ರಸ್ತೆ ಅಪಘಾತದಲ್ಲಿ ಉದ್ಯಮಿ ಮುಝಪ್ಪರ್ ಕೋಲಾ ರ ಪತ್ನಿ ಆಮೀನಾ ಕೋಲಾ ಸಾವು;ಮೂವರಿಗೆ ಗಾಯ

Source: sonews | By Staff Correspondent | Published on 2nd November 2018, 3:40 PM | Coastal News | Don't Miss |

•    ಮಹಾರಷ್ಟ್ರದ ಸತಾರ ರಾ.ಹೆ. ಟೋಲ್ ನಾಕ ಬಳಿ ನಡೆದ ಅಪಘಾತ

ಭಟ್ಕಳ: ಮಹಾರಾಷ್ಟ್ರದ ಸತಾರ ಟೋಲ್ ನಾಕದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದ ರಸ್ತೆ ಅಪಘಾತದಲ್ಲಿ ಭಟ್ಕಳದ ಖ್ಯಾತ ಉದ್ಯಮಿ ಮುಝಪ್ಫರ್ ಕೋಲಾ ರವರ ಪತ್ನಿ ಆಮಿನಾ ಕೋಲಾ(63) ಮೃತಪಟ್ಟಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೆ ಗಾಯಗಳಾಗಿರುವುದಾಗಿ ವರದಿಯಾಗಿದೆ. 

ಮುಝಫ್ಫರ್ ಕೋಲಾ ರವರ ಕುಟುಂಬ ಮೂಲಗಳ ಪ್ರಕಾರ, ಮೂರು ಪ್ರತ್ಯೇಕ ಕಾರುಗಳಲ್ಲಿ ಮಹಾರಾಷ್ಟ್ರದ ವಿವಿಧ ಪ್ರೇಕ್ಷಣೀಯ ಸ್ಥಳದ ಪ್ರವಾಸ ಮಾಡಿ ಭಟ್ಕಳಕ್ಕೆ ಹಿಂತಿರುಗುತ್ತಿದ್ದಾಗ ಸತಾರ ಬಳಿಯ ಟೋಲ್ ನಾಕಾ ಬಳಿ ನಿಂತಿದ್ದ ಲಾರಿಗೆ ಇವರ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. 

ಮುಝಫ್ಫರ್ ಕೋಲಾ ರ ಪುತ್ರ ಅಬ್ದುಲ್ಲಾ ಕೋಲಾ ಕಾರು ಚಲಾಯಿಸುತ್ತಿದ್ದು ಅವರ ಬೆನ್ನಿಗ ಬಲವಾದ ಪೆಟ್ಟು ಬಿದ್ದಿದ್ದು ಮಗಳು ಹಾಗೂ ಮತ್ತೋರ್ವ ಸಂಬಂಧಿ ಶವೂರ್ ಕೋಲಾ ಎಂಬುವವರಿಗೆ ಬಲವಾದ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. 

ಮೃತದೇಹವನ್ನು ಭಟ್ಕಳಕ್ಕೆ ತರಲಾಗುತ್ತಿದೆ ಸಂಜೆಯ ವೇಳೆಗೆ ನವಾಯತ್ ಕಾಲೋನಿಯ ಅವರ ನಿವಾಸ ‘ಬಾಗೆ ರಹ್ಮತ್’ ನಲ್ಲಿ  ಮೃತರ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು ರಾತ್ರಿಯೆ ಶವಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...