ಶಿಡ್ಲಘಟ್ಟ:ಜಲಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜ್ ವಜಾ ವಿರೋಧಿಸಿ ಮನವಿ ಸಲ್ಲಿಕೆ

Source: tamim | By Arshad Koppa | Published on 14th November 2017, 8:36 AM | State News |

ಶಿಡ್ಲಘಟ್ಟ,ನವೆಂಬರ್13: ತಾಲೂಕಿನ ಆನೂರು ಗ್ರಾಮ ಪಂಚಾಯಿತಿಯಲ್ಲಿ ಜಲಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜ್ ಅವರನ್ನು ಕೆಲಸದಿಂದ ತೆಗೆದಿರುವ ಪಿಡಿಓ ಅವರ ಕಾರ್ಯವೈಖರಿಯನ್ನು ವಿರೋಧಿಸಿ ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ತಾಪಂ ಇಓವೆ ಮನವಿ ಸಲ್ಲಿಸಿದ್ದಾರೆ.
    ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಸುದರ್ಶನ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮ ಪಂಚಾಯಿತಿ ನೌಕರರು ಮೆರವಣಿಗೆಯಲ್ಲಿ ತಾಪಂ ಕಛೇರಿಗೆ ಬಂದು ಇಓಗೆ ಮನವಿ ಸಲ್ಲಿಸಿ ಕಳೆದ 10 ವರ್ಷಗಳಿಂದ ಜಲಗಾರನಾಗಿ ಸೇವೆ ಸಲ್ಲಿಸುತ್ತಿರುವ ನಾಗರಾಜ್ ಅವರನ್ನು ಸೇವೆಯಿಂದ ತೆಗೆದಿರುವ ಗ್ರಾಮ ಪಂಚಾಯಿತಿ ಪಿಡಿಓ ಅವರ ಮೇಲೆ ಕ್ರಮ ಜರುಗಿಸಿ ಜಲಗಾರನ ಹುದ್ದೆಯಲ್ಲಿ ನಾಗರಾಜ್ ಅವರನ್ನು ಮುಂದುವರೆಸಬೇಕು ಜೊತೆಗೆ ಸರಕಾರದ ಸುತ್ತೀಲೆ ಮತ್ತು ಆದೇಶದಂತೆ ಗ್ರಾಮ ಪಂಚಾಯಿತಿಯ ನೌಕರರ ಬೇಡಿಕೆಗಳನ್ನು ವಾರದೊಳಗೆ ಈಡೇರಿಸಿದಿದ್ದ ಪಕ್ಷದಲ್ಲಿ ತಾಪಂಗೆ ಬೀಗ ಜಡಿದು ಅನಿರ್ಧಿಷ್ಠವಧಿ ಧರಣಿ ಸತ್ಯಗ್ರಹವನ್ನು ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
    ಪ್ರತಿಭಟನೆಯಲ್ಲಿ ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯಿತಿ ನೌಕರರ ಸಂಘದ ಸಂಘದ ಕಾರ್ಯದರ್ಶಿ ಸುಭ್ರಮಣಿ,ಖಜಾಂಚಿ ಮೇಲೂರು ಜನಾರ್ಧನ್,ಜಿಲ್ಲಾ ಸಿಪಿಐಎಂ ಮುಖಂಡ ಸದಾನಂದ,ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳಾದ ತಾತಹಳ್ಳಿ ನಾರಾಯಣಪ್ಪ,ರಮೇಶ್,ವೈ.ಹುಣಸೇನಹಳ್ಳಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
    ಈ ಕುರಿತು ಗ್ರಾಮ ಪಂಚಾಯಿತಿಯ ಪಿಡಿಓ ಅರುಣಕುಮಾರಿ ಅವರನ್ನು ಸಂಪರ್ಕಿಸಿದಾಗ ಗ್ರಾಮ ಪಂಚಾಯಿತಿಯ ನೌಕರರನ್ನು ಸೇವೆಯಿಂದ ವಜಾಗೊಳಿಸುವ ಅಧಿಕಾರ ತಮಗಿಲ್ಲ ಕುಡಿಯುವ ನೀರು ಪೂರೈಕೆ ಮಾಡುವ ವಿಚಾರದಲ್ಲಿ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಸಭೆಯಲ್ಲಿ ಜಲಗಾರ ನಾಗರಾಜ್ ಅವರನ್ನು ಕೆಲಸದಿಂದ ತೆಗೆದು ಹೆಚ್ಚುವರಿಯಾಗಿ ಮತ್ತೊಬ್ಬರನ್ನು ಸೇವೆಗೆ ನಯೋಜಿಸಬೇಕೆಂದು ಕೈಗೊಂಡ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ ಕುಡಿಯುವ ನೀರು ಪೂರೈಕೆ ಹೊರತುಪಡಿಸಿ ಇನ್ನೂ ಯಾವುದೇ ಕೆಲಸವನ್ನು ನಿರ್ವಹಿಸುವುದಿಲ್ಲವೆಂದು ಸಭೆಯಲ್ಲಿ ಹೇಳಿದ್ದರಿಂದ ಸಾರ್ವಜನಿಕರ ದೂರುಗಳನ್ನು ಪರಿಗಣಿಸಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದರು.

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...