ಮಾವಿನ ಹಣ್ಣಿನ ತಿರಳು ತೆಗೆಯುವ ಕಾರ್ಖಾನೆ ಸ್ಥಾಪನೆಗೆ ಆಗ್ರಹಿಸಿ ಮನವಿ

Source: sonews | By Staff Correspondent | Published on 9th July 2018, 11:46 PM | State News |

ಶ್ರೀನಿವಾಸಪುರ: ಮಾವಿನ ಕಾಯಿಬೆಲೆ ಕುಸಿತದಿಂದ ಬೆಂಬಲ ನೀಡುವುದರ ಜೊತೆ ಮಾವಿನ ಹಣ್ಣಿನ ತಿರಳು ತೆಗೆಯುವ ಕಾರ್ಖಾನೆಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ ಹಲವು ಬೇಡಿಕೆಗಳ ಮನವಿ ಪತ್ರವನ್ನು ಮಾವು ಬೆಳೆಗಾರರ ಹಾಗು ಮಾರಾಟಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ನೀಲಟೂರು ಚಿನ್ನಪ್ಪರೆಡ್ಡಿ ರವರು ಅಪರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರವರಿಗೆ ಸಲ್ಲಿಸಿದರು.

ಮಾವು ಬೆಲೆ ಕುಸಿತದಿಂದ ರೈತರಿಗೆ ಬೆಂಬಲ ಬೆಲೆ ನಿಡುವಂತೆ ಹಾಗು ಮಾವಿನ ಹಣ್ಣಿನ ಜ್ಯೂಸ್ ಪ್ಯಾಕ್ಟರಿಗಳನ್ನು ತೆರೆಯಬೇಕೆಂದು ಒತ್ತಾಯಿಸಿ ಸೋಮವಾರ ಕರೆ ನೀಡಿದ್ದ ತಾಲ್ಲೂಕು ಬಂದ್‍ನಲ್ಲಿ ರೈತರ ಅಹವಾಲು ಸ್ವೀಕರಿಸಲು ಬಂದಿದ್ದ ಸಮಯದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಮಾತನಾಡಿ ಜಿಲ್ಲೆಯಲ್ಲಿ ಶ್ರೀನಿವಾಸಪುರ ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶವಾಗಿದೆ ಇಲ್ಲಿ ಶೇ 80ರಷ್ಟು ರೈತರು ಮಾವು ಬೆಳೆಯನ್ನು ನಂಬಿಕೊಂಡು ಜೀವನ ಮಾಡುತ್ತಿರುತ್ತಾರೆ. ಅದೇ ರೀತಿ ಕುಟುಂಬಗಳ ಮದುವೆ, ಮುಂಜಿ, ಓದು, ಆರೋಗ್ಯ, ಇತ್ಯಾದಿಯಾಗಿ ನಿವಹಣೆಗೆ ಮಾವು ಬೆಳೆ ನಂಬಿ ಸಾಲಗಳನ್ನು ಮಾಡಿದ್ದಾರೆ. ಜೊತೆಗೆ ತೋಟ ನಿರ್ವಹಣೆಗೆ ಸಹ ಸಾಲ ಮಾಡಿರುತ್ತಾರೆ. ಆದರೆ ಪ್ರಸ್ತುತ ಮಾವು ಬೆಲೆ ಕುಸಿತದಿಂದ ರೈತರು ಅತಂತ್ರವಾಗಿದ್ದಾರೆಂದು ವಿಷಾದಿಸಿದರು.
ಇದರ ಸಲುವಾಗಿ ಪ್ರಸ್ತುತ ವರ್ಷದ ಮಾವಿನ ಕಾಯಿಗಳ ಬೆಲೆ ತೀವ್ರ ಕುಸಿತವಾಗಿ ಟನ್ನಿಗೆ 4 ಸಾವಿರ ರೂ ಸಿಗುವಂತಾಗಿದೆ. ಇದರಲ್ಲಿ ತೋಟಗಳಲ್ಲಿ ಕಾಯಿ ಕೀಳಲು, 600 ರೂ ಕೂಲಿ, ಕಾಯಿ ಸಾಗಿಸಲು ಬಾಡಿಗೆ 600 ರೂ, ಕಮೀಷನ್, 400 ರೂ, ಒಟ್ಟು 1600 ರೂ ಖರ್ಚಾಗುತ್ತದೆ ಇದರಲ್ಲಿ 2400 ರೂ ಮಾತ್ರ ಉಳಿಯುತ್ತದೆ ಅದೇ ಈತಿ ಒಮದು ಎಕರೆ ಪ್ರದೇಶದಲ್ಲಿ 4 ಟನ್ ಮಾವು ಬೆಳೆದರೂ ಖರ್ಚುಗಳು ಕಳೆದು 960 ರೂ ರೂ ಮಾತ್ರ ಉಳಿಯುತ್ತದೆ ಎಂದರು.
ಮಾವಿನ ತೋಟದ ನಿರ್ವಹಣೆಗೆ ಒಂದು ಎರೆ ಪ್ರದೇಶದಲ್ಲಿ ಉಳುಮೆ, ಗಿಡಗಂಟಿಗಳನ್ನು ತೆಗೆದು ಸ್ವಚ್ಚಗೊಳಿಸಲು ಗೊಬ್ಬರ, ಔಷದಿ ಸಿಂಪಡಣೆ ಎಲ್ಲಾ ಸೇರಿ ನಿರ್ವಹಣೆ ಮಾಡಲು ಒಂದು ವರ್ಷಕ್ಕೆ ಸುಮಾರು 12 ಸಾವಿರ ರೂ ಖರ್ಚು ಬರುತ್ತದೆ  ಈ ಪ್ರಕಾರ ಒಂದು ಎಕರೆಗೆ 2400 ರೂ ನಷ್ಟವನ್ನು ಅನುಭವಿಸಬೇಕಾಗಿದೆ ಆದ್ದರಿಂದ ಕೂಡಲೇ ತಾವು ಸರ್ಕಾರದ ಗಮನಹರಿಸಿ ಕೂಡಲೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ ರೈತರ ಆತ್ಮಹತ್ಯೆಗಳ ದುರ್ಘಟನೆಗಳನ್ನು ತಪ್ಪಿಸಬೇಕೆಂದು ಅಪರ ಜಿಲ್ಲಾದಿಕಾರಿಗಳಲ್ಲಿ ಮನವಿ ಮಾಡಿದರು.
ಅಲ್ಲದೆ ಪ್ರತಿ ಟನ್ ಮವಿಗೆ ಕನಿಷ್ಟ 4 ಸಾವಿರ ರೂ ಬೆಂಬಲ ನೀಡಿದರೆ ರೈತರು ಸ್ವಲ್ಪಮಟ್ಟಿಗೆ ಪಾರಾಗಬಹುದು. ನೆರೆಯ ಆಂದ್ರಪ್ರದೇಶ ಸರ್ಕಾರ ಅಲ್ಲಿನ ರೈತರಿಗೆ ಜುಲೈ 4ರಿಂದಲೇ ಜಾರಿಗೆ ಬರುವಂತೆ 2500 ರೂ ಬೆಂಬಲ ಬೆಲೆ ಘೋಶಿಸಿದೆ. ಇದಲ್ಲದೇ ಆಂದ್ರದ ಚಿತ್ತೂರು ಜಿಲ್ಲೆಯಲ್ಲಿ ಹೆಚ್ಚು ಹಣ್ಣು ತಿರುಳು ತೆಗೆಯುವ ಕಾರ್ಖಾನೆಗಳಿವೆ. ಅಲ್ಲಿಗೆ ನಮ್ಮ ಮಾವು ಸರಬರಾಜು ಆಗುತ್ತಿತ್ತು ಆದರೆ ಅಲ್ಲಿನ ಜಿಲ್ಲಾಧಿಕಾರಿಗಳು ನಮ್ಮ ಮಾವು ತೆಗೆದುಕೊಳ್ಳದಂತೆ ಆದೇಶ ಮಾಡಿರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.  
ಆದ್ದರಿಂದ ಸರ್ಕಾರ ಕೂಡಲೇ ಮದ್ಯೆ ಪ್ರವೇಶಿಸಿ ಆಂದ್ರ ಪ್ರದೇಶಕ್ಕೆ ಇಲ್ಲಿನ ಮಾವು ಸರಬರಾಜು ಆಗಲು ಹಾಗು ಬೆಂಬಲ ಬೆಲೆ ಬೆಲೆ ನೀಡಲು ಅಲ್ಲದೇ ಶ್ರೀನಿವಾಸಪುರದಲ್ಲಿ ಕನಿಷ್ಟ 5 ಮಾವಿನ ಹಣ್ಣು ತಿರುಳು ತೆಗೆಯುವ ಕಾರ್ಖಾನೆಗಳನ್ನು ತೆಗೆಯಬೇಕೆಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.
 

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ...