ಕುಸಿತುಬಿದ್ದ ಶಿಥಿಲಗೊಂಡ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಕಟ್ಟಡ

Source: sonews | By sub editor | Published on 16th July 2018, 5:59 PM | Coastal News | State News | Don't Miss |

ಭಟ್ಕಳ: ಭಟ್ಕಳ ಬಸ್ ನಿಲ್ದಾಣವನ್ನು ನವೀಕರಿಸುತ್ತಿದ್ದು ಇದಕ್ಕಾಗಿ ತೆರವುಗೊಂಡ ಕಟ್ಟಡವೊಂದು ಮಳೆಗೆ ಕುಸಿದು ಬಿದ್ದ ಘಟನೆ ಸೋಮವಾರ ನಡೆದಿದೆ. 

ಸುಮಾರು 40 ವರ್ಷಗಳ ಹಳೆಯದಾದ ಕಟ್ಟಡವನ್ನು ಸಾರಿಗೆ ಇಲಾಖೆ ನವೀಕರಿಸುತ್ತಿದ್ದು ಹೊಸ ಬಸ್ ನಿಲ್ದಾಣ ಕಾಮಾಗಾರಿ ಆರಂಭಗೊಂಡಿದೆ. ಬಿರುಕುಗೊಂಡಿರುವ ಕಟ್ಟಡದಲ್ಲಿ ಹೊಟೇಲ್ ನಡೆಸುತ್ತಿದ್ದು ಕಳೆದ ತಿಂಗಳಷ್ಟೆ ಅದನ್ನು ತೆರವುಗೊಳಿಸಿದ್ದಾರೆ. ಈ ಹಿಂದೆಯೆ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಅಲ್ಲಿನ ಮಳಿಗೆಗಳನ್ನು ಖಾಲಿ ಮಾಡುವಂತೆ ಭಟ್ಕಳ ಬಸ್ ಘಟಕದಿಂದ ಅಂಗಡಿಕಾರರಿಗೆ ನೋಟಿಸ್ ನೀಡಲಾಗಿತ್ತು. ಹಲವು ದಿನಗಳ ಹಿಂದೆ ಅಂಗಡಿಕಾರರು ಅಂಗಡಿಗಳನ್ನು ಖಾಲಿ ಮಾಡಿದ್ದರು . ಭಾನುವಾರದಂದು ಕಟ್ಟಡದ ಗೋಡೆಯೊಂದು ಕುಸಿದಿತ್ತು. ಇದನ್ನು ಕಂಡ ಡಿಪೋ ಮ್ಯಾನೇಜರ್ ಅಲ್ಲಿ ಜನಸಂಚಾರವನ್ನು ನಿಷೇಧಿಸಿದ್ದರು. ಸೋಮವಾರ ಬೆಳಿಗ್ಗೆ ಸಂಪೂರ್ಣ ಕಟ್ಟಡ ಕುಸಿದುಬಿದ್ದಿದೆ. ಆದರೆ, ಡಿಪೊ ಮ್ಯಾನೆಜರ್ ಇದನ್ನ ತಾವೆ ತೆರವುಗೊಳಿಸಿದ್ದೆವೆ ಎಂದು ಹೇಳಿಕೊಳ್ಳುತ್ತಿದ್ದಾರೆ.ಸದ್ಯ  ಕಟ್ಟಡ ಕುಸಿಯುಯುತ್ತಿರುವ ಆಡಿಯೋ ವೈರಲ್ ಆಗಿದೆ.

ತಹಸಿಲದ್ದಾರರಿಂದ ಪರಿಶೀಲನೆ; ಬಸ್ ನಿಲ್ದಾಣದ ಕಟ್ಟಡ ಕುಸಿಯುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ತಾಲೂಕಾಡಳಿತ ಎಚ್ಚೆತ್ತುಕೊಂಡಿದ್ದು ತಹಸಿಲದಾರ ವಿ.ಎನ್.ಬಾಡಕರ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡಿಸಿದ್ದಾರೆ. ಇಂಜಿನೀಯರ್ಸ್ ಗಳ ಸಮ್ಮುಖದಲ್ಲಿ ಸಂಪೂರ್ಣ ಕಟ್ಟಡವನ್ನು ಕೂಡಲೇ ಬೀಳಿಸಬೇಕೆಂಬ ಆದೇಶ ನೀಡಿದ್ದಾರೆ ಎನ್ನಲಾಗಿದೆ.
 

Read These Next

ವಿಕಲಚೇತನ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪೋಷಿಸುತ್ತಿರುವ ಸ್ನೇಹ ಶಾಲೆ-ಎಂ.ವಿ.ಹೆಗಡೆ

ಭಟ್ಕಳ: ವಿಶೇಷ ಚೇತನ ಮಕ್ಕಳಿಗೆ ಒಂದು ಶಾಲೆಯನ್ನು ತೆರೆದು ಅವರಿಗೆ ಸೇವೆ ನೀಡುತ್ತಿರುವ ಸ್ನೇಹ ವಿಶೇಷ ಮಕ್ಕಳ ಶಾಲೆಯ ಮಾಲತಿ ...

ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೂತನ ಕೊಳವೆಬಾವಿ ಲೋಕಾರ್ಪಣೆ ನೀರಿನ ಸದ್ಬಳಕೆಗೆ ಶಾಸಕ ಕೆ.ಶ್ರೀನಿವಾಸಗೌಡರ ಕರೆ 

ಕೋಲಾರ: ಕೋಲಾರ ನಗರದ 26ನೇ ವಾರ್ಡಿಗೆ ಸೇರಿದ ಸಂತೇ ಮೈದಾನ ಶಿವಗಿರಿ ನಗರದಲ್ಲಿ ಕೇಂದ್ರ ಪುರಸ್ಕøತ ಅಮೃತ್ ಯೋಜನೆಯಡಿ ನಿರ್ಮಿಸಿರುವ ...

ವಿಕಲಚೇತನ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪೋಷಿಸುತ್ತಿರುವ ಸ್ನೇಹ ಶಾಲೆ-ಎಂ.ವಿ.ಹೆಗಡೆ

ಭಟ್ಕಳ: ವಿಶೇಷ ಚೇತನ ಮಕ್ಕಳಿಗೆ ಒಂದು ಶಾಲೆಯನ್ನು ತೆರೆದು ಅವರಿಗೆ ಸೇವೆ ನೀಡುತ್ತಿರುವ ಸ್ನೇಹ ವಿಶೇಷ ಮಕ್ಕಳ ಶಾಲೆಯ ಮಾಲತಿ ...