ಬಿ ಎಸ್ ಎನ್ಎಲ್  ಇಂಟರ್ ನೆಟ್ ಆಧಾರಿತ ಕರೆ ಸೌಲಭ್ಯಕ್ಕೆ ಚಾಲನೆ

Source: sonews | By Staff Correspondent | Published on 11th July 2018, 7:11 PM | National News | Don't Miss |

ಹೊಸದಿಲ್ಲಿ:ಸರಕಾರಿ ಸ್ವಾಮ್ಯದ  ಟೆಲಿಕಾಂ ಕಂಪೆನಿ ಬಿಎಸ್ಎನ್ಎಲ್ ಮೊದಲ ಬಾರಿಗೆ ಇಂಟರ್ ನೆಟ್ ಆಧಾರಿತ ದೂರವಾಣಿ  ಸೇವೆಯನ್ನು ಪ್ರಕಟಿಸಿದ್ದು. ಬಿಎಸ್ ಎನ್ ಎಲ್ ಮೊಬೈಲ್  ಆ್ಯಪ್   ಬಳಸಿ  ಯಾವುದೇ ಫೋನ್ ನಂಬರಿಗೂ ಕರೆ  ಮಾಡಬಹುದಾಗಿದೆ.

ಇನ್ನು  ಬಿಎಸ್ಎನ್ಎಲ್ ಗ್ರಾಹಕರು ಕಂಪೆನಿಯ ಮೊಬೈಲ್ ಅಪ್ಲಿಕೇಶನ್ "ವಿಂಗ್ಸ್" ಅನ್ನುಬಳಸಿ  ದೇಶದಲ್ಲಿ  ಯಾವುದೇ ಫೋನ್ ಸಂಖ್ಯೆಗೆ ಕರೆ ಮಾಡಲು  ಅವಕಾಶ ಇದೆ. ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ  ಬಿಎಸ್ ಎನ್ ಎಲ್ ನ ನೂತನ  ಸೇವೆಯನ್ನು ಬುಧವಾರ ಉದ್ಘಾಟಿಸಿದರು.

ಇದಕ್ಕೂ ಮೊದಲು , ಮೊಬೈಲ್  ಆ್ಯಪ್ ಮೂಲಕ  ಫೋನ್ ಕರೆಗಳು  ನಿರ್ದಿಷ್ಟ  ಆ್ಯಪ್ ಬಳಕೆದಾರರೊಳಗೆ  ಮಾತ್ರ ಸೀಮಿತವಾಗಿತ್ತು.

ಈ ಸೇವೆಯ ಮೂಲಕ, ಬಿಎಸ್ ಎನ್ ಎಲ್  ಗ್ರಾಹಕರು ಬಿಎಸ್ ಎನ್ ಎಲ್ ವೈಫೈ  ಮೂಲಕ ಯಾವುದೇ  ಯಾವುದೇ ನಂಬರಿಗೂ  ಕರೆ ಮಾಡಲು ಸಾಧ್ಯವಿದೆ.
ಈ ಸೇವೆಗೆ ನೋಂದಣಿ ಈ ವಾರ  ಆರಂಭಗೊಳ್ಳಲಿದೆ  ಮತ್ತು ಸೇವೆ ಜುಲೈ 25ರ ಬಳಿಕ  ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Read These Next

ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು

ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು

ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಮೂವರು ಸಚಿವ ಖಾತೆ, ಜೋಷಿ, ಡಿವಿಎಸ್, ಸುರೇಶ್ ಅಂಗಡಿಗೆ ಖಾತೆ ಹಂಚಿಕೆ

ಪ್ರಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ  ಸಚಿವ ಸಂಪುಟದ ಖಾತೆ ಹಂಚಿಕೆ ತೀರ್ಮಾನವಾಗಿದ್ದು ರಾಜ್ಯದ ಮೂವರು ...