ಸಾಮಾಜಿಕ ತಾಣಗಳಲ್ಲಿ ಬಡ ಹಿಂದೂ ಹುಡುಗಿಯರ ಮಾನ ಹರಾಜು ಮಾಡುತ್ತಿರುವ ವಿಕೃತ ಕಾಮಿಗಳು

Source: sonews | By Sub Editor | Published on 11th March 2018, 6:19 PM | Coastal News | State News | Special Report | Don't Miss |

ಓರ್ವನ ಬಂಧನ, ಪೊಲೀಸರಿಂದ ಕಠಿಣ ಕ್ರಮಕ್ಕೆ ನೊಟೀಸ್ ಜಾರಿ

ಲೌ ಜಿಹಾದ್ ಎಂದು ಸಾಮಾಜಿಕ ತಾಣದಲ್ಲಿ ವೈರಲ್ ಮಾಡುತ್ತಿರುವ ದೇಶದ್ರೋಹಿಗಳು

ಭಟ್ಕಳ: ತಾಲೂಕಿನ ಪ್ರತಿಷ್ಠಿತ ಕಾಲೇಜೊಂದರ ಹಿಂದೂ-ಮುಸ್ಲಿಮ್ ಸಹಪಾಠಿಗಳ ಸೆಲ್ಫಿ ಫೋಟೊಗಳನ್ನು ಬಳಸಿ ಅಶ್ಲೀಲ ಫೋಟೊಗಳನ್ನು ಸೃಷ್ಟಿಸಿ ಲೌ ಜಿಹಾದ್ ಎಂದು ಬಿಂಬಿಸಿ ಕೋಮು ವೈಷಮ್ಯ ಹರಡಿ ದ್ರೇಶದ್ರೋಹಿ, ಸಮಾಜದ್ರೋಹಿ ಕೃತ್ಯ ಎಸಗುತ್ತಿರುವ ಓರ್ವನನ್ನು ಬಂಧಿಸಿದ ಜಿಲ್ಲಾ ಪೊಲೀಸ್ ವಿಶೇಷ ತಂಡ ಈ ಪ್ರಕರಣದಲ್ಲಿ  ಹಲವು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹಿಂದುಳಿದ ಬಡ ಕುಟುಂಬಕ್ಕೆ ಸೇರಿದ ಇಬ್ಬರು ಯುವತಿಯರ ಸೆಲ್ಫಿ ಫೋಟೊವನ್ನು ಬಳಸಿಕೊಂಡಿರುವ ಮನೋ ವಿಕೃತರು ಅದನ್ನು ಅಶ್ಲೀಲ ಫೋಟೊಗಳೊಂದಿಗೆ ಜೋಡಿಸಿದ್ದಲ್ಲದೆ ಸಾಮಾಜಿಕ ಜಾಲಾತಾಣಗಳಲ್ಲಿ ಹರಿಯಬಿಟ್ಟಿದ್ದು ಪ್ರತಿಷ್ಠಿತ ಕಾಲೇಜೊಂದರ ಹೆಸರನ್ನು ಬಳಸಿಕೊಂಡು ಅಲ್ಲಿ ಓದುತ್ತಿರುವ ಹಿಂದು ವಿದ್ಯಾರ್ಥಿನಿಯರೊಂದಿಗೆ ಮುಸ್ಲಿಮ್ ವಿದ್ಯಾರ್ಥಿಗಳು ಲೌ ಜಿಹಾದ್ ನಡೆಸುತ್ತಿದ್ದಾರೆ ಇದರಿಂದಾಗಿ  ಹಿಂದೂ ಧರ್ಮ ಅಪಾಯದಲ್ಲಿದೆ ಎನ್ನುವಂತಹ ಬರಹಗಳನ್ನು ಉದ್ರಿಕ್ತ ಶೀರ್ಷಿಕೆಯೊಂದಿಗೆ ಜಾಲಾ ತಾಣಗಳಲ್ಲಿ ಹರಿದು ಬಿಡುತ್ತಿದ್ದು ಭಟ್ಕಳ ಪರಿಸರದಲ್ಲಿ ಕೋಮು ಗಲಭೆಯನ್ನು ಸೃಷ್ಟಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಬಡ ವಿದ್ಯಾರ್ಥಿನೀಯರು ಉನ್ನತ ವಿದ್ಯಾಭ್ಯಾಸಕ್ಕಾಗಿ ಹರಸಹಾಸ ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಸಮಾಜ ಘಾತುಕ ವಿಕೃತ ಮನೋಕಾಮಿಗಳು ಬಡ ಹಿಂದೂ ವಿದ್ಯಾರ್ಥಿನೀಯರನ್ನು ಗುರಿಯಾಗಿಸಿಕೊಂಡು ಅವರ ಮಾನ ಹರಣಕ್ಕೆ ಮುಂದಾಗಿದ್ದು ಇದರಿಂದಾಗಿ ವಿದ್ಯಾರ್ಥಿನೀಯರ ಭವಿಷ್ಯ ತೂಗುಗತ್ತಿಯಲ್ಲಿ ಅಲಗಿನ ಮುಂದೆ ಹೆಣಗಾಡುವಂತಾಗಿದೆ. ಹೆಣ್ಣನ್ನು ಕೇವಲ ಭೋಗದ ವಸ್ತುವನ್ನಾಗಿ ಬಳಸಿಕೊಳ್ಳುತ್ತಿರುವ ವಿಕೃತ ಕಾಮಿಗಳನ್ನು ಅವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಹೆತ್ತವರು ತಮ್ಮ ಮಾನ ಕಳೆದುಕೊಂಡು ನೇಣಿಗೆ ಶರಣಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ರಾಜಕೀಯ ನಾಯಕರ ಕುರಿತಂತೆ ವಾಟ್ಸಪ್ ನಲ್ಲಿ ಮಾನಹಾನಿಕರ ರೀತಿಯಲ್ಲಿ ಸಂದೇಶ ಹರಿಯಬಿಡುತ್ತಿದ್ದ ಸಮಾಜಘಾತುಕರು ಈದೀಗ ತಮ್ಮ ಊರಿನ ಹೆಣ್ಣುಮಕ್ಕಳ ಮಾನ ಹರಾಜಿಗೂ ಮುಂದಾಗಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ುರಿತಂತೆ ಅಮಾಯಕ ಬಡ ಹಿಂದೂ ವಿದ್ಯಾರ್ಥಿನೀಯರ ಪಾಲಕರು  ಹಾಗೂ ಮುರುಡೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು  ಪೊಲೀಸರಿಗೆ ದೂರನ್ನು ನೀಡಿದ್ದು ಈ ಹಿನ್ನೆಯಲ್ಲಿ

ಆರೋಪಿತ ವಿರುದ್ಧ ಗುನ್ನಾ ನಂ ೬೭/೨೦೧೮ ಕಲಂ:೧೫೩(ಎ), ೫೦೫(೨), ೨೯೨ ಐಪಿಸಿ-೧೮೬೦, ಕಲಂ ೪ ಮತ್ತು ೬ ಮಹಿಳೆಯರನ್ನು ಅಶ್ಲೀಲವಾಗಿ ಭಿತ್ತರಿಸುವುದನ್ನು ನಿರ್ಭಂಧಿಸುವ ಅಧಿನಿಯಮ-೧೯೮೬, ಕಲಂ ೬೭ ಮತ್ತು ೬೭(ಎ) ಮಾಹಿತಿ ತಂತ್ರಜ್ಞಾನ ಕಾಯ್ದೆ-೨೦೦೦ ಕಲಂ ೨೦, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಪೋಸ್ಕೊ ೨೦೧೨ ಅಡಿಯಲ್ಲಿ ಆರೋಪಿತರಾದ ಯೋಗೇಶ, ತಿರು, ಹೇಮಂತ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಯೋಗೇಶ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಎಲ್ಲರನ್ನೂ ಬಂಧಿಸಲಾಗುವುದು-ಎಸ್.ಪಿ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ , ಇಂಹತ ಕುಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲರನ್ನೂ ಬಂಧಿಸಿ ಜೈಲಿಗಟ್ಟಲಾಗುವುದು. ಯಾರು ಕೂಡ ಇಂತಹ ಸಂದೇಶಗಳನ್ನು ಲೈಕ್ ಮಾಡುವುದಾಗಲಿ, ಫಾರ್ವರ್ಡ್ ಮಾಡುವುದಾಗಲಿ ಮಾಡಕೂಡದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಕುರಿತಂತೆ ಉತ್ತರಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯೊಂದನ್ನು ನೀಡಿದ್ದು ಅದರ ಯಥಾ ಪ್ರತಿ ಈ ರೀತಿಯಾಗಿದೆ.

 

ಪೊಲೀಸ್_ಪ್ರಕಟಣೆ_ಉತ್ತರ_ಕನ್ನಡ

ಕಳೆದ 2 ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಂಬಂದ ಪಡದ ಬೇರೆ ಯಾವುದೋ ಅಪರಿಚಿತ ಯುವಕ ಯುವತಿಯರ ಅಶ್ಲೀಲ ಚಿತ್ರಗಳನ್ನು ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಂಬಂಧ ಪಟ್ಟಿದ್ದೆಂದು ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಭಿತ್ತರಿಸುತ್ತಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳ ನೈಜ ಚಿತ್ರಗಳೊಂದಿಗೆ ಅವರಿಗೆ ಸಂಬಂಧಪಡದ ಅಶ್ಲೀಲ ಚಿತ್ರಗಳನ್ನು ಸೇರಿಸಿ, ಅಶ್ಲೀಲ ಚಿತ್ರಗಳು ವಿದ್ಯಾರ್ಥಿಗಳಿಗೆ ಸಂಬಂಧ ಪಟ್ಟಿದ್ದೆಂದು ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಜಿಲ್ಲೆಯಾದ್ಯಂತ ಕೋಮು ಪ್ರಚೋದಕ ಭಾವನೆಯನ್ನು ಕೆಲವು ಕಿಡಿಗೇಡಿಗಳು ಸೃಷ್ಟಿಸುತ್ತಿರುವದಾಗಿ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿರುತ್ತದೆ.

ಈಗಾಗಲೇ ಕಳೆದ 4 ತಿಂಗಳಿನಿಂದ ಜಿಲ್ಲೆಯಲ್ಲಿ ಅಪರಾಧ ಪ್ರವೃತ್ತಿಯ ಕಿಡಿಗೇಡಿಗಳು ಕೋಮು ದ್ವೇಷವನ್ನು ಉಲ್ಬಣಗೊಳಿಸುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತಿರಿಸಿದ್ದು ಇದರಿಂದ ಕಾನೂನು ಸುವ್ಯಸ್ಥೆಗೆ ತೊಂದರೆ ಉಂಟಾಗಿದ್ದು ನಿಟ್ಟಿನಲ್ಲಿ ರೀತಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಂಡು ಸುಳ್ಳು ಸಂದೇಶಗಳನ್ನು ಭಿತ್ತರಿಸಿದ ಅಪರಾಧಿಗಳ ವಿರುದ್ದ ಕಳೆದ 4 ತಿಂಗಳಿನಲ್ಲಿ 80ಕ್ಕಿಂತಲೂ ಹೆಚ್ಚಿನ ಅಪರಾಧ ಪ್ರಕರಣಗಳನ್ನು ದಾಖಲಾಗಿರುತ್ತದೆ. ಹೀಗೆ ದಾಖಲಿಸಿದ ಪ್ರಕರಣಗಳಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು ಕೆಲವು ಅಪರಾಧಿಗಳು ಈಗಲೂ ಸಹ ನ್ಯಾಯಾಂಗ ಬಂಧನದಲ್ಲಿಯೇ ಇರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಚಿತ್ರಗಳನ್ನು ಭಿತ್ತರುವುದು, ಶೇರ್ ಮಾಡುವುದು, ಅಥವಾ ಒಪ್ಪಿಗೆ ಸೂಚಿಸುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತಿದ್ದು ಮುಖ್ಯವಾಗಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಭಿತ್ತರಿಸುವುದು ಭಾರೀ ಪ್ರಮಾಣದ ಅಪರಾಧವಾಗಿರುತ್ತದೆ. ಹಾಗೂ ವಿವಿಧ ಕೋಮುಗಳ ಮಧ್ಯೆ ದ್ವೇಷಮಯ ವಾತಾವರಣ ಸೃಷ್ಟಿ ಆಗುವಂತಹ ಯಾವುದೇ ವರ್ತಮಾನವನ್ನು ಪ್ರಚಾರ ಮಾಡುವುದು ಸಹ ಅಪರಾಧವಾಗಿರುತ್ತದೆ. ಕುರಿತಾಗಿ ಕೆಳಕಂಡ ಕಾನೂನಿನ ಅಡಿಯಲ್ಲಿ ಅಪರಾಧವಾಗಿರುತ್ತದೆ.

1) ಭಾರತೀಯ ದಂಡ ಸಂಹಿತೆ (Indian Penal Code-1860)

2) ಮಹಿಳೆಯರನ್ನು ಅಶ್ಲೀಲವಾಗಿ ಭಿತ್ತರಿಸುವುದನ್ನು ನಿರ್ಭಂಧಿಸುವ ಅಧಿನಿಯಮ-1986 (Indecent Representation of Women (Prohibition) Act-1986,

3) ಮಾಹಿತಿ ತಂತ್ರಜ್ಞಾನ ಕಾಯ್ದೆ (Information Technology Act-2000)

ಇನ್ನು ಮುಂದೆ ಯಾರೇ ವಿವಿಧ ಮತ, ಧರ್ಮಗಳ ಮಧ್ಯೆ ಕೋಮು ಸಂಘರ್ಷ ಎರ್ಪಡಬಹುದಾದ ವರ್ತಮಾನವನ್ನು ಅಥವಾ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರಿಸುವವರ ವಿರುದ್ದ ಕಟ್ಟುನಿಟ್ಟಿನ ಕಾನೂನಿನ ಕ್ರಮವನ್ನು ಜರುಗಿಸಲಾಗುವುದು ಎಂಬುದಾಗಿ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ಹಾಗೂ ಒಂದೊಮ್ಮೆ ಯಾರಾದರೂ ರೀತಿ ಪ್ರಸರಣ ಮಾಡಿದ್ದಲ್ಲಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ವಾಟ್ಸಪ್ ನಂ. 9480805200 ನೇದಕ್ಕೆ ಸಾರ್ವಜನಿಕರು ಮಾಹಿತಿಯನ್ನು ನೀಡಬೇಕಾಗಿ ವಿನಂತಿ.

 

Read These Next

ಮೊಗೇರ್ ಸಮಾಜಕ್ಕೆ ಪ.ಜಾ. ಸಿಂಧುತ್ವ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಭಟ್ಕಳ; ಪರಿಶಿಷ್ಟ ಜಾತಿ ಸಿಂಧುತ್ವ ಪ್ರಮಾಣ ಪತ್ರಕ್ಕೆ ಒತ್ತಾಯಿಸಿ ಭಟ್ಕಳದಲ್ಲಿ ಸೋಮವಾರ ಮೊಗೇರ್ ಸಮಾಜದವರು ಬೃಹತ್ ಪ್ರತಿಭಟನಾ ...

ಉತ್ತರ ಕನ್ನಡ ಜಿಲ್ಲಾ ದೇವಡಿಗ sಸಮಾಜ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಭಟ್ಕಳ :  ದೇವಡಿಗ ಸಮಾಜದಲ್ಲಿ ಪ್ರತಿಭಾವಂತರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಮಾರ್ಗದರ್ಶನ, ಪ್ರೋತ್ಸಾಹ ಅಗತ್ಯವಾಗಿದೆ. ...

ಮುರುಡೇಶ್ವರದಲ್ಲಿ ಬೀಚ್ ಸ್ವಚ್ಛತಾ ಕಾರ್ಯಕ್ರಮಕ್ಕೆ  ಜಿಲ್ಲಾ ಪಂಚಾಯತ ಸಿಎಸ್ ಮಹ್ಮದ್ ರೋಷನ್ ಚಾಲನೆ

ಭಟ್ಕಳ: ಜಿಲ್ಲಾ ಪಂಚಾಯತ ಉತ್ತರಕನ್ನಡ, ತಾಲೂಕು ಪಂಚಾಯತ ಭಟ್ಕಳ, ಗ್ರಾಪಂ ಮಾವಳ್ಳಿ 1 ಹಾಗೂ ಮಾವಳ್ಳಿ2ರ ಸಹಭಾಗಿತ್ವದಲ್ಲಿ ಸ್ವಚ್ಛ ...

ಮೊಗೇರ್ ಸಮಾಜಕ್ಕೆ ಪ.ಜಾ. ಸಿಂಧುತ್ವ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಭಟ್ಕಳ; ಪರಿಶಿಷ್ಟ ಜಾತಿ ಸಿಂಧುತ್ವ ಪ್ರಮಾಣ ಪತ್ರಕ್ಕೆ ಒತ್ತಾಯಿಸಿ ಭಟ್ಕಳದಲ್ಲಿ ಸೋಮವಾರ ಮೊಗೇರ್ ಸಮಾಜದವರು ಬೃಹತ್ ಪ್ರತಿಭಟನಾ ...

ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸ್ವಂತ ಕಟ್ಟಡ:ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಹುಬ್ಬಳ್ಳಿ:ರಾಜ್ಯದಲ್ಲಿ ೨೩೦ ರಿಂದ ೨೪೦ ವಿವಿಧ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ೧೩ ರಿಂದ ೧೪ ನ್ಯಾಯಾಲಯಗಳು ...

ಮಾತೃಭೂಮಿ ಹಾಗೂ ಮಾತೃಭಾಷೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ:ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ

ಹುಬ್ಬಳ್ಳಿ:ಮಾತೃಭಾಷೆ ಮತ್ತು ಮಾತೃಭೂಮಿಗಿಂತ ಮಿಗಿಲಾದದ್ದು ಯಾವುದೂ ಇಲ್ಲಾ, ರಾಮಾಯಣ ಮಹಾಕಾವ್ಯದಲ್ಲಿ ರಾಮನು “ಜನನೀ ಜನ್ಮ ...

ಕೇರಳ ಜಮಾಅತೆ ಇಸ್ಲಾಮಿ IRF ರಿಲೀಫ್ ವಿಂಗ್ ಘಟಕದಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ

ಕೇರಳ: ಜಮಾಅತೆ ಇಸ್ಲಾಮಿ ಹಿಂದ್ ಕೇರಳ ಘಟಕದ ಸಂತೃಸ್ಥ ಪರಿಹಾರ ಘಟಕ IRF ರಿಲೀಫ್ ವಿಂಗ್ ಜಿಐಎಚ್ ಕೇರಳದ ಸ್ವಯಂ ಸೇವಕರು ಪ್ರವಾಹ ಪೀಡಿತ ...

ಎರಡು ತಿಂಗಳಾದರೂ ವಿದ್ಯಾರ್ಥಿಗಳ ಕೈ ಸೇರದ ಪಠ್ಯಪುಸ್ತಕ; ವಿದ್ಯಾರ್ಥಿ ಪಾಲಕರಲ್ಲಿ ಆತಂಕ

ಭಟ್ಕಳ: ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಇದುವರೆಗೂ ರಾಜ್ಯದ 559 ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಉರ್ದು ಮಾಧ್ಯಮ ...

ಮೊಗೇರ್ ಸಮಾಜಕ್ಕೆ ಪ.ಜಾ. ಸಿಂಧುತ್ವ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಭಟ್ಕಳ; ಪರಿಶಿಷ್ಟ ಜಾತಿ ಸಿಂಧುತ್ವ ಪ್ರಮಾಣ ಪತ್ರಕ್ಕೆ ಒತ್ತಾಯಿಸಿ ಭಟ್ಕಳದಲ್ಲಿ ಸೋಮವಾರ ಮೊಗೇರ್ ಸಮಾಜದವರು ಬೃಹತ್ ಪ್ರತಿಭಟನಾ ...

ಉತ್ತರ ಕನ್ನಡ ಜಿಲ್ಲಾ ದೇವಡಿಗ sಸಮಾಜ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಭಟ್ಕಳ :  ದೇವಡಿಗ ಸಮಾಜದಲ್ಲಿ ಪ್ರತಿಭಾವಂತರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಮಾರ್ಗದರ್ಶನ, ಪ್ರೋತ್ಸಾಹ ಅಗತ್ಯವಾಗಿದೆ. ...