ರೋಣ:ಸೂಡಿ ಜುಕ್ತಿಹಿರೇಮಠದಲ್ಲಿ ಎಪ್ರೀಲ 30ರಿಂದ ಮೇ 4ರ ವರೆಗೆ  ಜನಜಾಗೃತಿ ಧರ್ಮ ಸಮಾರಂಭ

Source: balanagoudra | By Arshad Koppa | Published on 30th April 2017, 1:53 AM | State News |

ಸೂಡಿ (ರೋಣ ತಾಲೂಕ) - ಎಪ್ರೀಲ್ 29. 
    ಸೂಡಿ ಜುಕ್ತಿಹಿರೇಮಠದ ನೂತನ ಕಟ್ಟಡದ ಉದ್ಘಾಟನೆ ಅಂಗವಾಗಿ ಎಪ್ರೀಲ 30ರಿಂದ ಮೇ 4ರ ವರೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮತ್ತು ಸೂಡಿ ಜುಕ್ತಿಹಿರೇಮಠದ ಡಾ|| ಕೊಟ್ಟೂರು ಬಸವೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. 
ದಿನಾಂಕ 30-4-2017ರಂದು ಸಂಜೆ 4.00 ಘಂಟೆಗೆ ಸೂಡಿ ಗ್ರಾಮದಲ್ಲಿ ಮೊದಲ ಬಾರಿಗೆ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುವುದು. ನಂತರ ಸಂಜೆ 6.30 ಘಂಟೆಗೆ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಶ್ರೀ ಮಠದ ನೂತನ ಕಟ್ಟಡ ಉದ್ಘಾಟನೆ ನಡೆದ ನಂತರ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗುವ ಧರ್ಮ ಸಮಾರಂಭವನ್ನು ರಾಜ್ಯ ಗ್ರಾಮ್ಭಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಎನ್.ಎಚ್. ಕೋನರಡ್ಡಿ, ಗದಗ ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ, ಗದಗ-ಬೆಟಗೇರಿ ನಗರಸಭಾಧ್ಯಕ್ಷ ಪೀರಸಾಬ ಕೌತಾಳ ಭಾಗವಹಿಸುವರು.
ಮೇ 1ರ ಸಂಜೆ 6.30ಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವೀರಶೈವ ಪರಂಪರೆಯ ಪುನರುತ್ಥಾನ ಧರ್ಮ ಸಮಾರಂಭವನ್ನು ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಉದ್ಘಾಟಿಸುವರು. ವಿ.ಪ. ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಾ.ಕ.ರಾ.ರ. ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್. ಗಜೇಂದ್ರಕುಮಾರ, ಯಲಬುರ್ಗಾ ಘಟಕ ವ್ಯವಸ್ಥಾಪಕ ಆರ್.ಬಿ. ಮಾನೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಶ್ರೀ ಮಠದಿಂದ ನೂತನವಾಗಿ ಪ್ರಾರಂಭಿಸುವ ‘ಶ್ರೀ ಕೊಟ್ಟೂರು ಬಸವೇಶ್ವರ ಗುರುಕುಲ ಸೇವಾ ಸಮಿತಿ ಸ್ಕೂಲ ಸೂಡಿ ಇದರ ನಾಮಫಲಕವನ್ನು ಮಾಜಿ ಶಿಕ್ಷಣ ಸಚಿವ ಮತ್ತು ವಿ.ಪ.ಸದಸ್ಯ ಬಸವರಾಜ ಹೊರಟ್ಟಿ ಅನಾವರಣ ಮಾಡುವರು.
ಮೇ 2ರ ಸಂಜೆ 6.30ಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗುವ ಮಹಿಳಾ ಧರ್ಮ ಸಮಾವೇಶವನ್ನು ನವೀಕರಿಸಬಹುದಾದ ಇಂಧನ ಅ.ನಿಗಮದ ಅಧ್ಯಕ್ಷ ಮತ್ತು ರೋಣ ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಗದಗ ಜಿ.ಪಂ.ಉಪಾಧ್ಯಕ್ಷೆ ರೂಪಾ ಅಂಗಡಿ, ಜಿ.ಪಂ. ಸದಸ್ಯೆ ಮಂಜುಳಾ ಮೋಹಣ ಹುಲ್ಲಣ್ಣನವರ, ಜಿ.ಪಂ. ಮಾಜಿ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ, ರೋಣ ತಾ.ಪಂ. ಅಧ್ಯಕ್ಷೆ ಪ್ರೇಮವ್ವ ನಾಯಕ್, ರೋಣ ತಾ.ಪಂ. ಉಪಾಧ್ಯಕ್ಷೆ ಇಂದಿರಾ ತೇಲಿ, ತಾ.ಪಂ. ಸದಸ್ಯೆ ಹುಲಿಗೆವ್ವ ಶಿರೋಳ, ಗ್ರಾ.ಪಂ. ಅಧ್ಯಕ್ಷೆ ಅಂಬಿಕಾ ಕುಲಕಣ ್ ಭಾಗವಹಿಸುವರು. 
ಮೇ 3ರ ಸಂಜೆ 6.30ಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗುವ ಯುವ ಜಾಗೃತಿ ಧರ್ಮ ಸಮಾರಂಭವನ್ನು ಸಂಸದರಾದ ಪ್ರಲ್ಹಾದ ಜೋಷಿ ಉದ್ಘಾಟಿಸುವರು. ವಿ.ಪ.ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಜಿ.ಎಸ್. ಗಡ್ಡದ್ದೇವರಮಠ, ಮಾಜಿ ವಿ.ಪ. ಸದಸ್ಯ ಮೋಹನ ಲಿಂಬಿಕಾಯಿ ಭಾಗವಹಿಸುವರು. 
ಮೇ 4ರ ಬೆಳಿಗ್ಗೆ 11.00 ಘಂಟೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗುವ ಸಾಮೂಹಿಕ ವಿವಾಹ ಹಾಗೂ ಧರ್ಮ ಸಮಾರಂಭವನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ. ಗದ್ದೀಗೌಡರ, ಮಾಜಿ ಸಂಸದರಾದ ಶಿವರಾಮಗೌಡ, ಮಂಜುನಾಥ ಸಿ. ಕುನ್ನೂರು, ಮಾಜಿ ಸಚಿವ ಸಿ. ಸಿ. ಪಾಟೀಲ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟರ, ಗದಗ ಶ್ರೀ ಜ|| ಪಂ|| ಸೇವಾ ಸಂಘದ ಅಧ್ಯಕ್ಷ ಬಸಣ್ಣ ಮಲ್ಲಾಡದ ಮತ್ತು ಕೃಷ್ಣಾ ಕಾಡಾದ ಮಾಜಿ ಅಧ್ಯಕ್ಷ ಬಿ.ಪಿ. ಹಳ್ಳೂರ ಭಾಗವಹಿಸುವರು.
ಈ ಎಲ್ಲ ಸಮಾರಂಭಗಳಲ್ಲಿ ನಾಡಿನ ಸಮಸ್ತ ಶಿವಾಚಾರ್ಯರು ಪಾಲ್ಗೊಳ್ಳುವರು. 
ಇಷ್ಟಲಿಂಗ ಮಹಾಪೂಜೆ: ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳಿಂದ ಮೇ 1ರಿಂದ 3ರ ವರೆಗೆ ಪ್ರತಿದಿನ ಬೆಳಿಗ್ಗೆ 8.00ಕ್ಕೆ ಇಷ್ಟಲಿಂಗ ಮಹಾಪೂಜೆ ನಡೆಯುವುದು.
     ಮೇ 1ರಂದು ಉಚಿತ ಜಂಗಮ ವಟುಗಳ ಅಯ್ಯಾಚಾರ ಹಾಗೂ ಭಕ್ತರಿಗೆ ದೀಕ್ಷಾ ಕಾರ್ಯಕ್ರಮ ಮೈಸೂರು ಅರಮನೆ ಜಪದಕಟ್ಟೆ ಮಠದ ಡಾ|| ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಂದ ಜರುಗುವುದು.
    ಎಪ್ರೀಲ 28ರಂದು ಗಣ¥ಪತಿ ಪೂಜೆ, ಸ್ವಸ್ತಿವಾಚನದೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು, ಎಪ್ರೀಲ 29ರಂದು ಬೆಳಿಗ್ಗೆ ಶ್ರೀ ರುದ್ರಹೋಮ, ಪಂಚಾಕ್ಷರ ಮಂತ್ರ ಹೋಮ, ಪೂರ್ಣಾಹುತಿ, ಅಷ್ಟೋತ್ತರ, ಶ್ರೀ ಮಠಕ್ಕೆ ರಕ್ಷಾಧಾರಣ-ಮಹಾಪ್ರಸಾದ, ಸಂಜೆ ಚಂಡಿ ಹೋಮ, ಪೂರ್ಣಾಹುತಿ, ಮತ್ತು ಮಂಗಳಾರುತಿ ಜರುಗುವುದು.
    ಈ ಎಲ್ಲ ಕಾರ್ಯಕ್ರಮಗಳಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ಮಠದ ಪ್ರಕಟಣೆಯಲ್ಲಿ ಕೋರಿದೆ.
 

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...