ರಿಯಾದ್: ಸೌದಿಯಲ್ಲಿ ಸಂಕಷ್ಟ ಸಿಲುಕಿದ ನಾಲ್ವರು ಯುವಕರ ರಕ್ಷಣೆ ಮಾಡಿದ ಕೆ.ಸಿ.ಎಫ್ ಎನ್ನುವಂತಹ ವರದಿ ಸತ್ಯಕ್ಕೆ ದೂರವಾದದ್ದು : ಅಶ್ರಫ್ ಬೆಂಗ್ರೆ ಸ್ಪಷ್ಟನೆ

Source: ashraf black cat | By Arshad Koppa | Published on 19th March 2017, 8:23 AM | Gulf News |

ಮಾರ್ಚ್ 14 ರ ವಾರ್ತಭಾರತಿ , ಜನಧ್ವನಿ ಮತ್ತು ಇನ್ನಿತರ ದಿನಪತ್ರಿಕೆ ಹಾಗೂ ನಮ್ಮ ಕುಡ್ಲ ದ್ರಶ್ಯ ಮಾಧ್ಯಮದಲ್ಲಿ ಸೌದಿ ಅರೇಬಿಯಾದ ಅಲ್ ರಾಸ್ ನಲ್ಲಿ ಒಂದು ವರ್ಷದಿಂದ ಸಂಕಷ್ಟಕ್ಕೆ ಸಿಲುಕಿದ ಮಂಗಳೂರು ಹಾಗೂ ಚಿಕ್ಕಮಗಳೂರಿನ ನಾಲ್ವರು ಯುವಕರಿಗೆ ಕರ್ನಾಟಕ ಕಲ್ಚರಲ್ ಫೌಂಡೇಷನ್‌ (KCF) ರಕ್ಷಣೆ ನೀಡಿ ಸುರಕ್ಷತವಾಗಿ ಮನೆಗೆ ತಲುಪಿಸಲು ಸಹಕರಿಸಿದ್ದಾರೆ ಎನ್ನುವಂತಹ ವಾರ್ತೆಯು ಬಂದಿದ್ದು ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ವಿಷಯವಾಗಿದೆ

                       ಸಂಕಷ್ಟಕ್ಕೆ ಸಿಲುಕಿದ ಈ ನಾಲ್ವರನ್ನು ಕೂಡ ಐದು ತಿಂಗಳುಗಳ ಕಾಲ  ವಾಸ್ತವ್ಯ ಮಾಡಲು ಸ್ಥಳಾವಕಾಶ ನೀಡಿ, ಆಹಾರವನ್ನು ನೀಡಿ ಸತತವಾಗಿ ಅವರನ್ನು ಊರಿಗೆ ಕಳುಹಿಸಲು ಪ್ರಯತ್ನ ಪಟ್ಟು ಇಲ್ಲಿನ ಲೇಬರ್ ಕೋರ್ಟ್ ಹಾಗೂ ಇನ್ನಿತರ ಸರಕಾರಿ  ಕಚೇರಿಗಳಲ್ಲಿ ಅಲೆದಾಡಿ ಕೆಲಸ ನಿರ್ವಯಿಸಿದ ಮಂಗಳೂರಿನ ಬೆಂಗ್ರೆ ನಿವಾಸಿ ಅಶ್ರಫ್ ಬ್ಲ್ಯಾಕ್ ಕ್ಯಾಟ್ ರವರು ಮಾಧ್ಯಮಗಳಿಗೆ ಈ ವಿಷಯವನ್ನು ತಿಳಿಸಿದ್ದಾರೆ

ಅಶ್ರಫ್ ರವರು ತನಗೆ ಪರಿಚಯವೇ ಇಲ್ಲದ ಈ ನಾಲ್ವರು ಯುವಕರನ್ನು ತಾಜ್  ಹೋಟೆಲ್ ಮಾಲಕ ಹಸನ್ ರವರು ಕೊಟ್ಟ ಮಾಹಿತಿಯಂತೆ ಭೇಟಿ ಮಾಡಿ , ಆವರಿಗೆ ಧೈರ್ಯ ತುಂಬಿ,   ಅವರ ಸೌದಿ ಪ್ರಯೋಜಕನ್ನು (ಕಫೀಲ್ ) ದೂರವಾಣಿ ಮೂಲಕ ಊರಿಗೆ ಕಳುಯಿಸಲು ಕೇಳಿಕೊಂಡರು , ಪ್ರಯೋಜಕ ಕೇಳದಿದ್ದಾಗ  ಇಲ್ಲಿನ ಲೇಬರ್ ಕೋರ್ಟ್ ಗೆ ಹೋಗಿ ಸತತವಾಗಿ ಪ್ರಯತ್ನಪಟ್ಟಿದ್ದರು. ಈ ನಡುವೆ ನಾವು ಇವರನ್ನು ಊರಿಗೆ ಕಳುಹಿಸಿಕೊಡುವುದಾಗಿಯೂ , ಪ್ರಯೋಜಕನಿಂದ ಪಾಸ್ ಪೋರ್ಟ್ ಹಾಗೂ  ಬಾಕಿ ಇರುವ ಐದು ತಿಂಗಳ ವೇತನವನ್ನು ತೆಗೆಯಿಸಿಕೊಡುವುದಾಗಿಯೂ,  ಕೆ ಸಿ ಎಫ್ ನ ಕಾರ್ಯಕರ್ತರೆಂದು ಪರಿಚಯಿಸಿ ಇಬ್ಬರು ಬಂದಿದ್ದು ನಾವು ಇದಕ್ಕೆ ಒಪ್ಪಿಕೊಂಡಿದೆವು. ಬಳಿಕ ಈ ನಾಲ್ವರನ್ನು ಪ್ರಯೋಜಕನ ಬಳಿ ಕರೆದುಕೊಂಡು ಹೋಗಿದ್ದು,  ಕೋಪಗೊಂಡ ಪ್ರಯೋಜಕ  ಇವರ ಕೈಯಲ್ಲಿದ್ದ ಇಕಾಮವನ್ನು ಪಡೆದು ತುಂಡರಿಸಿದ್ದು. ಇವರ ಬಳಿಯಿದ್ದ ಕೊನೆಯ ದಾಖಲೆಯೂ ಕಳೆಯುವಂತಾಯಿತು. ಇಷ್ಟಾಗಿಯೂ ಇವರುಗಳನ್ನು ತಾವೇ ಊರಿಗೆ ಕಳುಹಿಸಿಕೊಡುವುದಾಗಿ ಹೇಳಿಕೊಳ್ಳುತ್ತಾ 15 ರಿಂದ 20 ದಿನಗಳ ಕಾಲ ಸತಾಯಿಸಿದ್ದು ಕೊನೆಗೆ ಅಶ್ರಫ್ ಬೆಂಗ್ರೆಯವರು ತನ್ನ  ಸ್ನೇಹಿತ ಬೆಳ್ತಂಗಡಿ ಮುರ ಮೂಲದ ಅಬ್ದುಲ್ ಖಾದರ್(SALIH)  ರವರ ಜೊತೆಗೂಡಿ ಸೌದಿ ಪೊಲೀಸರಿಬ್ಬರ ಸಹಕಾರದೊಂದಿಗೆ ಇವರನ್ನು ಊರಿಗೆ ಕಳುಹಿಸಿಕೊಟ್ಟಿರುತ್ತಾರೆ. ಇದಲ್ಲದೆ ಈ ನಾಲ್ವರ ಲಗೇಜ್ ನ್ನು ಊರಿಗೆ ಕಳುಹಿಸಿಕೊಡುವುದಾಗಿ ತೆಗೆದುಕೊಂಡಿದ್ದು ಅದನ್ನು ಇದುವರೆಗೆ ಊರಿಗೆ ಕಳುಹಿಸದೆ ತನ್ನ ರೂಮಿನಲ್ಲಿ ಬಿಟ್ಟು ಹೋಗಿರುತ್ತಾರೆ.  

 ಯಾರೋ ಮಾಡಿದ ಸೇವೆಯನ್ನು ತಾವು ಮಾಡಿರುವುದೆಂದು ಹೇಳಿಕೊಂಡು , ಹಣ ಕಲೆಕ್ಷನ್ ಕೂಡ ಕೆ ಸಿ ಎಫ್ ನವರು ಮಾಡಿದ್ದು ತನಗೆ ಅತ್ಯಂತ ಖೇದಕರ ವಿಷಯವಾಗಿದೆ. ಇಂತಹ ಹಲವಾರು ಸೇವೆಗಳನ್ನು  ಮಾಡುತ್ತಿದ್ದು ತಾನು ಯಾರ ಬಳಿಯಲ್ಲಿ ಹೇಳಿಕೊಂಡು ನಡೆದಿರುವುದಿಲ್ಲ. ಮಾಡದ ಕೆಲಸವನ್ನು ನಾವೇ ಮಾಡಿರುದಾಗಿ ಹೇಳಿ ಅದರ ಫಲ ಪಡೆಯುವ ಕಾರ್ಯವನ್ನು ಯಾರು ಕೂಡ ಮಾಡಬಾರದೆಂದು ಅಶ್ರಫ್ ಬೆಂಗ್ರೆಯವರು ತಿಳಿಸಿರುತ್ತಾರೆ

Best Regards

Ashraf Black Cat
050 165 6929

Read These Next