಷೇತ್ರವಾಗಿದ್ದ ರಾಜಕಾರಣ ಇತೀಚಿಗೆ ವ್ಯಾಪಾರ ಮಾಡುವ ಉದ್ಯಮವಾಗಿ  ಪರಿಣಮಿಸಿದೆ ಎಂದು ಸಮಾಜ ಸೇವಕ ಗಂಗರಕಾಲುವೆ ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.
 ತಾಲೂಕಿನ ಪಿಂಡಪಾಪನಹಳ್ಳಿ ಬಿಳಿಯಿರುವ ಬೃಂದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತು ರಕ್ತದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜನಸೇವೆಗಾಗಿ ಮಾಡುತ್ತಿದ್ದು ರಾಜಕಾರಣ ಇದೀಗ ಉದ್ಯಮ ಮಾಡಲು ಕೆಲವರು ಹೊರಟಿದ್ದು ಜನಾರ್ಧನ ಸೇವೆಯೆಂದು ನಂಬಿ ರಾಜಕಾರಣ ಮಾಡುತ್ತಿದ್ದರು ಇದೀಗ ರಾಜಕಾರಣವನ್ನು ಹಣಗಳಿಸುವ ಉದ್ಯಮವಾಗಿ ಪರಿವರ್ತನೆ ಮಾಡಲು ಹುನ್ನಾರ ನಡೆಸಲಾಗಿದ್ದು ಜನರು ಜಾಗೃತರಾಗಿ ಕ್ಷೇತ್ರದ ಅಭಿವೃಧ್ಧಿಯನ್ನು ಮಾಡುವ ಮನೋಭಾವ ಹೊಂದಿರುವ ವ್ಯಕ್ತಿಯನ್ನು ಜನಪ್ರತಿನಿಧಿಯಾಗಿ ಆರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸತತ ಬರಗಾಲದಿಂದ ತತ್ತರಿಸುತ್ತಿರುವ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಉದ್ಯೋಗ ಸೃಷ್ಠಿಸುವ ಕಾರ್ಖಾನೆಗಳು ತೀರಾ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಜನ ಚಿಂತನೆ ನಡೆಸಬೇಕು ಕೇವಲ ಓಟು ಹಾಕಿ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸದೆ ಬರಪೀಡಿತ ಪ್ರದೇಶಗಳಿಗೆ ನೀರು ಹರಿಸುವ ಇಚ್ಛಾಶಕ್ತಿಯನ್ನು ಹೊಂದಿರುವ ಜನಸೇವೆಯನ್ನು ನಿಸ್ವಾರ್ಥವಾಗಿ ಮಾಡುವ ಜನಪ್ರತಿನಿಧಿಯನ್ನು ಆರಿಸಬೇಕು ವಿಶೇಷವಾಗಿ ಯುವಕರು ನೀರಾವರಿ ಮತ್ತು ನಿರುದ್ಯೋಗ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಮಾಡುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಖ್ಯಾತ ಚಲನಚಿತ್ರ ನಟಿ ಕುಮಾರಿ ಮೌರ್ಯಾನಿ ಮಾತನಾಡಿ ಬ್ರಿಟೀಷರ ವಿರುಧ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ಮಹಾನ ನಾಯಕರು ಜಾತಿ ಧರ್ಮ ಭೇದವಿಲ್ಲದೇ ಪ್ರಾಣಗಳನ್ನು ತ್ಯಾಗ ಮಾಡಿದ ಫಲದಿಂದಾಗಿ ನಾವೆಲ್ಲರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದರು.
ಅಂದು ಸ್ವಾತಂತ್ರ್ಯಕ್ಕಾಗಿ ಮಹಾನ ನಾಯಕರು ಪ್ರಾಣಗಳನ್ನು ತ್ಯಾಗ ಮಾಡಿದರೆ ಇಂದು ಗಡಿಯಲ್ಲಿ ಪ್ರಾಣವನ್ನು ಲೆಕ್ಕಿಸದೆ ಹಗಲಿರುಳು ದೇಶಸೇವೆ ಮಾಡುತ್ತಿರುವ ಸೈನಿಕರಿಂದ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಪ್ರತಿಯೊಬ್ಬರು ಸೈನಿಕರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳು ದೇಶಾಭಿಮಾನವನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸದೃಡ ರಾಷ್ಟ್ರವನ್ನು ನಿರ್ಮಾಣದಲ್ಲಿ ಭಾಗಿಗಳಾಗಬೇಕೆಂದು ಕರೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ಸ್ಥಾಪಿಸಿ ನಡೆಸುವುದು ಬಹಳ ಕಷ್ಟದ ಕೆಲಸ ಆದರೂ ಸಹ ಸಾಹಸದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶಿಷ್ಠವಾಗಿ ನಡೆಸಿರುವ ಬೃಂದ ಶಾಲೆಯ ಆಡಳಿತ ಮಂಡಳಿಯ ದೇಶಭಕ್ತಿ ಮತ್ತು ಸಾಮಾಜಿಕ ಕಳಕಳಿ ಪ್ರಶಂಸನೀಯ ಎಂದರು.
     ಸ್ವಾತಂತ್ರ್ಯ ದಿನಾಚರಣೆಯನ್ನು ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಸುಮಾರು 35 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
    ಕಾರ್ಯಕ್ರಮದಲ್ಲಿ ಗ್ರಾಮಾಂತರ ಪೋಲಿಸ್‍ಠಾಣೆಯ ಪಿಎಸ್‍ಐ ಪ್ರದೀಪ್ ಪೂಜಾರಿ, ಸಮಾಜ ಸೇವಕ ಬೃಂದ ಫೌಂಡೇಶನ್ ಟ್ರಸ್ಟ್‍ನ ಅಧ್ಯಕ್ಷ ಬಿ.ಎನ್.ನಾಗರಾಜ್, ಕಾರ್ಯದರ್ಶಿ ಬಿ.ಎನ್.ಯಶೋಧ, ಖಜಾಂಚಿ ಜಿ.ಎಂ.ಕೃಷ್ಣಪ್ಪ, ಜೀವರಕ್ಷಕ ರಕ್ತನಿಧಿ ಕೇಂದ್ರದ ಎ.ಸುಧಾಕರ್, ಮುಖ್ಯೋಪಾಧ್ಯಾಯಿನಿ ಸೆಲ್ವಿ,ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...