ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಇಸ್ತಾನ್ ಬುಲ್ ನ ನೈಟ್ ಕ್ಲಬ್ ಮೇಲೆ ಉಗ್ರರ ದಾಳಿ: 35 ಮಂದಿ ಸಾವು

Source: IANS | By I.G. Bhatkali | Published on 2nd January 2017, 3:42 AM | Global News |

ಇಸ್ತಾನ್ ಬುಲ್: ಡಿ.31 ರಂದು ಮಧ್ಯರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದ ವೇಳೆ ಇಸ್ತಾನ್ ಬುಲ್ ನ ನೈಟ್ ಕ್ಲಬ್ ನಲ್ಲಿ ದಾಳಿ ನಡೆದಿದ್ದು ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ. 

ಇಬ್ಬರು ಉಗ್ರರು ಇಸ್ತಾನ್ ಬುಲ್ ನ ರೀನಾ ನೈಟ್ ಕ್ಲಬ್ ಮೇಲೆ ದಾಳಿ ನಡೆಸಿದ್ದು, 40 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಸಾಂತಾ ಕ್ಲಾಸ್ ಉಡುಪು ಧರಿಸಿದ್ದ ಇಬ್ಬರು ಉಗ್ರರು ದಾಳಿ ನಡೆಸಿದ್ದು, ಮೊದಲು ನೈಟ್ ಕ್ಲಬ್ ನ ಕಾವಲಿಗಿದ್ದ ಪೊಲೀಸ್ ಪೇದೆ ಹಾಗೂ ಓರ್ವ ನಾಗರಿಕನನ್ನು ಹತ್ಯೆ ಮಾಡಿ ನಂತರ ನೈಟ್ ಕ್ಲಬ್ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

ಭದ್ರತಾ ವಿಶ್ಲೇಷಕರೊಬ್ಬರ ಪ್ರಕಾರ 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದ್ದು, ದಾಳಿ ನಡೆಸಿರುವ ಉಗ್ರರು ನೈಟ್ ಕ್ಲಬ್ ನಲ್ಲೇ ಅಡಗಿರುವ ಸಾಧ್ಯತೆ ಇದೆ ಎಂದು ಟರ್ಕಿ ಮಾಧ್ಯಮಗಳು ವರದಿ ಮಾಡಿವೆ. ಉಗ್ರರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಡಿ.31 ರಂದು ಮಧ್ಯ ರಾತ್ರಿ ಉಗ್ರರ ದಾಳಿ ನಡೆದ ನೈಟ್ ಕ್ಲಬ್ ಸಮೀಪದಲ್ಲಿರುವ ಫುಟ್ಬಾಲ್ ಸ್ಟೇಡಿಯಂ ಬಳಿ ಇತ್ತೀಚೆಗಷ್ಟೇ ಉಗ್ರರು ದಾಳಿ ನಡೆಸಿದ್ದರು.     

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಉಗ್ರರ ದಾಳಿ ನಡೆಯುವ ಸಂಭವವಿದೆ ಎಂದು ಅಲ್ಲಿನ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಗುಪ್ತಚರ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತಾದರೂ ನೈಟ್ ಕ್ಲಬ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. 

Read These Next