ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯಿಂದ ವಸತಿ ನಿಲಯ ಪರಿಶೀಲನೆ

Source: sonews | By sub editor | Published on 8th August 2018, 11:36 PM | State News |

ಶ್ರೀನಿವಾಸಪುರ:  ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿಂದು ರವರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ  ಬೇಟಿ ನೀಡಿ ವಸತಿ ನಿಲಯಗಳು ಹಾಗು ಕಚೇರಿ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿದರು.
    
ಶ್ರೀನಿವಾಸಪುರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಕಛೇರಿಗೆ ಮಂಗಳವಾರ ದಿಡೀರ್ ಬೇಟಿ ನೀಡಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯಾದ  ಸಿಂದು ರವರು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಯಾದ ರಾಜಣ್ಣ ರವರೊಂದಿಗೆ ಕಚೇರಿ ನಿರ್ವಹಣೆ, ಸಿಬ್ಬಂದಿ ಹಾಗು ವಸತಿ ನಿಲಯಗಳಿಗೆ ಸಂಬಂದಿಸಿ ಮಾತುಕತೆ ನಡೆಸಿದರು. 
   
ಅದೇ ರೀತಿ ಕಚೇರಿ ಹಾಜರಾತಿ ಪರಿಶೀಲನೆ ನಡೆಸಿ ಕಚೇರಿಯಲ್ಲಿ ಸಿಬ್ಬಂದಿಗೆ ನೀಡುತ್ತಿರುವ ಗುರ್ತಿನ ಚೀಟಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ವಸತಿ ನಿಲಯಗಳ ಕುರಿತಂತೆ ಮುಂದಿನ ದಿನಗಳಲ್ಲಿ ಬೇಟಿ ಮಾಡುವುದಾಗಿ ತಿಳಿಸಿದರು. ಅಲ್ಲದೇ ಕಚೇರಿ ಮತ್ತು ವಸತಿ ನಿಲಯಗಳ ಮೇಲ್ವಿಚಾರಕರಿಗೆ ಸಮಯ ನಿಗದಿ ಮಾಡಿಕೊಂಡು ಸಭೆ ಕರೆಯಲಾಗುತ್ತದೆಂದು ಮಾತುಕತೆ ವೇಳೆ ಸ್ಪಷ್ಟಪಡಿಸಿದರು.

 
ಇದೇ ವೇಳೆ ಕಚೇರಿಗೆ ಆಗಮಿಸಿದ್ದ ವಸತಿ ನಿಲಯಗಳ ಮೇಲ್ವಿಚಾರಕರೊಂದಿಗೆ ವಸತಿ ನಿಲಯಗಳಲ್ಲಿ ಗುಣಮಟ್ಟ, ಕರ್ತವ್ಯ ಇತ್ಯಾದಿಗಳ ಕುರಿತು ಮಾತುಕತೆ ನಡೆಸಿದರು.
  
ಈ ಸಂದರ್ಭದಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರಾಜಣ್ಣ, ಕಚೇರಿ ಸಿಬ್ಬಂದಿ ಹಾಗು ಇದೇ ವೇಳೆ ದಲಿತ ಮುಖಂಡರಾದ ಸೀತಪ್ಪ ರವರು ಹಾಜರಿದ್ದರು.
 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...