ಸಾಹಿತ್ಯದ ಮೂಲಕ ಸೌಹಾರ್ದತೆಯ ‘ಶಾಮಿಯಾನ’ ಕಟ್ಟಿದ ಷರೀಫ್

Source: sonews | By Staff Correspondent | Published on 21st December 2018, 12:25 AM | Coastal News | State News | Special Report | Don't Miss |

(ಭಟ್ಕಳದ ಅಂಜುಮನ್ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ, ಸಂತ ಕನಕದಾಸ ಅದ್ಯಾಯನ ಪೀಠದ ಸದಸ್ಯರಾಗಿರುವ ‘ಶಾಮಿಯಾನ’ ದ ಕವಿ ಡಾ.ಸೈಯ್ಯದ್ ಝಮಿರುಲ್ಲಾ ಷರೀಫ್ ಡಿ.22, 23 ರಂದು ಯಲ್ಲಾಪುರದಲ್ಲಿ ನಡೆಯಲಿರುವ ಉತ್ತರಕನ್ನಡ ಜಿಲ್ಲಾ 21ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿದ್ದು ತನ್ನಿಮಿತ್ತ ಈ ಲೇಖನ)

ಒಂದೆಡೆ ಕೊಂಕಣಿ ಮತ್ತೊಂದೆಡೆ ನವಾಯತಿ, ಉರ್ದು ಭಾಷೆಗಳ ನಡುವೆ ತನ್ನ ಕಂಪನ್ನು ಕಳೆದುಕೊಂಡಿದ್ದ ಕನ್ನಡ ಸಾಹಿತ್ಯ, ಮತ್ತೇ ತನ್ನ ಕಂಪನ್ನು ಬೀರಲು ಆರಂಭಿಸಿದ್ದು ಡಾ.ಸೈಯ್ಯದ್ ಝಮಿರುಲ್ಲಾ ಷರೀಫ ಭಟ್ಕಳಕ್ಕೆ ಬಂದ ನಂತರವಷ್ಟೆ. ಸಂಸ್ಕೃತಿ ಚಿಂತಕರಾಗಿರುವ ಷರೀಫರು ತಮ್ಮ ಸಾಹಿತ್ಯದ ಮೂಲಕ ಶಾಂತಿ, ಸೌಹಾರ್ದತೆ, ಮಾನವೀಯ ನೆಲೆಗಟ್ಟನ್ನು ಗಟ್ಟಿಗೊಳಿಸಿ ಅಲ್ಲಲ್ಲಿ ಹರಿದು ರಂದ್ರಗಳುಂಟಾದ ಭಟ್ಕಳದ ಸೌಹಾರ್ದತೆಯ ‘ಶಾಮಿಯಾನ’ ವನ್ನು ತಮ್ಮ ಸಾಹಿತ್ಯದ ಮೂಲಕ ಮತ್ತೇ ಗಟ್ಟಿಗೊಳಿಸಿ ಆ ಶಾಮಿಯಾನದಡಿ ಎಲ್ಲರೂ ಸೇರುವಂತೆ ಮಾಡಿದ್ದು ಝಮಿರುಲ್ಲಾ ಷರೀಫರ ಸುಧೀರ್ಘ ಸಾಹಿತ್ಯ ಸೇವೆಯ ಫಲ. 

ಡಾ. ಸಯ್ಯದ ಝಮೀರುಲ್ಲಾ ಷರೀಫ್ ಉತ್ತರ ಕನ್ನಡ ಜಿಲ್ಲ 21ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆಯವರಾದ ಷರೀಫರು ಭಟ್ಕಳವನ್ನು ತಮ್ಮ  ಕರ್ಮಭೂಮಿಯನ್ನಾಗಿ ಮಾಡಿಕೊಂಡು ಭಟ್ಕಳದ ಕನ್ನಡ, ನವಾಯತಿ, ಕೊಂಕಣಿ, ಉರ್ದು ಭಾಷಿಗರಿಗೆ ಕನ್ನಡದ ಸವಿಯನ್ನವನ್ನು ಉಣ ಬಡಿಸಿದವರು. 

ಉಪನ್ಯಾಸಕರಾಗಿ ಭಟ್ಕಳದ ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಷರೀಫ್ ಮುಂದೆ ಅದೇ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ತಮ್ಮ ಸೇವೆ ಸಲ್ಲಿಸಿದರು. ವೃತ್ತಿಯ ಜೊತೆಯಲ್ಲಿ ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡ  ಷರೀಫ್ ಕಾಲೇಜಿನಲ್ಲಿ ಪಾಠಮಾಡುತ್ತಾ ತಮ್ಮ ವಿದ್ಯಾರ್ಥಿಗಳಲ್ಲೂ ಸಾಹಿತ್ಯಾಭಿರುಚಿ ಬೆಳೆಸುತ್ತಾ ಭಟ್ಕಳದಲ್ಲಿ ಸಾಹಿತ್ಯದ ಕಂಪನ್ನು ಹರಡಲು ಕಾರಣರಾದವರು. ಭಟ್ಕಳದವರೆ ಆಗಿ ಈ ನೆಲದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದವರು. ತಮ್ಮ ಸಾರ್ಥಕ ಸಾಹಿತ್ಯ ಸೇವೆಯಿಂದಾಗಿ ಅವರು ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ  ಭಟ್ಕಳದ ನೆಲದಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಪಡೆದ ಮೊದಲಿಗರಾಗಿದ್ದಾರೆ.   
ಈ ಕುರಿತಂತೆ ಅವರು ಸಾಹಿಲ್‍ಅನ್‍ಲೈನ್ ಜಾಲಾತಾಣದೊಂದಿಗೆ ಮನಬಿಚ್ಚಿ ಮಾತನಾಡಿದರು. ತಮ್ಮ ಸಾರ್ಥಕ ಬದುಕಿನ ಕುರಿತಂತೆ ಮೆಲುಕುಹಾಕಿದರು. ಸಾಹಿತ್ಯ ಸಮ್ಮೇಳದನ ಸಾರ್ವಾಧ್ಯಕ್ಷತೆಯ ಗೌರವ ನನಗೆ ಮಾತ್ರ ಸಲ್ಲಿದ್ದಲ್ಲ ಬದಲಾಗಿ ಇಡೀ ಜಿಲ್ಲೆಯ ಹಾಗೂ ಭಟ್ಕಳದ ಸಹೃದಯರಿಗೆ ಸಲ್ಲುವಂತಹದ್ದು ಎಂದರು. ಬೇರೆ ಜಿಲ್ಲೆಯವನು ಎಂಬ ತಾರತಮ್ಯ ಮಾಡದೆ ನನ್ನನ್ನು ಪ್ರೀತಿಯಿಂದ ಅಪ್ಪಿಕೊಂಡ ಉತ್ತರಕನ್ನಡದ ಜನತೆ ನನಗೆ ನೀಡಿದ ಗೌರವಕ್ಕಿಂತ ಅವರು ನನ್ನನ್ನು ತಮ್ಮ ಹೃದಯದಲ್ಲಿ ಜಾಗವನ್ನು ನೀಡಿದ್ದಾರೆ.

ಉರ್ದು ಭಾಷೆ ಮನೆಮಾತಾಗಿದ್ದರೂ ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಿಕೊಂಡರು. ಕನ್ನಡ ಪರಿಸರ, ಮನೆಯ ವಾತವರಣ, ಸ್ನೇಹಿತರ ಬಳಗ ನನ್ನನ್ನು ಕನ್ನಡದ ಕಡೆ ಒಲವು ಮೂಡುವಂತೆ ಮಾಡಿತು ಎನ್ನುತ್ತಾರೆ ಷರೀಪರು. 

ಸಾಹಿತ್ಯದ ಮೂಲಕ ಸೌಹಾರ್ಧತೆಯ ಸೇತುವೆ ಕಟ್ಟುತ್ತಿರುವ ಇವರು ತಮ್ಮ ಶಾಮಿಯಾನ ಕವಿತೆಯ ಮೂಲಕ ಜಾತಿ ಧರ್ಮಗಳ ನಡುವೆ ಸಾಮರಸ್ಯ ಮೂಡಿಸುವಂತ ದರ್ಜಿಗಳು ಬೇಕಾಗಿದ್ದಾರೆ ಎಂದು ಕರೆಕೊಡುವುದರ ಮೂಲಕ ಭಟ್ಕಳದ ಒಡೆದಮನಸುಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ. ತುಂಡು ತುಂಡು  ಬಟ್ಟೆ ಸೇರಿ ಒಂದು ಸುಂದರ ಶಾಮಿಯಾನ ನಿರ್ಮಾಣಗೊಂಡಂತೆ ನಮ್ಮಲ್ಲಿನ ಎಲ್ಲರ ಮನಸ್ಸುಗಳು ಸೇರಿ ಒಂದು ಸೌಹಾರ್ದತೆಯ ನಾಡದೊಂದು ನಿರ್ಮಿಸಬಹುದು ಎಂಬ ಆಶಾಯದೊಂದಿಗೆ ಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳನ್ನು ಬದಿಗಿಟ್ಟು ಈ ತುಂಡುಬಟ್ಟೆಯ ಶಾಮಿಯಾನದೊಳಗೆ ಒಂದಾಗಿ ಬಾಳುವ ಕರೆಯನ್ನು ಅವರು ತಮ್ಮ ‘ಶಾಮಿಯಾನ’ ಕವನದ ಮೂಲಕ ಅರ್ಥಪೂರ್ಣವಾಗಿ ಮನವರಿಕ ಮಾಡಿಕೊಟ್ಟಿದ್ದಾರೆ. 

ಸಾಹಿತಿಗಳು ತಮ್ಮಲ್ಲಿರುವ ವೈರುಧ್ಯಗಳನ್ನು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮಾನವ ಕುಲ ತಾನೊಂದೇ ವಲಂ ಎಂಬ ಪಂಪನ ವಾಣಿಯಂತೆ, ಸಾಹಿತಿ ಮನಸುಗಳನ್ನು ಬೆಸೆಯುವ ಕೆಲಸ ಮಾಡಬೇಕು. ಇಂದಿನ ಸಾಹಿತಿಗಳು ಅದನ್ನೇ ಮಾಡುತ್ತಿದ್ದಾರೆ. ಲೇಖನಿ ಖಡ್ಗಕ್ಕಿಂತ ಹರಿತ. ವ್ಯವಸ್ಥೆಯೂ ಅದಕ್ಕೆ ಪೂರಕವಾಗಿರಬೇಕು ಎಂದು ತಿಳಿಸುತ್ತಾರೆ. 
ಕನ್ನಡ ಸಾಹಿತ್ಯ ಸಮ್ಮೇಳನಗಳ ಕುರಿತಂತೆ ‘ಸಾಹಿತ್ಯ ಸಮ್ಮೇಳನಗಳು ಮನಸುಗಳನ್ನು ಒಂದುಗೂಡಿಸುತ್ತವೆ. ನಾಡು ನುಡಿಯೆಡೆಗಿನ ಅಭಿಮಾನವನ್ನು ಜಾಗೃತವಾಗಿಡುತ್ತದೆ. ಸಮ್ಮೇಳನಕ್ಕೆ ಬಂದವರು ,ಸಾಹಿತಿಗಳನ್ನು ನೋಡುತ್ತಾರೆ. ಸಾಹಿತ್ಯದ ಬಗ್ಗೆ ಕೇಳುತ್ತಾರೆ. ನಾಡು ನುಡಿಯ ಸವಾಲುಗಳ ಕುರಿತು ಚರ್ಚೆಯಾಗುತ್ತದೆ. ನಾಡು ನುಡಿಯ ಸವಾಲುಗಳೇನು ಅದನ್ನು ಬಗೆಹರಿವ ಬಗೆ ಹೇಗೆ  ಮುಂತಾದ ಅನೇಕ ಸಂದೇಶಗಳು ಸಾಹಿತ್ಯ ಸಮ್ಮೇಳನಗಳ ಮೂಲಕ ರವಾನೆಯಾಗುತ್ತದೆ. ಆದ್ದರಿಂದ ಸಾಹಿತ್ಯ ಸಮ್ಮೇಳನಗಳು ಕನ್ನಡವನ್ನು ಕನ್ನಡತನವನ್ನು ಕಾಪಾಡಿಕೊಳ್ಳಲು ಖಂಡಿತವಾಗಿ ನೆರವಾಗುತ್ತವೆ’ ಎನ್ನುತ್ತಾರೆ. 

ಡಾ. ಸಯ್ಯದ್ ಝಮೀರುಲ್ಲಾ ಷರೀಫ್  ಅವರ ಕಿರು ಪರಿಚಯ: 

1951ರಲ್ಲಿ ಜನನ, ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆಯವರು. ತಂದೆ ಕನ್ನಡ ಶಾಲಾ ಶಿಕ್ಷಕರು. ಕನ್ನಡದಲ್ಲಿ ಎಂ.ಎ., ಪಿ.ಎಚ್.ಡಿ. ಪದವಿ, ಇಲ್ಲಿನ ಅಂಜುಮಾನ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ  ಕನ್ನಡ ಉಪನ್ಯಾಸಕರಾಗಿ ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಸೇವೆ,  ನಂತರ ನಾಲ್ಕು ವರ್ಷಗಳ ಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಭಟ್ಕಳ ಕ.ಸಾ.ಪದ ತಾಲೂಕು ಅಧ್ಯಕ್ಷತೆ. ಡಾ. ಷರೀಫರ ಮಾರ್ಗದರ್ಶನದಲ್ಲಿ ನಾಲ್ಕು ಜನ ಪಿ.ಎಚ್.ಡಿ. ಪದವಿ ಮತ್ತು ನಾಲ್ಕು ಜನ ಎಂ.ಫಿಲ್ ಪದವಿ ಪಡೆದಿರುತ್ತಾರೆ.

ಇವರ ಕೃತಿಗಳು/ಕಾವ್ಯ : ಭರವಸೆಗಳು, ಮಾತಾಡಿದ ಮೌನ, ಷಾಮಿಯಾನ (ಪಿ.ಲಂಕೇಶ ಪ್ರಶಸ್ತಿ ಪಡೆದ ಕೃತಿ ), ಕಾಡಲ್ಲಿ ನಾಡಲ್ಲಿ, ನನ್ನ ಹಾಡಲ್ಲಿ (ಕುವೆಂಪು ವಿ.ವಿ ಪದವಿ ಪಠ್ಯದಲ್ಲಿ ಕವನ ಸೇರ್ಪಡೆ ) 

ವ್ಯಕ್ತಿ ಪರಿಚಯ: ಮೌಲಾನ ಅಬ್ದುಲ್ ಕಲಾಂ ಆಜಾದ್, ಜನಾಂಗಿಕ ಅಧ್ಯಯನ: ಗೊಂಡರ ಸಂಸ್ಕøತಿ, ನವಾಯಿತರು, ಸ್ಥಳ ದರ್ಶನ : ಭಟ್ಕಳ ಮತ್ತು ಕಾರವಾರ ತಾಲೂಕು ದರ್ಶನ
ವ್ಯಾಕರಣ: ಕನ್ನಡ ವ್ಯಾಕರಣ ಸೂಚಿ, ಪ್ರಬಂಧ: ಚಿಂತನ-ಮಂಥನ ಸಂಪಾದನೆ: ಸೌಹಾರ್ದ ಸಂಗಮ(ಪ್ರಬಂಧಗಳು), ಪಯಣ( ಕಥೆಗಳು ), ಕಂಪನ(ಕಥೆಗಳು), ಕಾವ್ಯಸಂಪದ(ಕರ್ನಾಟಕ ವಿ.ವಿ ಬಿ.ಎ. ಪ್ರಥಮ ವರ್ಷದ ಪಠ್ಯ). 

ಇವರಿ ಸಂದ ಪ್ರಶಸ್ತಿಗಳು, ಗೌರವಗಳು: ಶಿಕ್ಷಣ ಕ್ಷೇತ್ರದ ಸೇವೆಗೆ ಚಾಲುಕ್ಯ ಪ್ರಶಸ್ತಿ-2013 ರಲ್ಲಿ, ಜಾನಪದ ಕ್ಷೇತ್ರದ ಸೇವೆಗೆ - ಜೀಶಂಪ ಜಾನಪದ ತಜ್ಞ ಪ್ರಶಸ್ತಿ,-2010 ರಲ್ಲಿ, ಸಾಹಿತ್ಯ ಸೇವೆಗೆ ಸಾಧನಾ ಶ್ರೀ ಪ್ರಶಸ್ತಿ-2010ರಲ್ಲಿ ಷಾಮಿಯಾನ ಕವನ ಸಂಕಲನಕ್ಕೆ ಪಿ.ಲಂಕೇಶ ಪ್ರಶಸ್ತಿ-2008 ರಲ್ಲಿ ದೊರೆತಿದೆ.  

ಅಭಿಮಾನಿಗಳ ಗೌರವ : ಭಾವಾಭಿನಂದನೆ ಅಭಿನಂದನಾ ಕೃತಿ ಅರ್ಪಣೆ, ಡಾ.ಸೈಯದ್ ಝಮೀರುಲ್ಲಾ ಸಾಹಿತ್ಯ ಪ್ರತಿಷ್ಠಾನ(ರಿ) ಭಟ್ಕಳ ಮೂಲಕ ಪ್ರತಿವರ್ಷ ಭಾವೈಕ್ಯತೆಯ ಆಶಯ ಕೃತಿಗೆ ರೂ 5000 ಬಹುಮಾನ ಮತ್ತು ಪ್ರಶಸ್ತಿ ಫಲಕ ಮತ್ತು ಪತ್ರ ನಿರಂತರ ಪ್ರಶಸ್ತಿ ಪ್ರಧಾನ ಸಮೂಹ ಸಂವಹನ ಸಾಹಿತ್ಯ(ಕರ್ನಾಟಕ ವಿ.ವಿ. ಬಿ.ಎ ಅಂತಿಮ ವರ್ಷದ ಕನ್ನಡ ಐಚ್ಚಿಕ ಪಠ್ಯ) 

ಪಂಪ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರಾಗಿ ಸಮರ್ಥವಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದು. 2015-18ರ ಅವಧಿಒಗೆ ಕರ್ನಾಟಕ ಜಾನಪದ ವಿ.ವಿ ಸಿಂಡಿಕೇಟ್ ಸದಸ್ಯರು, 2017 ರಿಂದ : ಸಂತಕವಿ ಕನಕದಾಸರ ರಾಷ್ಟ್ರೀಯ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಬೆಂಗಳೂರು ಇದರ ಕಾರ್ಯಾನುಷ್ಠಾನ ಸದಸ್ಯ. ಆಕಾಶವಾಣಿ ಬೆಂಗಳೂರು, ಧಾರವಾಡ, ಕಾರವಾರ ಮತ್ತು ಚಂದನ ವಾಹಿನಿಯಲ್ಲಿ ಸರಣಿ ರೂಪದಲ್ಲಿ ಬೆಳಗು ಕಾರ್ಯಕ್ರಮ ನೀಡಿದ ಹೆಗ್ಗಳಿಕೆ. ಕರ್ನಾಟಕ ಜಾನಪದ ವಿ.ವಿದ ಗ್ರಾಮ ಚರಿತ್ರೆ ಕೋಶ ಯೋಜನೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಗ್ರಾಮ ಚರಿತ್ರಾ ಕೋಶದ ಜಿಲ್ಲಾ ಸಂಪಾದಕ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...