ಹೆಬ್ಬಾವುವನ್ನು ಕೊಂದ ಆರೋಪದಡಿ ಏಳು ಜನರ ಬಂಧನ

Source: sonews | By Staff Correspondent | Published on 23rd August 2018, 11:02 PM | Coastal News | State News | Don't Miss |

ಮುಂಡಗೋಡ : ಜಿಂಕೆಯನ್ನು ನುಂಗುತ್ತಿದ್ದ ಹೆಬ್ಬಾವನ್ನು ಜಿಂಕೆಯಿಂದ ಬಿಡಿಸಿ ಅದನ್ನು ಗ್ರಾಮಕ್ಕೆ ತಂದು ಕೊಂದು ಹಾಕಿದ ಆರೋಪದಡಿ ಅರಣ್ಯ ಇಲಾಖೆ ಅಧಿಕಾರಿಗಳು 7ಮಂದಿಯನ್ನು ಬಂಧಿಸಿ ವನ್ಯಜೀವ ರಕ್ಷಣೆ ಕಾನೂನಡಿ ಕ್ರಮ ಜರಗಿಸಿದ್ದಾರೆ. 

ಕಾಡಿನ ಪ್ರದೇಶದಲ್ಲಿ ಸುಮಾರು 10 ಅಡಿ ಉದ್ದದ ಹೆಬ್ವಾವು  ಒಂದು ವರ್ಷದ ಜಿಂಕೆ ಮರಿಯನ್ನು ನುಂಗುತ್ತಿರುವಾಗ ಜಿಂಕೆಯನ್ನು ಹೆಬ್ಬಾವಿನಿಂದ ಬೇರ್ಪಡಿಸಲು ಮಂಗಗಳಿಂದ ರಕ್ಷಣೆಮಾಡಲು ಹೊಲವನ್ನು ಕಾಯಲು ಹೋಗಿದ್ದ  ಪ್ರತ್ಯಕ್ಷ ಕಂಡ ವ್ಯಕ್ತಿ ಊರ ಜನರಿಗೆ ಕರೆದುಕೊಂಡು ಬಂದು ಜಿಂಕೆಯನ್ನು ಬೇರ್ಪಡಿಸಿ  ಸತ್ತ ಜಿಂಕೆಯನ್ನು ಹಾಗೂ  ಜೀವಂತ ಹೆಬ್ಬಾವನ್ನು  ಬಸಾಪುರ ಗ್ರಾಮಕ್ಕೆ ತಂದು ಹೆಬ್ವಾವುವನ್ನು ಕೊಂದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು 7 ಜನರನ್ನು ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ ಘಟನೆ ತಾಲೂಕಿನ ನಂದಿಗಟ್ಟಾ ಪಂಚಾಯತ್ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ

ಬಂದಿತ ಆರೋಪಿತರನ್ನು ಬಸವರಾಜ ಕೋಣಿ, ಶೇಕಪ್ಪ ಬೇವಿನಮರದ ಮೋಹನ ಸಿಂಗ್ ರಜಪೂತ್ ಮಹದೇವ ಸುತಗಟ್ಟಿ, ಬಸಪ್ಪಾ ಹುಂಚಣ್ಣನವರ, ಮಧುಸಿಂಗ್ ರಜಪೂತ, ವಿಜಯಸಿಂಗ್ ಕಾರ್ಪೇಂಟರ ಹಾಗೂ ಇನ್ನತರರು ಸೇರಿದ್ದಾರೆ ಎಂದು ಹೇಳಲಾಗಿದೆ.

ಕಾಡಿನ ಪ್ರದೇಶದಲ್ಲಿ ಹೆಬ್ಬಾವು ಜಿಂಕೆಯನ್ನು ನುಂಗುತ್ತಿರುವುದು ಸಹಜ ಪ್ರತಿಕ್ರಿಯೇ ಆದರೆ ಜಿಂಕೆಯನ್ನು ಬೇರ್ಪಡಿಸಿದ್ದು ಮಾನವಿತೇ ಎಂದು ಭಾವಿಸಿದರು ಜೀವಂತ ಹೆಬ್ಬಾವು ವನ್ನು ಕಾಡಿನ ಪ್ರದೇಶದಿಂದ ಸುಮಾರು 1 ಕಿಮಿ ದೂರದ ಬಸಾಪುರ ಗ್ರಾಮಕ್ಕೆ ತಂದು ಕೊಂದು ಹಾಕಿದ್ದು ವನ್ಯ ಜೀವರಕ್ಷಣೆ ಕಾನೂನ ಅಡಿಯಲ್ಲಿ ಆರೋಪಿಗಳಾಗುತ್ತಾರೆ ಎಂದು ಹೇಳಲಾಗುತ್ತಿದೆ

ಮಾಹಿತಿ ಪಡೆದ  ವಲಯ ಅರಣ್ಯಾಧಿಕಾರಿ ಸುರೇಶ ಕುಲ್ಲೋಳ್ಳಿ  ಉಪವಲಯ ಅರಣ್ಯಾಧಿಕಾರಿಗಳ ಸಹಾಯದಿಂದ ಆರೋಪಿತರನ್ನು ತಂದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...