ಶಿಡ್ಲಘಟ್ಟ: ಸೊಳ್ಳೆಗಳಿಗೆ ಆಶ್ರಯತಾಣವಾಗಿರುವ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಚರಂಡಿ

Source: tamim | By Arshad Koppa | Published on 6th December 2016, 8:22 AM | Incidents |

ಶಿಡ್ಲಘಟ್ಟ ನಗರಕ್ಕೆ ಬರುವ ಪ್ರವಾಸಿಗರು ಸಾಮಾನ್ಯವಾಗಿ ತಂಗುವ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಚರಂಡಿ ತುಂಬಿತುಳಕಾಡುತ್ತಿದ್ದು ಸೊಳ್ಳೆಗಳಿಗೆ ಆಶ್ರಯತಾಣವಾಗಿ ಪರಿವರ್ತನೆಗೊಂಡಿದೆ.
    
1ನೇ ಕಾರ್ಮಿಕ ನಗರ ಸೇರಿದಂತೆ ತಾಲೂಕು ಕಛೇರಿಯ ಪ್ರದೇಶದ ಸುತ್ತಮುತ್ತಲಿನ ಬೀದಿ ಬಡಾವಣೆಗಳ ಕೊಳಚೆನೀರು ಈ ಚರಂಡಿಯ ಮೂಲಕ ಹರಿಯುವುದು ಸರ್ವೇಸಾಮಾನ್ಯ ಆದರೇ ಚರಂಡಿಯಲ್ಲಿ ತ್ಯಾಜ್ಯ ಮತ್ತು ಕಸಕಡ್ಡಿಗಳು ತುಂಬಿ ಹೋಗಿದ್ದು ಮಳೆ ಬಂದರೆ ನೀರು ಸರಾಗವಾಗಿ ಹರಿಯದೆ ತಗ್ಗುಪ್ರದೇಶಗಳಲ್ಲಿ ನುಗ್ಗುವ ಭೀತಿ ತಲೆದೂರಿದೆ.
    ಈಗಾಗಲೇ ಬಹುತೇಕ ಚರಂಡಿಯಲ್ಲಿ ತ್ಯಾಜ್ಯ ತುಂಬಿದ್ದರಿಂದ ಯಾರಾದರೂ ಆಯಾ ತಪ್ಪಿಬೀಳಿದರೆ ಚರಂಡಿಯಲ್ಲಿ ಮುಳುಗುವ ಅಪಾಯ ತಲೆದೂರಿದೆ ಚರಂಡಿಯ ಬದಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳು ಹಾಗೂ ತಾಲೂಕು ಕಛೇರಿಗೆ ಬರುವ ನಾಗರಿಕರು ಶೌಚ ವಿಸರ್ಜನೆಗೆಂದು ಚರಂಡಿಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದರಿಂದ ಪ್ರವಾಸಿಮಂದಿರಕ್ಕೆ ಬರುವ ಪ್ರವಾಸಿಗರಿಗೆ ದುರ್ವಾಸನೆಯಿಂದ ಸ್ವಾಗತಿಸುವ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
    ನಗರಸಭೆಯ ಅಧಿಕಾರಿಗಳು ಇತ್ತಗಮನ ಹರಿಸಿ ತುಂಬಿತುಳಕಾಡುತ್ತಿರುವ ಚರಂಡಿಯನ್ನು ಸ್ವಚ್ಛಗೊಳಿಸಿ ದುರ್ವಾಸನೆಯಿಂದ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ.


                                                       ನೊಂದು ನಾಗರಿಕರು ಶಿಡ್ಲಘಟ್ಟ

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...