ಶಿಡ್ಲಘಟ್ಟ:ಜಿಎಸ್‍ಟಿಯಿಂದ ರೇಷ್ಮೆ ಬೆಳೆಗಾರರು,ನೂಲು ಬಿಚ್ಚಾಣ ಕೆದಾರರು ಆತಂಕ ಪಡೆಯುವ ಅಗತ್ಯವಿಲ್ಲ-ಡಿ ರುದ್ರಣ್ಣ ಗೌಡ 

Source: tamim | By Arshad Koppa | Published on 24th August 2017, 8:24 PM | State News | Guest Editorial |

ಶಿಡ್ಲಘಟ್ಟ,ಆಗಸ್ಟ್24: ಕೇಂದ್ರ ಸರಕಾರ ಜಾರಿಗೊಳಿಸಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ)ಯಿಂದ ರೇಷ್ಮೆ ಬೆಳೆಗಾರರು,ನೂಲು ಬಿಚ್ಚಾಣ ಕೆದಾರರು ಆತಂಕ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ-ಡಿ ರುದ್ರಣ್ಣ ಗೌಡ ಹೇಳಿದರು.


ನಗರದ ಸರಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಆವರಣದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗೂಡಿನ ನಂತರ ಚಟುವಟಿಕೆಯಲ್ಲಿ ತೊಡಗಿರುವ ವ್ಯಾಪಾರಸ್ಥರಿಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಿಎಸ್‍ಟಿ ಜಾರಿಯಿಂದ ರೇಷ್ಮೆ ಬೆಳೆಗಾರರು ಮತ್ತು ರೀಲರ್ಸ್‍ಗಳು ಯಾವುದೇ ರೀತಿಯ ಆತಂಕ ಪಡೆಯುವ ಅಗತ್ಯವಿಲ್ಲ ಎಂದರು
ನೂಲಿಂದ ಬಟ್ಟೆ ತಯಾರು ಮಾಡುವ ನೇಕಾರರು,ಹುರಿಕಾರರು ಶೇಕಡ 5% ಮಾತ್ರ ತೆರಿಗೆ ವಿಧಿಸುತ್ತಿದ್ದು ಇನ್ನೂಳಿದ ಯಾವುದೇ ರೀತಿಯ ಸೇವಾ ತೆರಿಗೆಯನ್ನು ವಿಧಿಸುವುದಿಲ್ಲ ಎಂದು ಮಾಹಿತಿ ನೀಡಿದ ಅವರು 20 ಲಕ್ಷ ಒಳಗೆ ವಹಿವಾಟು ನಡೆಸುವವರಿಗೆ ಜಿಎಸ್‍ಟಿ ಅನ್ವಯಿಸುವುದಿಲ್ಲ ನೊಂದಣ  ಮಾಡಿಸುವ ಅವಶ್ಯಕತೆ ಇಲ್ಲವೆಂದರು.
ಇದೇ ಸಂದರ್ಭದಲ್ಲಿ ಜಿಎಸ್‍ಟಿಗೆ ಸಂಬಂಧಿಸಿದಂತೆ ಮೂಡಿದ್ದ ಕೆಲವು ಗೊಂದಲಗಳನ್ನು ಪ್ರಸ್ತಾಪಿಸುವ ಮೂಲಕ ಇತ್ಯರ್ಥಪಡಿಸಲಾಯಿತು ಜಿಎಸ್‍ಟಿ ಎಂದರೇನು? ಇದರ ವ್ಯಾಪ್ತಿಗೆ ಯಾರು ಬರ್ತಾರೇ,ಯಾವ ವಿಚಾರಕ್ಕೆ ಸಂಬಂಧಿಸಿದಂತೆ ತೆರಿಗೆಯನ್ನು ವಿಧಿಸಲಾಗುತ್ತದೆ ಎಂಬುದರ ಕುರಿತು ಸುದೀರ್ಘವಾಗಿ ಸಂವಾದದ ಮೂಲಕ ಅರಿವು ಮೂಡಿಸಿ ಮಾಹಿತಿ ನೀಡಲಾಯಿತು.
ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ -ಡಿ ಡಾ.ನಾಗರಾಜ್, ವಿಜ್ಞಾನಿ-ಡಿ ಕೆ.ಎನ್.ಮಹೇಶ್, ಸಹಾಯಕ ನಿರ್ದೇಶಕ ಭಾನುಪ್ರಕಾಶ್,ರೇಷ್ಮೆ ತಾಂತ್ರಿಕ ಸೇವಾ ಕೇಂದ್ರ (ರೀಲಿಂಗ್) ವಿಭಾಗದ ಸಹಾಯಕ ನಿರ್ದೇಶಕ ನರಸಿಂಹಮೂರ್ತಿ,ರಾಮಕುಮಾರ್,ರೀಲರ್ಸ್ ವೆಲ್ಫೇರ್ ಅಸೋಸಿಯೇಷನ್ ಗೌರವಾಧ್ಯಕ್ಷ ರಾಮಕೃಷ್ಣಪ್ಪ, ಅಧ್ಯಕ್ಷ ಅನ್ಸರ್‍ಖಾನ್,ಕಾರ್ಯದರ್ಶಿ ಆನಂದ್,ಬಾಬಾಜಾನ,ಮೊಹ್ಮದ್ ಅನ್ವರ್,ಜಿ.ರೆಹಮಾನ್, ಅಕ್ಮಲ್‍ಪಾಷ, ನೇಕಾರರ ಸಂಘದ ಬಳೇ ಜಗದೀಶ್, ಸುಭ್ರಮಣ , ಮತ್ತಿತರರು ಉಪಸ್ಥಿತರಿದ್ದರು.

ಶಿಡ್ಲಘಟ್ಟದ ಸರಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಭಾಗವಹಿಸಿರುವ ರೇಷ್ಮೆ ವ್ಯಾಪಾರಿಗಳು.

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...