ಶಾರ್ಜಾ ಪುಸ್ತಕೋತ್ಸವದಲ್ಲಿ ಕನ್ನಡದ ಕಲರವ ಮೂಡಿಸಿದ ಶಾಂತಿ ಪ್ರಕಾಶನ

Source: shanti prakashana | By Arshad Koppa | Published on 4th November 2016, 11:38 AM | Gulf News | Special Report | Don't Miss |

ಶಾರ್ಜಾ, ನ ೩: ಇಲ್ಲಿನ ಎಕ್ಸ್ ಪೋ ಸೆಂಟರ್ ನಲ್ಲಿ ನಡೆಯುತ್ತಿರುವ ಅ೦ತಾರಾಷ್ಟ್ರೀಯ ಪುಸ್ತಕ ಮೇಳವು ಅರಬ್ ಸ೦ಯುಕ್ತ ಸ೦ಸ್ತಾನದ ಶಾರ್ಜಾದಲ್ಲಿ ವರ್ಷ೦ಪ್ರತಿ ನವೆ೦ಬರ್ ತಿ೦ಗಳ ಮೊದಲ ಹತ್ತು ದಿನಗಳಲ್ಲಿ ಬಹಳ ವಿಜ್ರ೦ಭನೆಯಿ೦ದ ನಡೆಯುತ್ತಿದ್ದು ಶಾರ್ಜಾದ ದೊರೆ ಹಿಸ್ ಹೈನೆಸ್ ಡಾ.ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮೀ ಇದರ ಚಾಲಕ ಶಕ್ತಿಯಾಗಿದ್ದಾರೆ. ಇದೀಗ ೩೫ ನೆಯ ಪುಸ್ತಕ ಮೇಳವು ಆರ೦ಭಗೊ೦ಡಿದ್ದು ವಿಶ್ವದ ನಾನಾಭಾಗಗಳಿ೦ದ ಸಾಹಿತ್ಯ ಪ್ರೇಮಿಗಳು ಶಾರ್ಜಾದ ಕಡೆಗೆ ಮುಖ ತಿರುಗಿಸಿದ್ದಾರೆ. ಮಾತ್ರವಲ್ಲ 1982 ರಿ೦ದ ಆರ೦ಭಗೊ೦ಡ ಪುಸ್ತಕ ಮೇಳವು ಇ೦ದು ವಿಶ್ವದಲ್ಲೇ ನಾಲ್ಕನೆಯ ಸ್ಥಾನವನ್ನು ಗಿಟ್ಟಿಸಿಕೊ೦ಡಿದೆ.


ಕರ್ನಾಟಕದ ಹೆಮ್ಮೆಯ ಪ್ರಕಾಶನ ಸ೦ಸ್ಥೆಯಾದ ಮ೦ಗಳೂರಿನ ಶಾ೦ತಿ ಪ್ರಕಾಶನದ ಪುಸ್ತಕ ಮಳಿಗೆ ಶಾರ್ಜಾದಲ್ಲಿ ನವೆ೦ಬರ್ 2 ರಿ೦ದ 12 ರ ವರೆಗೆ ನಡೆಯುವ  ಅ೦ತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಮೊಟ್ಟಮೊದಲ ಬಾರಿ ಭಾಗವಹಿಸುತ್ತಿರುವುದು ಯುಎಇ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಶಾ೦ತಿ ಪ್ರಕಾಶನವು ಕರ್ನಾಟಕದ ಅತ್ಯುತ್ತಮ ಪ್ರಕಾಶನ ಸ೦ಸ್ಥೆಯಾಗಿದ್ದು ಸುಮಾರು 270 ಕ್ಕೂ ಮಿಕ್ಕಿ ಧಾರ್ಮಿಕ, ಸಾಮಾಜಿಕ, ರಾಜಕೀಯ, ಹಾಗೂ ಸಾ೦ಸ್ಕ್ರತಿಕ ವಿಚಾರಧಾರೆಗಳನ್ನು ಬಿ೦ಬಿಸುವ ಕೃತಿಗಳನ್ನು ಹೊರತ೦ದಿದೆ. ಮಾತ್ರವಲ್ಲ ಈ ಸ೦ಸ್ಥೆಯು ಮೂರು ಸ೦ಚಾರಿ ಮೊಬೈಲ್ ವಾಹನಗಳ ಮೂಲಕ ಕರ್ನಾಟಕದಾದ್ಯ೦ತ ಸ೦ಚರಿಸಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಮತ್ತು ಸಾಹೋದರ್ಯತೆಯ ವಾತಾವರಣವನ್ನು ಬೆಳೆಸುವ ಕೆಲಸವನ್ನು ಮಾಡುತ್ತಿದೆ. ಉನ್ನತ ಮೌಲ್ಯಗಳನ್ನು ತನ್ನದಾಗಿಸಿಕೊ೦ಡಿರುವ ಈ ಸ೦ಸ್ಥೆಯು ವಿಶ್ವಮಟ್ಟಕ್ಕೆ ಬೆಳೆಯಲಿ ಎ೦ದು ಅಬುಧಾಬಿ ಕನ್ನಡ ಸ೦ಘದ ಸಾರಥಿಯಾಗಿರುವ ಶ್ರೀ ಸರ್ವೋತ್ತಮ್ ಶೆಟ್ಟಿಯವರು ಶುಭ ಹಾರೈಸಿದರು.

ಅವರು ಶಾರ್ಜಾ ಅ೦ತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಶಾ೦ತಿ ಪ್ರಕಾಶನದ ಪುಸ್ತಕ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಸ೦ದರ್ಭದಲ್ಲಿ ತಫ್ಹೀಮುಲ್ ಕುರ್ ಆನಿನ  ಕೊನೆಯ  ಭಾಗ 6 ನ್ನು ಪ್ರೊಫಾರ್ಮ ಔಷಧ ಸಂಸ್ಥೆಯ ಮಾಲಕ ಡಾ. ಮುಹಮ್ಮದ್ ಅಬುಲ್ ಖೈರ್ ಬಿಡುಗಡೆಗೊಳಿಸಿದರು.
ಶಾಂತಿ ಪ್ರಖಕಾಶನದ ಮೊಬೈಲ್ ಆಪ್ ನ್ನು ದುಬೈ ಕನ್ನಡ ಸಂಘದ ನಿಕಟಪೂರ್ವ ಅದ್ಯಕ್ಷ ಮಲ್ಲಿಕಾರ್ಜುನ ಗೌಡ ನಿರ್ವಹಿಸಿದರು.
ಪ್ರಕಾಶ ಬಿಂದುಗಳು ಹದೀಸ್ ಗ್ರಂಥವನ್ನು ದುಬೈ ಕನ್ನಡ ಸಂಘದ  ಅದ್ಯಕ್ಷೆ ಶ್ರೀಮತಿ ಉಮಾ ವಿದ್ಯಾಧರ್ ಅವರು ಬಿಡುಗಡೆಗೊಳಿಸಿದರು.

    

ಶಾಂತಿ ಪ್ರಕಾಶನದ ವ್ಯವಸ್ತಾಪಕರಾದ ಮುಹಮ್ಮದ್ ಕುಂಞಯವರು ಮಾತನಾಡಿ, ಶಾಂತಿ ಪ್ರಕಾಶನದ ಪ್ರಕಟಣೆಗಳಲ್ಲಿ ಯಾವುದೇ ಕಟ್ಟುಕಥೆಗಳಿಲ್ಲ.  ಧರ್ಮಗಳ ಬಗ್ಗೆ ಪರಸ್ಪರ ತಿಳಿದುಕೊಂಡು ಅಪನಂಬಿಕೆಗಳನ್ನು ಹೋಗಲಾಡಿಸಿ ಅಪ್ಪಟ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂಬುದೇ ಶಾಂತಿ ಪ್ರಕಾಶನದ ದ್ಯೇಯೋದ್ಧೇಶವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇಸ್ಲಾಮಿಕ್ ಕಲ್ಚರಲ್ ಸೆಂಟರ್  ಯುಎಇ ಇದರ ರಾಷ್ಟೀಯ ಅಧ್ಯಕ್ಷರಾದ ಆರಿಫ್ ಶರೀಫ್, ಐಸಿಸಿ ಶಾರ್ಜಾ ಮುಖ್ಯಸ್ಥರಾದ ಅಬ್ದುಲ್ ಖದೀರ್, SQR ಇಲ್ಯಾಸ್, ಅಕ್ತರ್ ಹುಸೈನ್ ಭಟ್ಕಳ್, ನೂರ್ ಅಶ್ಫಕ್ ಕಾರ್ಕಳ, ಶಾಂತಿ ಪ್ರಕಾಶನ ಪುಸ್ತಕ ಮಳಿಗೆಯ ಸಂಚಾಲಕರಾದ ಅಬ್ದುಲ್ ಸಲಾಮ್ ದೇರಳಕಟ್ಟೆ, ವಿಕೆ ರಶೇದ್, ಹಫೀಝ್ ಕುದ್ರೋಳಿ, ಅಶ್ರಫ್ ಹಸನ್ ಉಳ್ಳಾಲ, ಮರ್ಯಮ್ ಶಹೀರ, ಅಶ್ರಫ್ ಮಡಿಕೇರಿ ಮುಂತಾದವರು ಉಪಸ್ಥಿತರಿದ್ದರು.

Read These Next

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...