ಶಿಡ್ಲಘಟ್ಟ: ಮನೆಗೆ ನುಗ್ಗಿದ ಚೋರರು-ನಗನಾಣ್ಯ ದರೋಡೆ

Source: tamim | By Arshad Koppa | Published on 21st January 2017, 9:07 AM | State News |

ಶಿಡ್ಲಘಟ್ಟ,ಜನವರಿ20: ಮಧುವೆ ಮನೆಯೊಂದರಲ್ಲಿ ನುಗ್ಗಿದ ಚೋರರು ತಮ್ಮ ಕೈಚಲಕ ನಗನಾಣ್ಯ ದೋಚಿ ಪರಾರಿಯಾಗಿರುವ ಘಟನೆ ನಗರದ ಫಿಲೇಚರ್ ಬಡಾವಣೆಯಲ್ಲಿ ಸಂಭವಿಸಿದೆ.
    ಫಿಲೇಚರ್ ಬಡಾವಣೆಯ ಗುಲ್ಝಾರ್ ಕೋಂ ಅಕ್ರಮ್ ಪಾಷ ಎಂಬುವರ ಮನೆಯೊಳಗೆ ಪ್ರವೇಶ ಮಾಡಿರುವ ಕಳ್ಳರು ಮಗಳ ಮಧುವೆಗಾಗಿ ಸಂಗ್ರಹಿಸಿಟ್ಟಿದ್ದ 2 ಬಂಗಾರ ಉಂಗುರ,2 ಜೊತೆ ಕಿವಿಯೊಲೆ,ಪಾಪಡಿಬೊಟ್ಟು(ಮಾಂಗ್‍ಟೀಲಾ),ವಧುವಿಗಾಗಿ ತಂದಿದ್ದ ಬೆಲೆ ಬಾಳುವ ಬಟ್ಟೆಗಳನ್ನು ದೋಚಿ ಪರಾರಿಯಾಗಿದ್ದಾರೆ ಇದರಿಂದ ಮಧುವೆಗಾಗಿ ಕೇವಲ ವಾರದ ಕಾಲಾವಕಾಶವನ್ನು ಇರುವುದರಿಂದ ವಸ್ತ್ರಾಭ್ರಣಗಳನ್ನು ಕಳೆದುಕೊಂಡಿರುವ ಬಡಕೂಲಿ ಕಾರ್ಮಿಕರ ದಂಪತಿಗಳು ಕಂಗಾಲಾಗಿದ್ದಾರೆ.
    ತನ್ನ ಮಗಳ ಮಧುವೆಗಾಗಿ ಸಂಬಂಧಿಕರಿಗೆ ಆಮಂತ್ರಣಪತ್ರಗಳನ್ನು ಹಂಚಲು ನೆರೆಯ ಹೊಸಕೋಟೆ ತಾಲೂಕಿನ ಕಟಕೇನಹಳ್ಳಿ ತೆರಳಿ ವಾಪಸ್ಸು ಬರುವ ವೇಳೆಯಲ್ಲಿ ಮನೆಯಲ್ಲಿ ಕಳ್ಳತನ ನಡೆದಿದ್ದು ಬಡದಂಪತಿಗಳು ಎಲ್ಲವನ್ನು ಕಳೆದುಕೊಂಡು ರೋಧಿಸುತ್ತಿದ್ದ ದೃಶ್ಯ ಮನಕರಗುವಂತಿತ್ತು ಘಟನಾ ಸ್ಥಳಕ್ಕೆ ಸಿಪಿಐ ವೆಂಕಟೇಶ್,ನಗರಪೋಲಿಸ್‍ಠಾಣೆಯ ಪಿಎಸ್‍ಐ ನವೀನ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
    ರೇಷ್ಮೆ ಕೂಲಿಕೆಲಸವನ್ನು ಮಾಡಿ ಜೀವನದಲ್ಲಿ ಸಂಪಾದನೆ ಮಾಡಿದ್ದ ಹಣದಲ್ಲಿ ಮಗಳ ಮಧುವೆಗಾಗಿ ತಂದಿದ್ದ ಚಿನ್ನಾಭರಣ ಮತ್ತು ಬಹುಬೆಲೆ ಬಾಳುವ ವಸ್ತುಗಳ ಕಳ್ಳತನವಾಗಿದ್ದು ಬಡದಂಪತಿಗಳು ಕೆಂಗಟ್ಟಿದ್ದಾರೆ ಮಧುವೆ ಮನೆಯಲ್ಲಿ ಚಿನ್ನಾಭರಣ ಇರಬೇಕೆಂದು ಯೋಜನೆ ರೂಪಿಸಿ ವಿಚಾರ ತಿಳಿದಿರುವರೇ ಕಳ್ಳತನ ಮಾಡಿರಬಹುದೆಂದು ಶಂಕಿಸಲಾಗಿದ್ದು ಪೋಲಿಸರ ತನಿಖೆಯಿಂದ ಸತ್ಯಾಂಶ ಹೊರಬೀಳಬೇಕಾಗಿದೆ.

 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...