'ಶಿರಾಲಿ ಪಂಚಾಯತ್ ಸದಸ್ಯರ ನಿಯೋಗದಿಂದ 45 ಮೀ.ರಸ್ತೆ ಅಗಲೀಕರಣಕ್ಕೆ ಡಿಸಿಗೆ ಮನವಿ

Source: sonews | By Staff Correspondent | Published on 3rd October 2018, 5:46 PM | Coastal News |

ಭಟ್ಕಳ: ಇಲ್ಲಿನ ಶಿರಾಲಿ ರಾಷ್ಟ್ರೀಯ ಹೆದ್ದಾರಿಯ 45 ಮೀ. ರಸ್ತೆ ಅಗಲೀಕರಣದ ವಿಚಾರವಾಗಿ ಶಿರಾಲಿ ಗ್ರಾಮ ಪಂಚಾಯತ್ ಸದಸ್ಯರುಗಳ ನಿಯೋಗವೂ 3ನೇ ಬಾರಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ 45 ಮೀ.ಗೆ ಅಗಲೀಕರಿಸುವಂತೆ ಮನವಿಯನ್ನು ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ ' ಶಿರಾಲಿಯಲ್ಲಿ 10 ರೈತರ ಭೂಮಿ ಕಳೆದುಕೊಂಡಿದ್ದು, 10 ರೈತರ ಪೈಕಿ 8 ಮಂದಿ 45 ಮೀ. ರಸ್ತೆ ಅಗಲೀಕಣಕ್ಕೆ ಒಪ್ಪಿಗೆ ನೀಡಿದ್ದು, ಇನ್ನುಳಿದ ಇಬ್ಬರು ರೈತರು (ಭೂ ಮಾಲೀಕರು) ಒಪ್ಪಿಗೆ ನೀಡಿದರೆ 45 ಮೀ. ರಸ್ತೆ ಅಗಲೀಕಣಕ್ಕೆ ನಾನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಗ್ರಾಮ ಪಂಚಾಯತ ಸದಸ್ಯರ ನಿಯೋಗಕ್ಕೆ ತಿಳಿಸಿದರು.

ಈ ಬಗ್ಗೆ ಸ್ಥಳಿಯ ಸಾಮಾಜಿಕ ಹೋರಾಟಗಾರ,ಪತ್ರಕರ್ತ ಉಲ್ಲಾಸ ಶ್ಯಾನಭಾಗ ಜಿಲ್ಲಾಧಿಕಾರಿಗಳಿಗೆ ಕೇವಲ ಎರಡು ಭೂಮಾಲೀಕರಿಂದ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕೆ ತೊಂದರೆ ಉಂಟಾಗಿದ್ದು, ಅವರಿಗೆ ನಾವು ಶಿರಾಲಿ ಜನತೆ ಹಾಗೂ ಪಂಚಾಯತ ವತಿಯಿಂದ ಇನ್ನೊಮ್ಮೆ ಅವರಿಗೆ ಮನವೊಲಿಸುವ ಪ್ರಯತ್ನಿಸಲಾಗುವುದು ಎಂದು ಮನವಿ ಮಾಡಿಕೊಂಡರು. ಈಗಾಗಲೇ ಅವಧಿ ಮೀರಿರುವುದರಿಂದ ತಕ್ಷಣವೇ ಎರಡು ಭೂಮಾಲೀಕರ ಒಪ್ಪಿಗೆ ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನಂತರದಲ್ಲಿ ಗ್ರಾ.ಪಂಚಾಯತ ಪರವಾಗಿ ಮೋಹನ ದೇವಾಡಿಗ 'ಶಿರಾಲಿಯಲ್ಲಿ ನಡೆಯುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ನೀಲನಕ್ಷೆಯನ್ನು ತಕ್ಷಣ ಗ್ರಾಮಪಂಚಾಯತಗೆ ತಲುಪಿಸುವಂತೆ ಮನವಿ ಮಾಡಿಕೊಂಡರು.

ಈ ಸಂಧರ್ಭದಲ್ಲಿ ಗ್ರಾ.ಪಂ.ಸದಸ್ಯ ನಾಗಪ್ಪ ನಾಯ್ಕ, ಮಂಜುನಾಥ ನಾಯ್ಕ,ಕೇಶವ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. 


 
 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...