ರಶ್ಯ ಸೇನಾ ವಿಮಾನ ಪತನ : ಬ್ಲಾಕ್‌ಬಾಕ್ಸ್ ಪತ್ತೆ

Source: S O News service | By Staff Correspondent | Published on 27th December 2016, 11:41 PM | Global News | Don't Miss |

ರಶ್ಯ: ಕಪ್ಪು ಸಮುದ್ರದಲ್ಲಿ ರವಿವಾರ ಪತನಗೊಂಡ 90 ಮಂದಿ ಯೋಧರಿದ್ದ ರಶ್ಯನ್ ಸೇನಾವಿಮಾನದ ಬ್ಲಾಕ್‌ಬಾಕ್ಸ್ ಪತ್ತೆಯಾಗಿರುವುದಾಗಿ ರಶ್ಯದ ಅಧಿಕಾರಿಗಳು ತಿಳಿಸಿದ್ದಾರೆ.

ಸೋಚಿ ಸಮೀಪದ ಸಾಗರಪ್ರದೇಶದಲ್ಲಿ ಪತನಗೊಂಡ ಟಿಯು-154 ವಿಮಾನದ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯ ವೇಳೆ ಬ್ಲಾಕ್‌ಬಾಕ್ಸ್ ಪತ್ತೆಯಾಗಿದೆಯೆಂದು ಅವರು ಹೇಳಿದ್ದಾರೆ. ಸಮುದ್ರದಲ್ಲಿ 17 ಮೀಟರ್ ಆಳದಲ್ಲಿ ಪತ್ತೆಯಾದ ಕಪ್ಪುಪೆಟ್ಟಿಗೆಯನ್ನು, ಮಾಸ್ಕೊಗೆ ಕಳುಹಿಸಲಾಗಿದ್ದು ಅಲ್ಲಿ ಅದನ್ನು ತಜ್ಞರು ಪರಿಶೀಲಿಸಲಿದ್ದಾರೆಂದು ರಕ್ಷಣಾ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

 ರವಿವಾರ ಸಿರಿಯದಲ್ಲಿರುವ ರಶ್ಯದ ವಾಯುನೆಲೆಗೆ ತೆರಳುತ್ತಿದ್ದ ಈ ವಿಮಾನವು ಸೋಚಿ ನಗರದ ಸಮೀಪ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತ್ತು. ವಿಮಾನ ಪತನದ ಕಾರಣವನ್ನು ತನಿಖಾಧಿಕಾರಿಗಳು ಇನ್ನಷ್ಟೇ ದೃಢಪಡಿ ಸಬೇಕಿದೆ. ಆದರೆ ಇದು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಲಾಗಿಲ್ಲವೆಂದವರು ಹೇಳಿದ್ದಾರೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...