ಶಿಡ್ಲಘಟ್ಟ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಕೆರೆಗಳಿಗೆ ಮುಂದಿನ ಐದು ವರ್ಷದಲ್ಲಿ ನೀರು-ಮುನಿಯಪ್ಪ

Source: tamim | By Arshad Koppa | Published on 18th September 2017, 8:07 AM | State News |

ಶಿಡ್ಲಘಟ್ಟ,ಸೆಪ್ಟೆಂಬರ್17: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಕೆರೆಗಳಿಗೆ ಮುಂದಿನ ಐದು ವರ್ಷದ ಅವಧಿಯೊಳಗೆ ನೀರು ಹರಿಸುವ ಯೋಜನೆಯನ್ನು ಹಂತ-ಹಂತವಾಗಿ ಅನುಷ್ಠಾನಗೊಳಿಸಲು ಸರಕಾರ ಬದ್ದವಾಗಿದೆ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿದರು.
    ನಗರದ ಡಾಲ್ಪಿನ್ ಶಾಲೆಯ ಆವರಣದಲ್ಲಿ ಸುಧ್ಧಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ನದಿನಾಲೆಗಳಿಲ್ಲದ ಅವಿಭಜಿತ ಕೋಲಾರ ಜಿಲ್ಲೆಯ ಮೂರುವರೆ ಸಾವಿರ ಕೆರೆಗಳಿಗೆ ನೀರು ಹರಿಸುವ ಮೂಲಕ ಗತವೈಭವನ್ನು ಮರುಕಳಿಸುವುದೇ ಸರಕಾರದ ಮುಖ್ಯ ಗುರಿಯೆಂದರು.
    ಬೆಂಗಳೂರಿನ ಹೆಬ್ಬಾಳ ಮತ್ತು ನಾಗವಾರ ಕೆರೆಗಳಲ್ಲಿ ಶೇಖರಣೆಯಾಗಿರುವ ನೀರನ್ನು ಸಂಸ್ಕøರಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಹರಿಸುವ ಒಂದು ಸಾವಿರ ಕೋಟಿ ರೂಗಳ ಯೋಜನೆಗೆ ಸೋಮವಾರದಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದು ಮುಂದಿನ ಒಂದೂವರೆ ವರ್ಷದಲ್ಲಿ ಈ ಭಾಗದ ಕೆರೆಗಳಿಗೆ ನೀರು ಹರಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದೆಂದರು.
    ನಾಗವಾರ ಮತ್ತು ಹೆಬ್ಬಾಳ ಕೆರೆಗಳ ನೀರು ಸಂಸ್ಕøರಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸಲು ಕೆಲವರು ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ ಜಿಲ್ಲೆಯ ಜನರ ಆರೋಗ್ಯದ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮ ಬೀರುವುದಿಲ್ಲವೆಂದು ಸ್ಪಷ್ಟಪಡಿಸಿದ ಅವರು ಈಗಾಲೇ ವರ್ತೂರು ಪ್ರದೇಶಗಳಲ್ಲಿ ಕೆರೆಗಳ ನೀರು ಸಂಸ್ಕøರಿಸಿ ಬಳಸುತ್ತಿದ್ದು ಯಾರಿಗೆ ಸಹ ಆರೋಗ್ಯದ ಸಮಸ್ಯೆ ಎದುರಾಗಿಲ್ಲ ಅವಿಭಜಿತ ಕೋಲಾರ ಜಿಲ್ಲೆಗಳ ಜನಪ್ರತಿನಿಧಿಗಳ ಪಕ್ಷಾತೀತ ಸಹಕಾರದಿಂದ ಕೋಲಾರ ಜಿಲ್ಲೆಗೆ ಕೆಸಿ ವ್ಯಾಲಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಬ್ಬಾಳ-ನಾಗವಾರ ಕೆರೆಗಳ ನೀರು ಹರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಜತೆಗೆ ಎತ್ತಿನಹೊಳೆ ಯೋಜನೆ ಕಾಮಗಾರಿ ಸಹ ಪ್ರಗತಿಯಲ್ಲಿರುವುದರಿಂದ ಮುಂದಿನ ಐದು ವರ್ಷದ ಅವಧಿಯೊಳಗೆ ಎಲ್ಲಾ ಕೆರೆಗಳಿಗೆ ನೀರು ಹರಿಸಿ ತರಕಾರಿ ಉತ್ಪಾದನೆಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಲು ರೈತರಿಗೆ ಅನುಕೂಲ ಕಲ್ಪಿಸಲಾಗುವುದೆಂದರು.
    ಮಾಜಿ ಸಚಿವ ವಿ.ಮುನಿಯಪ್ಪಗೆ ಟಿಕೇಟ್: ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಹಿರಿಯ ಕಾಂಗ್ರೇಸ್ ಮುಖಂಡ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪನವರಿಗೆ ಟಿಕೇಟ್ ನೀಡಿ ನಾವೆಲ್ಲರು ಅವರ ಗೆಲುವಿಗೆ ಶ್ರಮಿಸುತ್ತೇವೆ ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಹಾಗೆಯೇ ಮಾಜಿ ಸಚಿವ ವಿ.ಮುನಿಯಪ್ಪನವರಿಗೆ  ಈ ಕ್ಷೇತ್ರದಲ್ಲಿ ಟಿಕೇಟ್ ನೀಡಿ ಪುನಃ ಶಾಸಕರಾಗಿ ಮಾಡುವುದೇ ತಮ್ಮ ಮುಖ್ಯ ಗುರಿ ಈ ವಿಚಾರದಲ್ಲಿ ಯಾರಾದರೂ ಗೊಂದಲ ಸೃಷ್ಠಿಸಿದರೆ ಅದನ್ನು ನಂಬಬಾರದೆಂದು ಮನವಿ ಮಾಡಿದರು.
     ಸಂಸದರಾಗಿರುವ ತಮ್ಮ ಮನೆಗೆ ಬಿಜೆಪಿ,ಜೆ.ಡಿಎಸ್ ಮತ್ತು ಸಮಾಜಸೇವಕರು ಬರ್ತಾರೇ ಅಂದ ಮಾತ್ರಕ್ಕೆ ನಾನು ಅವರನ್ನು ಬೆಂಬಲಿಸುತ್ತೇನೆ ಎಂಬ ಅರ್ಥದಲ್ಲಿ ಪ್ರಚಾರ ಮಾಡುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಸರಿಯಲ್ಲ ಎಂದ ಸಂಸದರು ನಾನು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪನಾಗಲಿ ಅಥವಾ ಇನ್ನೂ ಯಾರಿಗೂ  ಟಿಕೇಟ್ ಕೊಡಿಸುತ್ತೇನೆ ಎಂದು ಹೇಳಿಲ್ಲ ಅದು ಸತ್ಯಕ್ಕೆ ದೂರವಾದ ಮಾತು ಕಾಂಗ್ರೇಸ್ ಕಾರ್ಯಕರ್ತರು ಯಾವುದೇ ರೀತಿಯ ಗೊಂದಲದಲ್ಲಿ ಸಿಲುಕಬಾರದೆಂದು ಸ್ಪಷ್ಟಪಡಿಸಿದರು.
    ಸುದ್ದಿಗೋಷ್ಠಿಯಲ್ಲಿ ಕೋಲಾರ ಜಿಲ್ಲಾ ಕಾಂಗ್ರೇಸ್ ಸಮಿತಿಯ ಕೋಶಾಧ್ಯಕ್ಷ ಕೆ.ವಿ.ರಾಮಪ್ರಸಾದ್,ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಪಂ ಸದಸ್ಯ ಸತೀಶ್,ರಾಜ್ಯ ಆಹಾರ ನಿಗಮದ ನಿರ್ದೇಶಕ ಎ.ನಾಗರಾಜ್, ಹಾಪ್‍ಕಾಮ್ಸ್ ಅಧ್ಯಕ್ಷ ಮುತ್ತೂರು ಚಂದ್ರೇಗೌಡ,ಮಾಜಿ ಅಧ್ಯಕ್ಷ ಮುನೇಗೌಡ,ಎಪಿಎಂಸಿ ನಿರ್ದೇಶಕ ಮೇಲೂರು ಮುರಳಿ,ದೊಗರನಾಯಕನಹಳ್ಳಿ ವೆಂಕಟೇಶ್,ಜಿಪಂ ಮಾಜಿ ಸದಸ್ಯ ಎಸ್,ಎಂ.ನಾರಾಯಣಸ್ವಾಮಿ,ಶ್ರೀರಾಮರೆಡ್ಡಿ,ಪಿಎಲ್‍ಡಿ ಬ್ಯಾಂಕಿನ ನಿರ್ದೇಶಕ ಮೇಲೂರು ಮಯೂರ್,ಶಂಕರ್,ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣರೆಡ್ಡಿ,ಆಶ್ರಯ ಸಮಿತಿ ಸದಸ್ಯ ಫಿದಾಹುಸೇನ್,ಸಾಧಿಕ್‍ಪಾಷ,ಸನಾಉಲ್ಲಾ,ಇಮ್ತಿಯಾಝ್,ರಾಜಕುಮಾರ್,ಶ್ರೀನಾಥ್ ಮತ್ತಿತರರು ಉಪಸ್ಥಿತರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!