ಶಾರ್ಜಾ :ಯಶಸ್ವಿಯಾಗಿ ಸಂಪನ್ನಗೊಂಡ ಪುಸ್ತಕ ಮೇಳ - ಗಮನ ಸೆಳೆದ ಶಾಂತಿ ಪ್ರಕಾಶನ

Source: shanti prakashana | By Arshad Koppa | Published on 17th November 2016, 8:45 AM | Gulf News | Special Report | Don't Miss |

ಶಾರ್ಜಾ, ನ ೧೬ : ನವೆಂಬರ್-2016 ರ ಎರಡನೇ ತಾರೀಕಿನಂದು ಆರಂಭಿಸಿದ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕೋತ್ಸವವು ದೇಶ-ವಿದೇಶಗಳ ಸಹಸ್ರಾರು ಜನರನ್ನು ತನ್ನೆಡೆಗೆ ಆಕರ್ಷಿಸಿ ಬಹಳ ಸಡಗರದಿಂದ ಕಳೆದ ತನ್ನ ಹನ್ನೊ೦ದು ದಿನಗಳ ವೈಭವಕ್ಕೆ 12/11/2016 ರ ಶನಿವಾರ ಸಮಾಪ್ತಿಗೊಳಿಸಿತು. ವರ್ಷದಿಂದ  ವರ್ಷಕ್ಕೆ ಹೆಚೆಚ್ಚು ಜನಸಾಗರಕ್ಕೆ ಸಾಕ್ಷಿಯಾಗುತ್ತಿರುವ ಶಾರ್ಜಾ ಅಂತಾರಾಷ್ಟ್ರೀಯ ಸಾಹಿತ್ಯ ಸಂಭ್ರಮವು ತನ್ನ ಮೂವತ್ತೈದನೇ ವರ್ಷಾಚರಣೆಯ ಈ ಬಾರಿ ಒಟ್ಟು ಸುಮಾರು 2.3 ಮಿಲಿಯನ್ ಗಳಿಗೂ ಮೀರಿದ ಸಂದರ್ಶಕರನ್ನು ಬರಮಾಡಿಕೊಂಡ ದಾಖಲೆಯನ್ನು ತನ್ನ ಹಿರಿಮೆಯಾಗಿಸಿಕೊಂಡಿತು. ಹೀಗೆ ತನ್ನ ಈ ಹಿಂದಿನ ದಾಖಲೆಗಳೆಲ್ಲವನ್ನು ಹಿಂದಿಕ್ಕಿದ ಈ ಸಲದ ಶಾರ್ಜಾ ಸಾಹಿತ್ಯೋತ್ಸವವು ಜಗತ್ತಿನಲ್ಲಿಯೇ ಮೂರನೇ ಸ್ಥಾನವನ್ನು ಗಿಟ್ಟಿಸಿಕೊ೦ಡಿದೆ. ವಿಶ್ವವಿಖ್ಯಾತವಾದ ಈ ಅಕ್ಷರ ಮೇಳದಲ್ಲಿ ಒಟ್ಟು ಅರುವತ್ತು ದೇಶಗಳು ಭಾಗವಹಿಸಿದ್ದು ಸುಮಾರು ೧೪೨೦ ಪ್ರಕಾಶನ ಸಂಸ್ಥೆಗಳು ತಮ್ಮ ಮಳಿಗೆಗಳನ್ನು ತೆರೆದಿದ್ದವು. ಅವುಗಳಲ್ಲಿ ಕರ್ನಾಟಕದ ಕನ್ನಡ ಭಾಷೆಯ ಸಾಹಿತ್ಯವನ್ನು ಪ್ರತಿನಿಧಿಸಿದ್ದ  ಮಂಗಳೂರಿನ ಶಾಂತಿ ಪ್ರಕಾಶನಲಾಯವು ಹೊಂದಿದ್ದ  ಏಕೈಕ ಕನ್ನಡ ಸಾಹಿತ್ಯ ಮಳಿಗೆಯು  ಯು.ಎ.ಇ ಯಾದ್ಯಂತವಿರುವ ಸಾವಿರಾರು ಕನ್ನಡಿಗರ ಮನಸೂರೆಗೊಂಡಿತು. ಮಾತ್ರವಲ್ಲದೆ ಶಾರ್ಜಾ ಅಂತರಾಷ್ಟ್ರೀಯ ಸಾಹಿತ್ಯ ಮೇಳದಲ್ಲಿ ತನ್ನ ಇರುವಿಕೆಯೊಂದಿಗೆ ಕನ್ನಡ ಭಾಷೆ ಮತ್ತು ಅವುಗಳ ಅಕ್ಷರಗಳನ್ನೂ ಕಂಡರಿಯದ ವಿವಿಧ ದೇಶಗಳ ಲಕ್ಷಾಂತರ ಜನರ ಗಮನವನ್ನು ತನ್ನತ್ತ ಸೆಳೆಯಿತು. ಈ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯು ಜಾಗತಿಕ ಸಾಹಿತ್ಯ ಸಮ್ಮೇಳನವೊಂದರ ಭಾಗವಾಗಿ  ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಹಲವಾರು ದೇಶಗಳ ಜನರೊಂದಿಗೆ ಪರಿಚಿತವಾದವು. ಯಾವುದೇ ಭಾಷೆಯ ಔನ್ನತ್ಯಕ್ಕೆ ಮೇರೆಗಳಿರಲಾರದು ಎಂಬೋಪಾದಿಯಲ್ಲಿ ಭಾರತೀಯೇತರರಾದ ಹಲವಾರು ಜನರು ಅದರಲ್ಲಿಯೂ ಆಫ್ರಿಕಾ, ಮಧ್ಯ ಏಷ್ಯಾ ಮತ್ತು ಅನೇಕಾನೇಕ ಪಾಶ್ಟಾತ್ಯರು ಕೂಡಾ ಕನ್ನಡ ಭಾಷೆಯ ಬಗ್ಗೆ ಅರಿತುಕೊಳ್ಳುವಲ್ಲಿದ್ದ ಕಾತರ ಅದರ ಅಕ್ಷರಗಳನ್ನು ಕಲಿಯಲು ತೋರ್ಪಡಿಸಿದ ಕುತೂಹಲ, ಕನ್ನಡ ಭಾಷಾಧ್ಯಯನವನ್ನು ಪಡೆಯಲಿರುವ ಆಂಗ್ಲ ಪುಸ್ತಕಗಳನ್ನು ವಿಚಾರಿಸುವುದನ್ನೊಳಗೊಂಡಂತೆ ವೈವಿಧ್ಯಮಯ ವಿದೇಶಿ ಜನರು ಕನ್ನಡ ಭಾಷೆಯಲ್ಲಿ ಹೊಂದಿರುವ ಆಸಕ್ತಿಯು ಶಾಂತಿ ಪ್ರಕಾಶನ ಸಂಸ್ಥೆಯ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತು.

 

 

ಶಾರ್ಜಾ ಸಾಹಿತ್ಯ ಸಂಭ್ರಮವು ತನ್ನ ಪುಸ್ತಕ ಮೇಳದ ಸಮಾಪ್ತಿಯನ್ನು ಘೋಷಿಸುವುದರೊಂದಿಗೆ ಅನಿವಾರ್ಯವಾಗಿಯೇ ಶಾಂತಿ ಪ್ರಕಾಶನವು ಕೂಡಾ ಇಲ್ಲಿನ ತನ್ನ ಮಳಿಗೆಯ ಸಮಾರೋಪ ಸಮಾರಂಭವನ್ನೇರ್ಪಡಿಸುವ ಸಿದ್ದತೆಯನ್ನು ಮಾಡಬೇಕಾಯಿತು. ಅದರಂತೆ ೧೨-೧೧-೨೦೧೬ ರ ಶನಿವಾರ ಸಂಧ್ಯಾ ಸಮಯಕ್ಕೆ ಜರಗಿಸಲಾದ ಇದರ ಸಮಾರೋಪ ಸಭೆಯನ್ನು ಮಾಸ್ಟರ್ ವಿ.ಕೆ. ನೂಹ್ ಎ. ರಶೀದ್ ವಿಟ್ಲ ರವರ ಕಿರಾಅತ್ ನೊಂದಿಗೆ ಆರಂಭಿಸಲಾಯಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕದ ಪ್ರಸಿದ್ಧ ಸಾಹಿತಿ ಪದ್ಮಶ್ರೀ ನಾಡೋಜ ನಿಸಾರ್ ಅಹಮೆದ್ ರವರು ಶಾಂತಿ ಪ್ರಕಾಶನ  ಸಾಹಿತ್ಯಗಳಲ್ಲಿನ ತನ್ನ ಅಭಿಮಾನ ಹಾಗೂ ಅವುಗಳಿಂದ ಕಲಿತುಕೊಂಡ ವಿಚಾರಗಳು ಅಂತೆಯೇ ಮರ್ಹೂಂ ಇಬ್ರಾಹೀಮ್ ಸಈದ್ ರವರೊಂದಿಗೆ ಅವರಿಗಿದ್ದ ಆತ್ಮೀಯತೆಯನ್ನು ನೆನಪಿಸಿಕೊಂಡರು. ಶಾಂತಿ ಪ್ರಕಾಶನವು ಇನ್ನಷ್ಟು ಕನ್ನಡ ಪುಸ್ತಕಗಳನ್ನು  ತನ್ನೊಂದಿಗಿರಿಸಿ ಸಾಕಷ್ಟು ಸಾಹಿತ್ಯವನ್ನು ಕನ್ನಡ ಭಾಷೆಯಲ್ಲಿ ಜನರನ್ನು ತಲುಪಿಸುವಲ್ಲಿ ಮುಂದಾಗಬೇಕು ತನ್ಮೂಲಕ ಅನಿವಾಸಿ ಕನ್ನಡಿಗರ ಸಾಹಿತ್ಯಾಭಿರುಚಿಯನ್ನು ವೃದ್ಧಿಸಲು ಸಹಕಾರಿಯಾಗಬೇಕು ಎಂಬ ಸಲಹೆಯನ್ನು ನೀಡಿದರು ಮತ್ತು ಮುಂದಿನ ವರುಷಕ್ಕೆ ಈ ಶಾಂತಿಯ ಕಿರುಮಳಿಗೆಯು ಬೃಹತ್ ಗ್ರಂಥ ಭಂಡಾರದೊಂದಿಗೆ ಇದರ ನಾಲ್ಕು ಪಟ್ಟು ದೊಡ್ಡದಾಗಿರಲಿ ಎಂದು ಶುಭ ಹಾರೈಸಿದರು. ನಂತರ ಮಾತನಾಡಿದ  ಮುಖ್ಯ ಅತಿಥಿಗಳಲ್ಲಿ ಇನ್ನೋರ್ವರಾದ ಡಾ. ಕಾಪು ಎಂದೇ ಪ್ರಸಿದ್ದಿಯನ್ನು ಪಡೆದಿರುವ ಲಂಡನ್ ವಿಶ್ವವಿದ್ಯಾನಿಲಯದ ಭಾರತೀಯ ಮತ್ತು ಅರಬ್ ಸಂಯುಕ್ತ ಸಂಸ್ಥಾನಗಳ ನಿರ್ದೇಶಕರಾದ ಡಾ. ಮಹಮದ್ ಕಾಪು (ಡೀನ್ ಡೈರೆಕ್ಟರ್ ಯುನಿವರ್ಸಿಟಿ ಆಫ್ ಲಂಡನ್) ರವರು ಕನ್ನಡ ಭಾಷೆಯಲ್ಲಿ ಕುರ್ ಆನ್ ವ್ಯಾಖ್ಯಾನವನ್ನು ಹೊಂದಿರುವ ಶಾಂತಿ ಪ್ರಕಾಶನವು ಹಲವಾರು ಇಸ್ಲಾಮಿ ಸಾಹಿತ್ಯಗಳನ್ನು ಹೊರತಂದಿದ್ದು ಇದೀಗ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಭಾಗಿಯಾಗಿರುವುದು ಬಹಳ ಹೆಮ್ಮೆಯ ವಿಚಾರ. ದೇಶ ಭಾಂಧವರಾದ ಮುಸ್ಲಿಮೇತರ ಸಹೋದರರಲ್ಲಿ ಇಸ್ಲಾಮಿನ ಬಗ್ಗೆ ಇರುವ ಗೊಂದಲಗಳನ್ನು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಇದು ಬಹಳಷ್ಟು ಶ್ರಮಿಸಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಶಾಂತಿ ಪ್ರಕಾಶನದ ಇಸ್ಲಾಮಿ ಸಾಹಿತ್ಯಗಳು  ಕನ್ನಡೇತರರಿಗೂ ಲಭ್ಯವಾಗುವಂತೆ ಆಂಗ್ಲ ಭಾಷೆಯಲ್ಲಿಯೂ ಪ್ರಕಟಿಸಿ ಶಾರ್ಜಾದಲ್ಲಿನ ಸಾಹಿತ್ಯೋತ್ಸವದಲ್ಲಿ ಭಾಗಿಯಾಗುವಂತಾಗಲಿ ಎಂಬ ಸಲಹೆಯೊಂದಿಗೆ ಸಂಸ್ಥೆಗೆ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ (DKSC) ದಕ್ಷಿಣ ಕನ್ನಡ ಸುನ್ನಿ ಸೆಂಟರ್ ಇದರ  ಉಪಾಧ್ಯಕ್ಷ ಮತ್ತು ಬ್ಯಾರಿ ಕಲ್ಚರಲ್ ಫಾರಮ್ ದುಬೈ ಇದರ ಉಪಾಧ್ಯಕ್ಷರೂ ಆದ ಅಬ್ದುಲ್ಲತೀಫ್ ಮುಲ್ಕಿ ಯವರು ಸಂಸ್ಥೆಯ ಚಟುವಟಿಕೆಗಳನ್ನು ಶ್ಲಾಘಿಸಿದರು ಮತ್ತು ನಮ್ಮೆಲ್ಲಾ ಸಂಘ ಸಂಸ್ಥೆಗಳು ಪರಸ್ಪರ ಸಹಕರಿಸಿ ಇನ್ನಷ್ಟು  ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಾಂತಿ ಪ್ರಕಾಶನವು ಪ್ರೇರಕವಾಗಲಿಯೆಂದು ಶುಭ ಹಾರೈಸಿದರು. ಅದಲ್ಲದೆ ಈ ಕಿರು ಸಮಾವೇಶಕ್ಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದುಬೈ ಕನ್ನಡ ಕೂಟದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಯುತ ಸದನ್ ದಾಸ್ ರವರು ಕನ್ನಡ ಪುಸ್ತಕಗಳ ಮಳಿಗೆಯನ್ನು ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ತೆರೆದ ಶಾಂತಿ ಪ್ರಕಾಶನ ಸಂಸ್ಥೆಯ ಕಾರ್ಯ ಸಾಧನೆಗಳನ್ನು ಮುಕ್ತ ಕಂಠದಿಂದ ಕೊಂಡಾಡಿದರು ಹಾಗೂ ಕನ್ನಡದ ಬೇರೆ ಬೇರೆ ಪ್ರಕಾಶನಗಳ ಇನ್ನಷ್ಟು ವಿವಿಧ ಬಗೆಯ ಕನ್ನಡ ಸಾಹಿತ್ಯಗಳು ಶಾಂತಿ ಸಂಸ್ಥೆ ಮೂಲಕ ಇಲ್ಲಿ ತಲುಪುವಂತಾಗಲಿ ಎಂದು ಶುಭ ಹಾರೈಸಿದರು.   ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಇರ್ಷಾದ್ ಮೂಡಬಿದ್ರೆ ಯವರು ಶಾಂತಿ ಪ್ರಕಾಶನ ಸಂಸ್ಥೆಯೊಂದಿಗೆ ತಮಗಿರುವ ಗೌರವ ಮತ್ತು ಆತ್ಮೀಯತೆಗಳನ್ನು ಪ್ರಸ್ತಾಪಿಸಿ ಶುಭ ಕೋರಿದರು. ಮುಖ್ಯ ಅತಿಥಿಗಳಾದ ನಿಸಾರ್ ಅಹ್ಮದ್ ರವರಿಗೆ ಶಾರ್ಜಾ ಐ. ಸಿ. ಸಿ. ಘಟಕದ ನಿಕಟಪೂರ್ವ ಅಧ್ಯಕ್ಷ ನೂರ್ ಅಶ್ಫಾಕ್ ರವರು ಹಾಗೂ ಡಾ. ಕಾಪುರವರಿಗೆ ಸದನ್ ದಾಸ್ ದುಬೈ ಕನ್ನಡ ಕೂಟದ  ನಿಕಟಪೂರ್ವ ಅಧ್ಯಕ್ಷರು  ಹೂಗುಚ್ಛ ನೀಡಿ ಸ್ವಾಗತಿಸಿದರು. ಅಲ್ಲದೆ ಈ ಸಂಧರ್ಭದಲ್ಲಿ ನಿಸಾರ್ ಅಹ್ಮದ್ ರವರಿಗೆ ಡಾ. ಕಾಪುರವರು  ನೆನಪಿನ ಕಾಣಿಕೆಯನ್ನು  ನೀಡಿ ಗೌರವಿಸಿದರು. ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಯು.ಎ.ಇ ಇದರ ಕೇರಳ ಐ. ಸಿ. ಸಿ. ಮಲಯಾಳಂ ಘಟಕದ ಮುಖ್ಯಸ್ಥರಾದ ಮುಬಾರಕ್ ಪಿ.ಡಿ. ತ್ರಿಶೂರ್ ರವರು ನಾಡೋಜ ಪದ್ಮಶ್ರೀ ನಿಸಾರ್ ಅಹಮೆದ್ ರವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯಕ್ರಮದ ಆರಂಭದಲ್ಲಿ  ಅಬ್ದುಲ್ ಖಾದರ್ ಕುಕ್ಕಾಜೆ ರವರು ಅತಿಥಿಗಳೆಲ್ಲರನ್ನೂ ಸ್ವಾಗತಿಸಿದರು ಮತ್ತು ಕಾರ್ಯಕ್ರಮವನ್ನು ನಿರೂಪಿಸಿದ ನಿಸಾರ್ ಫರಂಗಿಪೇಟೆಯವರು ಕೊನೆಯಲ್ಲಿ ಧನ್ಯವಾದವಿತ್ತರು.

 

ಇದಲ್ಲದೆ ಶಾಂತಿ ಪ್ರಕಾಶನ ಸಂಸ್ಥೆಯು ಕಳೆದ ಹತ್ತು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿದಿನ ಗಣ್ಯ ವ್ಯಕ್ತಿಗಳನ್ನು ವಿಶೇಷ ಅತಿಥಿ ಸಂದಶರ್ಕರನ್ನಾಗಿ ಆಮಂತ್ರಿಸಿದ್ದು ಈ ಕೆಳಗಿನ ಸಾಹಿತಿ ಮಹನೀಯರು ಮತ್ತು ಸಾಮಾಜಿಕ ನೇತಾರರು ಅದರಲ್ಲಿ ಬೇರೆ ಬೇರೆ ದಿನಗಳಲ್ಲಿ ಭಾಗವಹಿಸಿದ್ದರು.

 

 

ಗೋಪಿನಾಥ್ ರಾವ್ ಕತೆಗಾರರು ದುಬೈ, ಪ್ರಕಾಶ್ ಪಯ್ಯಾರ್ (ಅಧ್ಯಕ್ಷರು ಧ್ವನಿ ಪ್ರತಿಷ್ಠಾನ),ರಾಮಚಂದ್ರ ಹೆಗ್ಗಡೆ  (ಉದ್ಯಮಿಗಳು ದುಬೈ),ವಿನಯ್ ನಾಯ್ಕ್  ನಮ್ಮ ಟಿ.ವಿ. ಮಧ್ಯಪ್ರಾಚ್ಯಪ್ರತಿನಿಧಿ , ಬೇಕಲ್ ಸುಂಗಧ್ ರಾಜ್ ಅಧ್ಯಕ್ಷರು ಕನ್ನಡ ಸಂಘ ದುಬೈ, ಡಯಾನಾ ಡಿ ಸೋಜ (ಕೊಂಕಣಿ ಬರಹಗಾರರ ಕೂಟ ದುಬೈ), ಶೋಧನ್ ಪ್ರಸಾದ್ (ನಮ್ಮ ತುಳುವೆರ್ ದುಬೈ,) ಮಹಮದ್ ಅಲಿ ಉಚ್ಚಿಲ್ ಅಧ್ಯಕ್ಷರು ಬ್ಯಾರಿ ವೆಲ್ಫೇರ್ ಫಾರಮ್ ಅಬುಧಾಬಿ ,  ಅಬ್ದುಲ್ಲಾ ಮದುಮೂಲೆ ಪ್ರಧಾನ ಕಾರ್ಯದರ್ಶಿಗಳು ಬ್ಯಾರಿ ವೆಲ್ಫೇರ್ ಫಾರಮ್ ಅಬುಧಾಬಿ, ರಫೀಕ್ ಕೋಲ್ಪೆ ವಿಶ್ವ ಕನ್ನಡಿಗ ದುಬೈ ಹಾಗೂ KSCC ( ಕರ್ನಾಟಕ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್ ) ಇದರ ಪ್ರತಿನಿಧಿ  ಮತ್ತು ಪಧಾಧಿಕಾರಿಗಳು ಅಲ್ಲದೆ ಅನೇಕ ಸಾಹಿತಿಗಳು ಉದ್ಯಮಿಗಳು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪಧಾಧಿಕಾರಿಗಳು ವಿಶೇಷ ಆಹ್ವಾನಿತರಾಗಿ ಸಂದರ್ಶಿಸಿ ಶುಭ ಕೋರಿದರು.            

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...