ಎಐಟಿಎಂ ನಲ್ಲಿ ‘ಕಂಪ್ಯೂಟರ್ ವಿಜ್ಞಾನದ ಅವಕಾಶ ಮತ್ತು ಸವಾಲುಗಳು’ ಕುರಿತು ಸೆಮಿನಾರ್

Source: sonews | By Staff Correspondent | Published on 9th October 2018, 12:33 AM | Coastal News | Don't Miss |

ಭಟ್ಕಳ: ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೊಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ವಿಜ್ಞಾನ ವಿಭಾಗವು ‘ಕಂಪ್ಯೂಟರ್ ವಿಜ್ಞಾನದಲ್ಲಿರುವ ಅವಕಾಶ ಮತ್ತು ಸವಾಲುಗಳು’ ಹಾಗೂ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಮನೆಯಲ್ಲಿ ಕುಳಿತುಕೊಂಡು ಕಂಪನಿಯನ್ನು ನಿಭಾಯಿಸುವ ಕುರಿತ ವಿಚಾರಸಂಕಿರಣವನ್ನು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿತ್ತು.

ಬೆಂಗಳೂರಿನ ಕಾಗ್ನಿಜಂಟ್ ಟೆಕ್ನಾಲಜೀಸ್ ಇನ್ಫ್ರಾ ತಂತ್ರಜ್ಞಾನದ ತಜ್ಞ ರಾಘವೇಂದ್ರ ನಾಯ್ಕ ಮತ್ತು ಐಬಿಎಂ ಕಂಪನಿ ಹಿರಿಯ ಸಾಫ್ಟ್‍ವೇರ್ ಡೆವಲಪರ್ ಸುಪ್ರೀತಾ ರಾಘವೇಂದ್ರ ನಾಯ್ಕ ವಿಚಾರಣಸಂಕಿರಣದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸಂಸ್ಥೆಯ ಪ್ರಾಂಶುಪಾಲ ಡಾ.ಮುಷ್ತಾಖ್ ಆಹ್ಮದ್ ಭಾವಿಕಟ್ಟೆ ಕಂಪ್ಯೂಟರ್ ಸೈನ್ ವಿಭಾಗದ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಕಂಪ್ಯೂಟರ್ ಸೈನ್ಸ್ ವಿಭಾಗದ ಸಂಚಾಲಕ ಪ್ರೋ.ಸುಭ್ರಮಣ್ಯ ಭಾಗವತ್, ನಾವು ಉದ್ಯಮಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಮಾಡಲಿದ್ದೇವೆ, ಈಗಾಗಲೇ ಕಂಪ್ಯೂಟರ್ ವಿಭಾಗವು ಎಂ.ಒ.ಯು. ಐ.ಸಿ.ಟಿ ಲ್ಯಾಬ್  ಮತ್ತು  ಇತರ ಕಂಪನಿಗಳ  ಜೊತೆಗೆ ಇಂಟನ್ರ್ಶಿಪ್, ಉದ್ಯಮ ಭೇಟಿಗಳು, ಉದ್ಯಮ ಮಾರ್ಗದರ್ಶನ, ಯೋಜನೆ ಮಾರ್ಗದರ್ಶನ, ಉದ್ಯೊಗ ಸಹಾಯ ಒದಗಿಸುವ ಕಾರ್ಯಕ್ರಮಗಳು ಯೋಜಿಸಲಾಗಿದೆ. ಎಮ್‍ಎನ್ಸಿ ಕಂಪೆನಿಗಳಲ್ಲಿರುವ ನಮ್ಮ ಹಳೆಯ ವಿದ್ಯಾರ್ಥಿಗಳು ಅಂತಿಮ ವರ್ಷ ವಿದ್ಯಾರ್ಥಿಗಳ ಯೋಜನೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ, ಅಲ್ಲದೆ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್ ನೀಡುವುದರೊಂದಿಗೆ ಅವರಿಗೆ ಕಂಪನಿಗಳಲ್ಲಿ ಅವಕಾಶವನ್ನು ಮಾಡಿಕೊಡುವ ಯೋಜನೆ ಅತಿಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಫ್ರೊ. ಅನಿಲ್ ಕಡ್ಲೆ ಸ್ವಾಗತಿಸಿದರು. ಪ್ರೋ. ಸುಪ್ರಿಯಾ ಅತಿಥಿಗಳನ್ನು ಪರಿಚಯಿಸಿದರು. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...