ಶಿಡ್ಲಘಟ್ಟ: ನಗರೋತ್ಥಾನ ಯೋಜನೆಯಡಿ 25 ಕೋಟಿ ವೆಚ್ಚದಲ್ಲಿ ಶಿಡ್ಲಘಟ್ಟ ನಗರದ ಅಭಿವೃಧ್ಧಿ :  ಬಿ.ಅಫ್ಸರ್ ಪಾಷ  

Source: tamim | By Arshad Koppa | Published on 20th February 2017, 7:57 AM | State News |

ಶಿಡ್ಲಘಟ್ಟ,ಫೆಬ್ರವರಿ18: ನಗರಸಭೆಯ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ವೃಧ್ಧಿಗೊಳಿಸಲು ಸರಕಾರದಿಂದ ನಗರೋತ್ಥಾನ ಯೋಜನೆಯಡಿ ಮಂಜೂರಾದ 25 ಕೋಟಿ ರೂಗಳ ಅನುದಾನದ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
    ನಗರಸಭೆಯ ಅಧ್ಯಕ್ಷ ಬಿ.ಅಫ್ಸರ್ ಪಾಷನವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡು ನಗರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡಿ ಮೂಲಭೂತ ಸೌಲಭ್ಯಗಳನ್ನು ವೃಧ್ಧಿಸಿಕೊಳ್ಳಲು ನಗರಸಭಾ ಸದಸ್ಯರು ತಲಾ 20 ಲಕ್ಷ ರೂಗಳ ಕಾಮಗಾರಿಗಳ ಪಟ್ಟಿಯನ್ನು ಸೋಮವಾರದೊಳಗೆ ನೀಡಲು ಸಹಮತ ವ್ಯಕ್ತಪಡಿಸಿದರು.
    ಶಾಸಕ ಎಂ.ರಾಜಣ್ಣ ಮಾತನಾಡಿದ ಬೇಸಿಗೆ ಬರುವ ಮುನ್ನವೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಾಗಿದೆ ಕೊಳವೆಬಾವಿಗಳಲ್ಲಿ ದಿನೇ ದಿನೇ ನೀರು ಬತ್ತಿಹೋಗುತ್ತಿದ್ದು ಸಮಸ್ಯೆ ಗಂಭೀರತೆ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕೆಂದು ಸೂಚಿಸಿ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡುವ ಜತೆಗೆ ಸಾರ್ವಜನಿಕ ವ್ಯವಹಾರವನ್ನು ಶಿಸ್ತುಬದ್ದವಾಗಿ ನಡೆಸಬೇಕೆಂದು ತಾಕೀತು ಮಾಡಿದರು.
    ಕೆರೆಯಂಗಳದಲ್ಲಿನ ಜಾಲಿ ಮರಗಳು ಕಡಿತಗೊಳಿಸಿ: ನಗರಸಭೆಯ ಸದಸ್ಯ ರಾಘವೇಂದ್ರ ಮಾತನಾಡಿ ಶಿಡ್ಲಘಟ್ಟ ನಗರ ಸೇರಿದಂತೆ ತಾಲೂಕಿನಾದ್ಯಂತ ಅಂತರ್ಜಲಮಟ್ಟ ಕುಸಿದು ಫ್ಲೋರೈಡ್ ಮಿಶ್ರಿತ ನೀರು ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆಂದು ಕೆರೆಯಲ್ಲಿ ಸಮೃಧ್ಧವಾಗಿ ಜಾಲಿ ಮರಗಳು ಬೆಳೆದಿದ್ದರಿಂದ ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗಿದ್ದು ಕೂಡಲೇ ಮರಗಳನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರಲ್ಲದೇ ಸಾರ್ವಜನಿಕರಿಂದ ಟಪಾಲ್‍ಗಳ ಮೂಲಕ ಅರ್ಜಿಗಳನ್ನು ಸ್ವೀಕರಿಸಿ ನಗರಸಭೆಯ ಎಲ್ಲಾ ಸದಸ್ಯರಿಗೆ ಮಾಹಿತಿಯನ್ನು ರವಾನಿಸುವ ಅಧುನಿಕ ವ್ಯವಸ್ಥೆಯನ್ನು ಜಾರಿಗೊಳಿಸಿ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಬೇಕೆಂದು ಮನವಿ ಮಾಡಿ ನಗರಸಭೆಯ ಮೂಲಕ ನಿಗಧಿಪಡಿಸಿದ ಎಸ್.ಆರ್.ರೇಟ್ ಹೊರತುಪಡಿಸಿ ಕಡಿಮೆ ದರಕ್ಕೆ ಟೆಂಡರ್ ಹಾಕಿದರೆ ಗುಣಮಟ್ಟದ ಕಾಮಗಾರಿ ನಡೆಯಲು ಸಾಧ್ಯವಿಲ್ಲ 10% ಮೈನಸ್‍ಗೆ ಟೆಂಡರ್ ಹಾಕಿದರೆ ಗುತ್ತಿಗೆದಾರರಿಗೆ ಗುತ್ತಿಗೆ ನೀಡಬಾರದೆಂದು ಒತ್ತಾಯಿಸಿದರು. 
    ಶಾಸಕ ರಾಜಣ್ಣ ಮಾತನಾಡಿ ಕೆರೆಯಲ್ಲಿನ ಜಾಲಿಮರಗಳನ್ನು ಕಡಿತಗೊಳಿಸಲು ಈಗಾಗಲೇ ಅನೇಕ ಸದಸ್ಯರು ಜಿಲ್ಲಾದ್ಯಂತ ಧ್ವನಿಗೂಡಿಸಿದ್ದಾರೆ ಶೀಘ್ರದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಜಾಲಿಮರಗಳನ್ನು ಕಡಿತಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿ ನಗರಸಭೆಯ ವ್ಯಾಪ್ತಿಯಲ್ಲಿ ಗುಣಮಟ್ಟದ ಕಾಮಗಾರಿಗಳನ್ನು ನಡೆಸಲು ಸ್ವತಃ ಸದಸ್ಯರು ಮತ್ತು ನಾಗರಿಕರು ಗಮನಹರಿಸಬೇಕೆಂದರು.
    ಕಸವಿಲೇವಾರಿ-ಕುಡಿಯುವ ನೀರು ಕೊಡುವುದು ಸಾಧನೆ ಅಲ್ಲ: ಪುರಸಭೆಯಿಂದ ನಗರಸಭೆಯಾಗಿ ಮೇಲ್ದಜೇಗೇರಿಸಲಾಗಿದೆ ಆದರೇ ನಗರಸಭೆಯಿಂದ ಪರಿಣಾಮಕಾರಿಯಾಗಿ ಕೆಲಸಗಳನ್ನು ಆಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ನಗರಸಭೆಯಲ್ಲಿ ಪೂರಕವಾಗಿ ಸಿಬ್ಬಂದಿ ಮತ್ತು ಅಧಿಕಾರಿಗಳಿದ್ದರು ಸಹ ತೆರೆಗೆ ಸಂಗ್ರಹ ತೃಪ್ತಿದಾಯಕವಿಲ್ಲ ನಗರಸಭೆಯಲ್ಲಿ ವ್ಯಾಪ್ತಿಯಲ್ಲಿ ಕೇವಲ ಕಸವಿಲೇವಾರಿ ಮಾಡಿ ಕುಡಿಯುವ ನೀರು ಕೊಟ್ಟಿದ್ದ ಮಾತ್ರಕ್ಕೆ ಸಾಧನೆ ಅಲ್ಲವೆಂದು ಕಿಡಿಕಾರಿದ ಶಾಸಕರು ಮೊದಲು ನಗರಸಭೆಯಲ್ಲಿ ಶಿಸ್ತುಬದ್ದ ವ್ಯವಸ್ಥೆಯನ್ನು ಜಾರಿಗೊಳಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಸೂಚನೆ ನೀಡಿ ಜನರ ವಿಶ್ವಾಸವನ್ನು ವೃಧ್ಧಿಸಿಕೊಳ್ಳುವ ಕೆಲಸವನ್ನು ಮಾಡಬೇಕೆಂದರು.
    ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಧ್ಧ ನೀರಿಲ್ಲ: ನಗರ ಸೇರಿದಂತೆ ತಾಲೂಕಿನಾದ್ಯಂತ ಸಾರ್ವಜನಿಕ ಆಸ್ಪತ್ರೆಗೆ ಬರುವ ನಾಗರಿಕರು ಮತ್ತು ರೋಗಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ ಆಸ್ಪತ್ರೆಗೆ ಬರುವ ಜನರು ನಗರಸಭೆಯ ಚುನಾಯಿತ ಪ್ರತಿನಿಧಿಗಳ ಕಾರ್ಯವೈಖರಿಯನ್ನು ಟೀಕಿಸುವ ಸ್ಥಿತಿ ನಿರ್ಮಾಣವಾಗಿದೆ ಕೂಡಲೇ ನಗರಸಭೆಯಿಂದ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ನಗರಸಭೆಯ ಸದಸ್ಯ ಬಾಲಕೃಷ್ಣ ಮನವಿ ಮಾಡಿದರು 
    ನಗರಸಭಾ ಸದಸ್ಯರ ನಡುವೆ ವಾಗ್ವಾದ: ನಗರಸಭೆಯಲ್ಲಿ ವಿಷಯಗಳನ್ನು ಮಂಡಿಸಿ ಪರಿಹಾರ ಕಂಡುಕೊಳ್ಳುವ ವಿಚಾರದಲ್ಲಿ ಜೆ.ಡಿ.ಎಸ್ ಪಕ್ಷದ ಶಫೀ ಹಾಗೂ ಬಿಜೆಪಿಯ ರಾಘವೇಂದ್ರ ನಡುವೆ ವಾಗ್ವಾದ ನಡೆಯಿತು ಪದೇ ಪದೇ ವಿಷಯ ಮಂಡನೆ ಮಾಡಿ ಸಭೆಯಲ್ಲಿ ಕಾಲಹರಣ ಮಾಡುವುದು ಬೇಡ ನಗರಸಭೆಯಲ್ಲಿ ಯಾವುದೇ ರೀತಿಯ ಕೆಲಸಗಳನ್ನು ನಡೆಯುತ್ತಿಲ್ಲ ನಾಮಕಾವಾಸ್ತೆಯಲ್ಲಿ ಸಭೆಯಲ್ಲಿ ಭಾಗವಹಿಸಿ ತಿಂಡಿ-ಚಹಾ ಸೇವಿಸಿ ಮನೆಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಲ್ಲಡೆ ಕಸದ ರಾಶಿಗಳು ರಾರಾಜಿಸುತ್ತಿದೆ ನೈರ್ಮಲ್ಯ ಹದಗೆಟ್ಟಿದ್ದು ಅಧಿಕಾರಿಗಳು ಬೇಸಿಗೆ ಬರುವ ಮುನ್ನವೇ ಸಾಮೂಹಿಕವಾಗಿ ಸ್ವಚ್ಛತಾ ಕೆಲಸವನ್ನು ನಿರ್ವಹಿಸಬೇಕೆಂದು ಸದಸ್ಯ ಶಫೀ ಒತ್ತಾಯಿಸಿದರು.
    ಸಭೆಯಲ್ಲಿ ನಗರಸಭೆಯ ಉಪಾಧ್ಯಕ್ಷ ಪ್ರಭಾವತಿ ಸುರೇಶ್,ನಗರಸಭೆಯ ಆಯುಕ್ತ ಹೆಚ್.ವಿ.ಹರೀಶ್ ಹಾಗೂ ನಗರಸಭೆಯ ಅಧಿಕಾರಿಗಳು-ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...