ಶಿಡ್ಲಘಟ್ಟ: ಸೀಮೆ ಎಣ್ಣೆ ಸ್ಟವ್ ಸಿಡಿದು ಗಾಯಗೊಂಡ ಗೃಹಿಣಿ
ಶಿಡ್ಲಘಟ್ಟ,ಜನವರಿ18: ಅಡುಗೆ ಮಾಡುವಾಗ ಸೀಮೆಎಣ್ಣೆ ಸ್ಟವ್ ಸಿಡಿದು ಗೃಹಣಿಯೊರ್ವಳು ಗಾಯಗೊಂಡಿರುವ ಘಟನೆ ನಗರದ ಸಂತೋಷನಗರದಲ್ಲಿ ಸಂಭವಿಸಿದೆ.
ಸಂತೋಷನಗರದ ನಿವಾಸಿ ಶಬಾನಾ ಕೋಂ ನೂರುಲ್ಲಾ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಅಡುಗೆ ಮಾಡುವಾಗ ಸೀಮೆಎಣ್ಣೆ ಸ್ಟವ್ ಸಿಡಿದು ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಶಬಾನಾ ದೂರು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ನಗರಪೋಲಿಸ್ಠಾಣೆಯ ಪಿಎಸ್ಐ ನವೀನ್ ತಿಳಿಸಿದ್ದಾರೆ.