ಶಾರ್ಜಾ:ಕರ್ನಾಟಕ ರಾಜ್ಯೋತ್ಸವ ಮತ್ತು ಪ್ರತಿಷ್ಠಿತ ಮಯೂರ ಪ್ರಶಸ್ತಿ ಸಮಾರಂಭ ಮತ್ತು ಯು.ಎ.ಇ. ಮಟ್ಟದ ಕನ್ನಡ ಚಲನಚಿತ್ರ ಗೀತಾಗಾಯನ ಸ್ಪರ್ಧೆ

Source: sharjah karnataka association | By Arshad Koppa | Published on 1st October 2016, 8:01 AM | Gulf News |

ಶಾರ್ಜ ಇಂಡಿಯನ್ ಅಸೋಸಿಯೇಶನ್ ಸಭಾಂಗಣದಲ್ಲಿ 2016 ನವೆಂಬರ್ 18 ರಂದು ಮಧ್ಯಾಹ್ನ 2.00 ಗಂಟೆಯಿಂದ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಹಾಗೂ ಯು.ಎ.ಇ. ಯಲ್ಲಿ ಸಾಧನೆ ಮಾಡಿರುವ ಕನ್ನಡಿಗರಿಗೆ ನೀಡಲಾಗುವ ಪ್ರತಿಷ್ಠಿತ ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಯು.ಎ.ಇ. ಮಟ್ಟದಲ್ಲಿ ಕನ್ನಡ ಚಲನಚಿತ್ರ ಗೀತಾಗಾಯನ ಅಂತಿಮ ಸ್ಪರ್ಧೆ ನಡೆಯಲಿದೆ.

“ಮಯೂರ ರಾಜ”  ಮತ್ತು  “ಮಯೂರ ರಾಣಿ”  ಪ್ರಶಸ್ತಿ
ಯು.ಎ.ಇ. ಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗಾಗಿ 16 ವಯಸ್ಸು ಮೆಲ್ಪಟ್ಟಿರುವ ಗಾಯಕ ಗಾಯಕಿಯರಿಗೆ ಕನ್ನಡ ಚಲನ ಚಿತ್ರ ಗೀತಾಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಜಯಗಳಿಸಿದ ಸ್ಪರ್ಧಿಗಳು ಮಯೂರ ರಾಜ ಮತ್ತು ಮಯೂರ ರಾಣಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ.

“ಮಯೂರ ಕುಮಾರ”  ಮತ್ತು  “ಮಯೂರ ಕುಮಾರಿ”  ಪ್ರಶಸ್ತಿ
ಯು.ಎ.ಇ.ಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ 8 ವಯಸ್ಸಿನಿಂದ 15 ವಯಸ್ಸಿನೊಳಗಿನ ಮಕ್ಕಳಿಗಾಗಿ ಕನ್ನಡ ಚಲನ ಚಿತ್ರ ಗೀತಾಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಜಯಗಳಿಸಿದ ಸ್ಪರ್ಧಿಗಳು ಮಯೂರ ಕುಮಾರ ಮತ್ತು ಮಯೂರ ಕುಮಾರಿ ಪ್ರಶಸ್ತಿಯನ್ನು 
ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ.

ಪ್ರಥಮ ಸುತ್ತಿನ ಆಯ್ಕೆ ಸ್ಪರ್ಧೆ ನವೆಂಬರ್ 11 ನೇ ತಾರೀಕಿನಂದು ನಡೆಯಲಿದೆ.
ಭಾಗವಹಿಸುವ ಸ್ಪರ್ದಿಗಳು ತಮ್ಮ ಹೆಸರು ........ ವಯಸ್ಸು ..... ಮೊಬೈಲ್ ಸಂಖ್ಯೆ ....... ವಾಟ್ಸಪ್ ಸಂಖ್ಯೆ......ಇಮೈಲ್ ಐಡಿ........ ಯೊಂದಿಗೆ
ಅಕ್ಟೋಬರ್ 20 ನೇ ತಾರೀಕಿನ ಒಳಗೆ ಕೆಳಗೆ ನಮೂಧಿಸಿದ ಇಮೈಲ್ ನಲ್ಲಿ ನೋಂದಾಯಿಸಿ ಕೊಳ್ಳಲು ಕೋರಲಾಗಿದೆ.  ವಿ.ಸೂ. - ವಿಸಿಟ್ ವಿಸಾದಲ್ಲಿರುವವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.       Email ID : [email protected]  
ಮಾಧ್ಯಮ ಪ್ರಕಟಣೆ :

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.